Connect with us

    Murugh matha; ಕಳ್ಳತನವಾಗಿದ್ದ ಮುರುಘಾ ಶರಣರ ಬೆಳ್ಳಿ ವಿಗ್ರಹ ದಿಢೀರ್ ಪ್ರತ್ಯಕ್ಷ | ಮುರುಘಾ ಮಠಕ್ಕೆ ಶ್ವಾನ ದಳ ದೌಡು

    ಮುರುಘಾ ಶರಣರ ಬೆಳ್ಳಿ ವಿಗ್ರಹ

    ಮುಖ್ಯ ಸುದ್ದಿ

    Murugh matha; ಕಳ್ಳತನವಾಗಿದ್ದ ಮುರುಘಾ ಶರಣರ ಬೆಳ್ಳಿ ವಿಗ್ರಹ ದಿಢೀರ್ ಪ್ರತ್ಯಕ್ಷ | ಮುರುಘಾ ಮಠಕ್ಕೆ ಶ್ವಾನ ದಳ ದೌಡು

    CHITRADURGA NEWS | 15 JULY 2024

    ಚಿತ್ರದುರ್ಗ: ಐತಿಹಾಸಿಕ ಮುರುಘಾ ಮಠದ ರಾಜಾಂಗಣದಿಂದ ಕಳ್ಳತನವಾಗಿದ್ದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರ ಬೆಳ್ಳಿ ವಿಗ್ರಹ ಮಠದ ಆವರಣದಲ್ಲಿ ದಿಢೀರ್ ಪ್ರತ್ಯಕ್ಷವಾಗಿದೆ.

    ಕಳೆದ ವಾರ ಮಠದಲ್ಲಿದ್ದ ಬೆಳ್ಳಿ ವಿಗ್ರಹ ಕಳ್ಳತನವಾಗಿತ್ತು. ಈ ಬಗ್ಗೆ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಇದನ್ನೂ ಓದಿ:  ಮುರುಘಾ ಮಠದಲ್ಲಿ ಕಳ್ಳರ ಕೈಚಳಕ | ಶಿವಮೂರ್ತಿ ಮುರುಘಾ ಶರಣರ ಬೆಳ್ಳಿ ಪುತ್ಥಳಿ ಕಳವು

    ದೂರು ದಾಖಲಾಗಿ ಮೂರು ದಿನ ಕಳೆಯುವುದರಲ್ಲಿ ನಾಪತ್ತೆಯಾಗಿದ್ದ ಮುರುಘಾ ಶ್ರೀಗಳ ಬೆಳ್ಳಿ ವಿಗ್ರಹ ಮಠದ ಆವರಣದಲ್ಲಿ ಕಂಡು ಬಂದಿದೆ.

    ಮಠದ ಆವರಣದಲ್ಲಿರುವ ಎಸ್‍ಜೆಎಂ ಕನ್ನಡ ಮಾಧ್ಯಮ ಶಾಲೆಯ ಬಳಿ ಮುರುಘಾ ವನಕ್ಕೆ ಹೊಂದಿಕೊಂಡಿರುವ ಕಾಂಪೌಂಡ್ ಗೋಡೆ ಬಳಿಯಲ್ಲಿ ಶರಣರ ಬೆಳ್ಳಿ ವಿಗ್ರಹವನ್ನು ಗೋಣಿ ಚೀಲದಲ್ಲಿ ತಂದು ಇಟ್ಟು ಹೋಗಿದ್ದಾರೆ.

    ಇದನ್ನೂ ಓದಿ: ಮುರುಘಾ ಶ್ರೀಗಳ ಬೆಳ್ಳಿ ಪುತ್ಥಳಿ ಕಳ್ಳತನ | ದಾಖಲಾಯ್ತು ದೂರು | ದೂರು ಕೊಟ್ಟಿದ್ಯಾರು ?

    ಜೂನ್ 24 ಕೊನೆಯ ಬಾರಿ ಬೆಳ್ಳಿ ವಿಗ್ರಹ ಕಂಡು ಬಂದಿತ್ತು. ಆನಂತರ ನಾಪತ್ತೆಯಾಗಿತ್ತು. ಈ ಬಗ್ಗೆ ಮಠದ ಸಾಧಕರಾದ ವಿಜಯ ದೇವರು ಶ್ರೀ ಬಸವಪ್ರಭು ಸ್ವಾಮೀಜಿ ಗಮನಕ್ಕೆ ತಂದಿದ್ದರು.

    ಮುರುಘಾ ಮಠ

    ಮುರುಘಾ ಮಠ

    ಬಸವಪ್ರಭು ಶ್ರೀಗಳು ಹಾಗೂ ಡಾ.ಬಸವಕುಮಾರ ಸ್ವಾಮೀಜಿ ಮಠದ ಸಿಬ್ಬಂದಿಗಳನ್ನು ವಿಚಾರಿಸಿ, ಮಠದ ಆಡಳಿತಾಧಿಕಾರಿ ಶಿವಯೋಗಿ ಕಳಸದ್ ಅವರ ಜೊತೆ ಚರ್ಚಿಸಿ ಜುಲೈ 11 ಗುರುವಾರ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

    ಇದನ್ನೂ ಓದಿ: ಅಗ್ನಿವೀರ ವಾಯು ಸೇವೆಗೆ ಅರ್ಜಿ ಆಹ್ವಾನ

    ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸುತ್ತಿದ್ದಂತೆ ಬೆಳ್ಳಿ ವಿಗ್ರಹ ಮಠದ ಆವರಣಕ್ಕೆ ಗೋಣಿ ಚೀಲದಲ್ಲಿ ಬಂದಿದೆ.

    ಮಠದಲ್ಲಿ ಓಡಾಟ ಮಾಡುವವರೇ ಈ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ದೂರು ದಾಖಲಾಗುತ್ತಿದ್ದಂತೆ ವಿಗ್ರಹ ತಂದಿಟ್ಟು ಹೋಗಿರುವುದರಿಂದ ಈಗ ಅನುಮಾನಗಳು ದಟ್ಟವಾಗಿವೆ.

    ಇದನ್ನೂ ಓದಿ: ಎಚ್.ಆಂಜನೇಯಗೆ ಬೆಳ್ಳಿ ಗದೆ ನೀಡಿ ಸನ್ಮಾನ | ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನ

    ಮಠದ ರಾಜಾಂಗಣದಿಂದಲೇ ಕಳ್ಳತ ಮಾಡಿರುವ ಕಿಡಿಗೇಡಿಗಳನ್ನು ಪೊಲೀಸರು ಪತ್ತೆ ಮಾಡಬೇಕು ಎಂದು ಮಠದ ಭಕ್ತರು ಆಗ್ರಹಿಸಿದ್ದಾರೆ.

    ಉಡುಗೊರೆಯಾಗಿ ಬಂದಿದ್ದ 25 ಲಕ್ಷದ ಬೆಳ್ಳಿ ವಿಗ್ರಹ:

    ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು ಮುರುಘಾ ಮಠದ ಶೂನ್ಯಪೀಠಾರೋಹಣ ಮಾಡಿ 25 ವರ್ಷಗಳ ಸಂಭ್ರಮದ ನೆನಪಿಗಾಗಿ ಮಠದ ಭಕ್ತರು 22 ಕೆ.ಜಿ ತೂಕದ ಸುಮಾರು ಇಂದಿನ ಮಾರುಕಟ್ಟೆ ಬೆಲೆಯ 25 ಲಕ್ಷ ರೂ. ವೆಚ್ಚದ ಬೆಳ್ಳಿ ವಿಗ್ರಹವನ್ನು ಕೊಡುಗೆಯಾಗಿ ನೀಡಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top