ಮುಖ್ಯ ಸುದ್ದಿ
MUDA: ಮುಡಾ ಅಕ್ರಮ | ಸಿದ್ದರಾಮಯ್ಯ ಬೆಂಬಲಕ್ಕೆ ಹಿಂದುಳಿದ ದಲಿತ ಮಠಾಧೀಶರು
CHITRADURGA NEWS | 19 AUGUST 2024
ಚಿತ್ರದುರ್ಗ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅನುಮತಿ ನೀಡಿದ ಬೆನ್ನಲ್ಲೇ ಹಿಂದುಳಿದ ದಲಿತ ಮಠಾಧೀಶರು ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದಾರೆ.
ಈ ಕುರಿತು ಹಿಂದುಳಿದ ದಲಿತ ಮಠಾಧೀಶ್ವರರ ಒಕ್ಕೂಟ (ರಿ) ಮಾಧ್ಯಮ ಪ್ರಕಟಣೆ ನೀಡಿದ್ದು, ಕೆಲವೊಮ್ಮೆ ಪ್ರತ್ಯಕ್ಷ ನೋಡಿದರು ಪ್ರಾಮಾಣಿಸಿ ನೋಡಬೇಕು ಅಂತ ಗಾದೆಮಾತನ್ನು ನೆನಪಿಸಿಕೊಳ್ಳಬೇಕಾಗುತ್ತದೆ.
ಮುಡಾ ಪ್ರಕರಣದಲ್ಲಿ ಸತ್ಯ ಪ್ರತಿಪಾದಿಸಲು ಕಾನೂನಿನಲ್ಲಿ ಅನೇಕ ಅವಕಾಶಗಳಿವೆ. ಅದಕ್ಕೆ ಮುಖ್ಯಮಂತ್ರಿಗಳು ಒಬ್ಬ ವಕೀಲ ಪದವೀದರರಾಗಿ ಕೂಡಾ ಸಹಕಾರ ನೀಡುತ್ತಾರೆ.
ಕ್ಲಿಕ್ ಮಾಡಿ ಓದಿ: ಪ್ರತಿಭಟನೆ ಬದಲು ಪೊಲೀಸರಿಗೆ ದೂರು ನೀಡಿ| ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಕರ್ನಾಟಕದಲ್ಲಿ ಅಪರೂಪಕ್ಕೊಮ್ಮೆ ಅಹಿಂದ ವರ್ಗ ಮುಖ್ಯಮಂತ್ರಿಯಾಗಿದ್ದಾರೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿ ಮುಂದುವರೆಸಬೇಕೆಂಬುದು ಕರುನಾಡಿನ ಬಹುಸಂಖ್ಯಾತರ ಬಯಕೆ ಜತೆಗೆ ಹಿಂದುಳಿತ ದಲಿತ ಮಠಾಧೀಶರ ಒಕ್ಕೂಟದ ಅಪೇಕ್ಷೆಯಾಗಿದೆ.
ಕ್ಲಿಕ್ ಮಾಡಿ ಓದಿ: ಕಠಿಣ ಶಿಕ್ಷೆಯ ಕಾನೂನು ಜಾರಿಗೊಳಿಸಿ | ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹ
ಉತ್ತಮ ಆಡಳಿತ ಯಂತ್ರಕ್ಕೆ ಅತ್ಯುತ್ತಮ ನಾಯಕನ ಅವಶ್ಯಕತೆಯಿದೆ. ಆಡಳಿತ ಪಕ್ಷಗಳು ಪಾರದರ್ಶಕವಾಗಿ ದೋಷಮುಕ್ತವಾಗಿ ಹಾಗೂ ವಿರೋಧ ಪಕ್ಷಗಳು ಲೋಪದೋಷಗಳನ್ನು ಎತ್ತಿಹಿಡಿಯುವ ಪ್ರಕ್ರಿಯಯ ಆಡಳಿತ ಸಹಜವಾಗಿರುವಂತಹುದು.
ಕಳಂಕ ರಹಿತ ಬದುಕನ್ನು ನಡೆಸಿ ಮಾದರಿ ವ್ಯಕ್ತಿತ್ವವನ್ನು ಸುದೀರ್ಘ ರಾಜಕೀಯ ಜೀವನದಲ್ಲಿ ಅಳವಡಿಸಿಕೊಂಡು ಬಂದಿರುವ ಸಿದ್ದರಾಮಯ್ಯನವರು. ತಮ್ಮ ಸಿಂಹಾವಲೋಕನ ಬದುಕಿನಲ್ಲಿ, ಆದರ್ಶ ತತ್ವ ಸಿದ್ಧಾಂತಗಳನ್ನು ತಿಳಿದು, ಜನರಿಗೆ ತಿಳಿಸುತ್ತ ನಡೆ ನುಡಿಯಲ್ಲಿ ಒಂದಾಗಿಸಿಕೊಂಡು ಬದುಕುತ್ತಿರುವ ಅಪರೂಪದ ರಾಜಕಾರಣಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ತಿಳಿಸಿದ್ದಾರೆ.