ಮುಖ್ಯ ಸುದ್ದಿ
ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಟೂರ್ನಿ | ಕರ್ನಾಟಕ ತಂಡಕ್ಕೆ ಕೊಟೆನಾಡಿನ ಯುವತಿಯರು ಆಯ್ಕೆ
CHITRADURGA NEWS | 05 MARCH 2024
ಚಿತ್ರದುರ್ಗ: ಉತ್ತರ ಪ್ರದೇಶದ ಸಾನ್ವಿಯಲ್ಲಿ ನಡೆಯಲಿರುವ 52ನೇ ಸೀನಿಯರ್ ಮಹಿಳಾ ವಿಭಾಗದ ರಾಷ್ಟ್ರೀಯ ಹ್ಯಾಂಡ್ ಬಾಲ್ ಪಂದ್ಯಾವಳಿಗೆ ಚಿತ್ರದುರ್ಗದ ಬಿಟ್ಸ್ ಕಾಲೇಜಿನ ಎಸ್.ಪೂಜಾ, ಪದ್ಮಾವತಿ, ನರ್ಸಿಂಗ್ ಕಾಲೇಜಿನ ಪಿ.ಬಿಂದುಶ್ರೀ ಆಯ್ಕೆಯಾಗಿದ್ದಾರೆ.
ನಗರದ ವಿ.ಪಿ ಬಡಾವಣೆಯ ಸರ್ಕಾರಿ ಶಾಲೆ ಆವರಣದಲ್ಲಿ ಸೋಮವಾರ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ಜಿಗಿತ ಕಂಡ ರಾಶಿ ಅಡಿಕೆ
ಈ ವೇಳೆ ಜಿಲ್ಲಾ ಹ್ಯಾಂಡ್ ಬಾಲ್ ಸಂಘದ ಉಪಾಧ್ಯಕ್ಷ ಎಂ.ಎಚ್. ಜಯ್ಯಣ್ಣ ಮಾತನಾಡಿ, ಚಿತ್ರದುರ್ಗಕ್ಕೆ ಹ್ಯಾಂಡ್ ಬಾಲನ್ನು ಪರಿಚಯಿಸಿದ್ದು ಶಿವರಾಂ, ಈಗ ಅದು ಎತ್ತರಕ್ಕೆ ಬೆಳೆದಿದೆ ಇದರಲ್ಲಿ ಹಲವಾರು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರು.
ಹ್ಯಾಂಡ್ ಬಾಲ್ ಸಂಘ ಆರಂಭದಿಂದ ಇವರಿಗೆ 28 ವಿದ್ಯಾರ್ಥಿಗಳು ವಿವಿಧ ಮಟ್ಟದಲ್ಲಿ ಭಾಗವಹಿಸಿದ್ದಾರೆ. 14 ಮಕ್ಕಳಿಗೆ ಸ್ಕಾಲರ್ಶಿಪ್ ಬರುತ್ತಿದೆ, ಅನೇಕ ವಿದ್ಯಾರ್ಥಿಗಳು ಅಧಿಕಾರಿಗಳಾಗಿ ಸರ್ಕಾರಿ ಕೆಲಸದಲ್ಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಭದ್ರೆಗಾಗಿ ಅರೆಮಲೆನಾಡು ಹೊಳಲ್ಕೆರೆ ಪೂರ್ಣ ಬಂದ್
ಜಿಲ್ಲಾ ಹ್ಯಾಂಡ್ ಬಾಲ್ ಸಂಘದ ಕಾರ್ಯಾಧ್ಯಕ್ಷ ಶಿವರಾಂ ಮಾತನಾಡಿ, ಮಕ್ಕಳು ಶಾಲೆಯಲ್ಲಿ ಪಠ್ಯಕ್ಕೆ ಮಾತ್ರ ಸೀಮಿತವಾಗದೆ, ಪಠ್ಯತೇರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಹೊರಹಾಕಬೇಕು ಎಂದರು.
ಕಳೆದ ತಿಂಗಳು ರಾಜಸ್ಥಾನ ಗಂಗ್ರಾಶ್ ನಲ್ಲಿ ನಡೆದ 38ನೇ ಸಬ್ ಜೂನಿಯರ್ ರಾಷ್ಟ್ರೀಯ ಹ್ಯಾಂಡ್ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಚಿನ್ಮಲಾದ್ರಿ ಪ್ರೌಢಶಾಲೆಯ ಸಂತೋಷ ಹಾಗೂ ಶಾಂಭವಿಯವರನ್ನು ಇದೆ ವೇಳೆ ಸನ್ಮಾನಿಸಲಾಯಿತು.
ಇದನ್ನೂ ಓದಿ: ದೇವಸ್ಥಾನದಂತೆ ಮನುಷ್ಯನ ಜೀವನ ಕೂಡ ಜೀರ್ಣೋದ್ಧಾರ ಆಗಬೇಕು
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಸುರೇಶ್, ಶಿಕ್ಷಕಿಯರಾದ ಯಶೋಧ, ಸುಕನ್ಯಾ, ಲಕ್ಷ್ಮೀದೇವಿ ರಾಧಾಮಣಿ, ಸರಸ್ವತಿ, ಅಮಿನಾಬಿ, ರಶ್ಮಿ ಇದ್ದರು.