Connect with us

    ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವ ವೈಭವ | ಮನೆ ಮಾಡಿದ ಸಂಭ್ರಮ | ಒಳಮಠ, ಹೊರಮಠದಲ್ಲಿ ಭಕ್ತರ ದಂಡು

    ಮುಖ್ಯ ಸುದ್ದಿ

    ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವ ವೈಭವ | ಮನೆ ಮಾಡಿದ ಸಂಭ್ರಮ | ಒಳಮಠ, ಹೊರಮಠದಲ್ಲಿ ಭಕ್ತರ ದಂಡು

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 26 MARCH 2024
    ಚಿತ್ರದುರ್ಗ: ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯ ದೊಡ್ಡ ರಥೋತ್ಸವ ಚಾಲನೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಸಂಪ್ರದಾಯಂತೆ ಬೆಳಿಗ್ಗೆ ಭಕ್ತರು ನಂದಿ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ಬಣ್ಣದ ಬಾವುಟಗಳಿಂದ ಅಲಂಕೃತಗೊಂಡಿರುವ ರಥಕ್ಕೆ ಭಕ್ತರು ಬೃಹತ್‌ ಹೂವಿನ ಹಾರಗಳನ್ನು ಸಮರ್ಪಿಸಿದರು. ಸಾಲು ಸಾಲಾಗಿ ಸಾಗಿದ ಹೂವಿನ ಹಾರದ ಮೆರವಣಿಗೆಯನ್ನು ಜನರು ಕಣ್ತುಂಬಿಕೊಂಡರು.

    ಸಕಲ ದಿಕ್ಕುಗಳಿಂದ ಜನರು ನಾಯಕನಹಟ್ಟಿಗೆ ಆಗಮಿಸುತ್ತಿದ್ದು, ಕ್ಷಣದಿಂದ ಕ್ಷಣಕ್ಕೆ ಭಕ್ತರ ಸಂಖ್ಯೆ ಏರಿಕೆ ಕಾಣುತ್ತಿದೆ. ಒಳಮಠ, ಹೊರಮಠದಲ್ಲಿ ಸ್ವಾಮಿ ದರ್ಶನಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಭಕ್ತರು ಬಿಸಿಲಿಗೆ ಸವಾಲ್‌ ಹಾಕಿ ಜಾತ್ರೆಗೆ ಜಮಾಯಿಸುತ್ತಿದ್ದಾರೆ.

    ಕ್ಲಿಕ್ ಮಾಡಿ ಓದಿ: ನಾಯಕನಹಟ್ಟಿಯಲ್ಲಿ ಪೀಪಿ ಊದಿದರೆ ಹುಷಾರ್‌ | ನಿಮ್ಮ ನಡುವೆಯೇ ಇರ್ತಾರೆ ಪೊಲೀಸ್‌

    ಭಕ್ತರಿಗೆ ಕುಡಿಯುವ ನೀರು, ಮಜ್ಜಿಗೆ, ಪ್ರಸಾದ ವಿತರಣೆ ಸಹ ನಡೆಯುತ್ತಿದೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಫ್ಲೇಕ್ಸ್‌ ಹಾವಳಿಗೆ ಕೊಂಚ ಕಡಿವಾಣ ಬಿದ್ದಿದೆ. ದೇವಸ್ಥಾನಕ್ಕೆ ಆಗಮಿಸುತ್ತಿರುವ ಭಕ್ತರು ಕೊಬ್ಬರಿ ಸುಟ್ಟು ಭಕ್ತಿ ಸಮರ್ಪಣೆ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

    ಪಲ್ಲಕ್ಕಿಯಲ್ಲಿ ಸ್ವಾಮಿ ರಥದತ್ತ ಆಗಮಿಸಿ ದೊಡ್ಡ ರಥದಲ್ಲಿ ವಿರಾಜಮಾನವಾಗುತ್ತಿದ್ದಂತೆ ಸಂಪ್ರದಾಯದಂತೆ ಮುಕ್ತಿ ಬಾವುಟ ಹರಾಜು ನಡೆಯಲಿದೆ. ಬಳಿಕ ಮಹಾಮಂಗಳಾರತಿ ನೆರವೇರಿಸಿ ರಥೋತ್ಸವಕ್ಕೆ ಮಧ್ಯಾಹ್ನ 3ಗಂಟೆಗೆ ಚಾಲನೆ ನೀಡಲಾಗುತ್ತದೆ.

    ಕ್ಲಿಕ್ ಮಾಡಿ ಓದಿ: 150 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಣೆ | ಖಚಿತ ಮಾಹಿತಿ ಆಧರಿಸಿ ಪೊಲೀಸರ ಕಾರ್ಯಾಚರಣೆ

    ಬಿಸಿಲಿನ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎರಡೂ ದೇವಾಲಯಗಳ ಆವರಣದಲ್ಲಿ ಬೃಹತ್ ಚಪ್ಪರದ ವ್ಯವಸ್ಥೆ ಮಾಡಲಾಗಿದೆ. ಚಿತ್ರದುರ್ಗ, ಚಳ್ಳಕೆರೆ, ಜಗಳೂರು, ಭರಮಸಾಗರ, ದಾವಣಗೆರೆ, ಕೊಟ್ಟೂರು, ಆಂಧ್ರಪ್ರದೇಶದ ಕಲ್ಯಾಣದುರ್ಗ, ರಾಯದುರ್ಗ, ಅನಂತಪುರ ಹಾಗೂ ರಾಜ್ಯದ ಮೂಲೆ ಮೂಲೆಯಿಂದ ಭಕ್ತಾಧಿಗಳು ಆಗಮಿಸುತ್ತಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top