ಮುಖ್ಯ ಸುದ್ದಿ
VV Sagara: ವೇದಾವತಿ ಜೊತೆಗೆ ನೇತ್ರಾವತಿ ಸಮಾಗಮ | ಎತ್ತಿನಹೊಳೆ ನೀರು ವಿವಿ ಸಾಗರಕ್ಕೆ | ಈ ವರ್ಷವೂ ಮಾರಿಕಣಿವೆ ಕೋಡಿ ಪಕ್ಕಾ
CHITRADURGA NEWS | 07 AUGUST 2024
ಚಿತ್ರದುರ್ಗ: ನೀರಿನ ವಿಚಾರದಲ್ಲಿ ಚಿತ್ರದುರ್ಗ ಜಿಲ್ಲೆಗೆ ಶುಕ್ರದೆಸೆ ಪ್ರಾರಂಭವಾಗಿದೆ. ಒಂದು ಕಾಲಕ್ಕೆ ವಿವಿ ಸಾಗರ ಡೆಡ್ ಸ್ಟೋರೇಜ್ ತಲುಪಿದೆ. ಅಲ್ಲಿಂದ ನೀರು ತೆಗೆಯಬೇಡಿ ಎಂದು ಹಿರಿಯೂರು ಬಂದ್ ಮಾಡಲಾಗಿತ್ತು.
ಆದರೆ, ಈಗ ಬರುತ್ತಿರುವ ನೀರು ನೋಡಿದರೆ ವಿವಿ ಸಾಗರ ಈ ವರ್ಷ ಕೂಡಾ ಭರ್ತಿಯಾಗಿ ಕೋಡಿ ಬೀಳುವುದರಲ್ಲಿ ಅನುಮಾನವೇ ಇಲ್ಲ ಎನ್ನುವ ಲೆಕ್ಕಾಚಾರ ಕಾಣುತ್ತಿದೆ.
ಕ್ಲಿಕ್ ಮಾಡಿ ಓದಿ: ಹೊಸದುರ್ಗ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ಸದ್ಯ ವಾಣಿವಿಲಾಸ ಸಾಗರ ಜಲಾಶಯದಲ್ಲಿ 114 ಅಡಿ ನೀರಿದೆ. 16 ಟಿಎಂಸಿ ನೀರಿದೆ. ಈ ನಡುವೆ ಭದ್ರಾ ಜಲಾಶಯ ಭರ್ತಿಯಾಗಿದ್ದು, ಅಲ್ಲಿಂದಲೂ ಮುಂದಿನ ಮೂರು ತಿಂಗಳ ಕಾಲ ಪ್ರತಿ ದಿನ 700 ಕ್ಯೂಸೆಕ್ ನೀರು ಹರಿಸಲು ತೀರ್ಮಾನಿಸಲಾಗಿದೆ.
ಭದ್ರಾ ಜಲಾಶಯದಿಂದಲೇ ಪ್ರತಿ ದಿನ 700 ಕ್ಯೂಸೆಕ್ ನೀರು ಹರಿದರೆ ವಿವಿ ಸಾಗರಕ್ಕೆ 5 ರಿಂದ 6 ಟಿಎಂಸಿ ನೀರು ಹರಿದು ಬರಲಿದೆ. ಚಿತ್ರದುರ್ಗ ಜಿಲ್ಲೆಗೆ ಭದ್ರಾ ಜಲಾಶಯದಿಂದ 12 ಟಿಎಂಸಿ ಹಂಚಿಕೆಯಾಗಿದ್ದು, ಭರ್ತಿಯಾಗಿರುವುದರಿಂದ ಅಷ್ಟೂ ನೀರನ್ನೂ ಬಿಡಲು ಮುಂದೆ ಒತ್ತಡ ಸೃಷ್ಟಿಯಾಗಬಹುದು.
ಕ್ಲಿಕ್ ಮಾಡಿ ಓದಿ: ಸಿರಿಗೆರೆ ತರಳಬಾಳು ಮಠಕ್ಕೆ ಬೈಲಾ ಇಲ್ಲ | ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಅಥವಾ ಮುಂದೆ ಹಿಂಗಾರು ಮಳೆಗಳು ಉತ್ತಮವಾಗಿ ಸುರಿಯುವ ಸಾಧ್ಯತೆ ಇರುವುದರಿಂದ ಮಳೆಯ ನೀರಿನಿಂದಲೇ ಜಲಾಶಯ ಭರ್ತಿಯಾಗಬಹುದಾದ ಸಾಧ್ಯತೆಗಳಿವೆ.
ಎತ್ತಿನಹೊಳೆಯಿಂದ ಹರಿದು ಬರಲಿದೆ ನೀರು:
ಇದೆಲ್ಲಾ ಒಂದು ಕಡೆಯಾದರೆ, ಬಯಸದೆ ಬಂದ ಭಾಗ್ಯ ಎಂಬAತೆ ನೇತ್ರಾವತಿ ನದಿಯಿಂದ ಬಯಲು ಸೀಮೆಗೆ ನೀರು ಹರಿಸುವ ಮತ್ತೊಂದು ಯೋಜನೆ ರಾಜ್ಯದಲ್ಲಿ ಜಾರಿಯಲ್ಲಿದೆ.
ಕ್ಲಿಕ್ ಮಾಡಿ ಓದಿ: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ | ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಈ ಯೋಜನೆ ವ್ಯಾಪ್ತಿಯಲ್ಲಿ ಚಿತ್ರದುರ್ಗ ಜಿಲ್ಲೆ ಸೇರಿಲ್ಲ. ಆದರೆ, ಎತ್ತಿನಹೊಳೆ ನೀರು ಅನಾಯಸವಾಗಿ ಜಿಲ್ಲೆಗೆ ಹರಿಯುವ ಸಾಧ್ಯತೆಗಳು ದಟ್ಟವಾಗಿವೆ.
ಸಕಲೇಶಪುರ ಬಳಿಯಿಂದ ಪೈಪ್‌ಲೈನ್ ಮೂಲಕ 98 ಕಿ.ಮೀ ಹರಿದು ಬರುವ ನೀರು, ಅಲ್ಲಿಂದ ಬೇಲೂರು, ಅರಸಿಕೆರೆ, ತಿಪಟೂರು ಮೂಲಕ ತುಮಕೂರಿಗೆ ತೆರೆದ ನಾಲೆಯ ಮೂಲಕ 270 ಕಿ.ಮೀ ಹರಿದು ಬರಬೇಕು. ಆದರೆ, ಅರಸಿಕೆರೆ ಸೇರಿದಂತೆ ಹಲವೆಡೆ ಇನ್ನೂ ನಾಲೆ ಕಾಮಗಾರಿ ಮುಗಿಯದ ಕಾರಣ ಪ್ರಾಯೋಗಿಕವಾಗಿ ಹರಿಸುವ ನೀರನ್ನು ಫಲಾನುಭವಿ ಅಲ್ಲದಿದ್ದರರೂ ಚಿತ್ರದುರ್ಗ ಜಿಲ್ಲೆಯ ವಿವಿ ಸಾಗರಕ್ಕೆ ಹರಿಸುವ ಯೋಜನೆ ರೂಪುಗೊಂಡಿದೆ.
ಕ್ಲಿಕ್ ಮಾಡಿ ಓದಿ: ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ
ಎತ್ತಿನಹೊಳೆ ಯೋಜನೆಯಿಂದ ವಿವಿ ಸಾಗರಕ್ಕೆ 10 ರಿಂದ 12 ಟಿಎಂಸಿ ನೀರು ಹರಿದು ಬರುವ ಸಾಧ್ಯತೆಗಳಿವೆ.
ಈ ಮೂಲಕ ವೇದಾವತಿ ಜೊತೆಗೆ ನೇತ್ರಾವತಿಯ ಸಮಾಗಮ ಆಗುವ ಅಪರೂಪದ ಸಂದರ್ಭಕ್ಕೆ ಈ ವರ್ಷ ವಿವಿ ಸಾಗರ ಸಾಕ್ಷಿಯಾಗಲಿದೆ.