ಹೊಳಲ್ಕೆರೆ
ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಸಿಸಿ ರಸ್ತೆ | ಶಾಸಕ ಎಂ.ಚಂದ್ರಪ್ಪ ಭೂಮಿ ಪೂಜೆ
Published on
CHITRADURGA NEWS | 03 FEBRUARY 2025
ಹೊಳಲ್ಕೆರೆ: ತಾಲೂಕಿನ ಲೋಕದೊಳಲು ಗ್ರಾಮದ ಬೆಟ್ಟದ ಮೇಲಿರುವ ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇವಸ್ಥಾನಕ್ಕೆ ರೂ.1.50 ಕೋಟಿ ವೆಚ್ಚದಲ್ಲಿ ಸಿ.ಸಿ.ರಸ್ತೆ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಭೂಮಿಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ದೊಡ್ಡಹೊಟ್ಟೆ ರಂಗನಾಥಸ್ವಾಮಿ ಹೆಸರಾಂತ ದೇವರಾಗಿರುವುದರಿಂದ ಭಕ್ತಿ ಭಾವದಿಂದ ಪೂಜಿಸಿದಾಗ ಎಲ್ಲರಿಗೂ ಆರ್ಶೀವಾದಸಿಗುತ್ತದೆ.
ಬರಿ ಇಂಜಿನಿಯರ್ ಕಂಟ್ರಾಕ್ಟರ್‍ಗಳ ಮೇಲೆ ಜವಾಬ್ದಾರಿ ಹಾಕದೆ ಊರಿನವರು ಕಾಲ ಕಾಲಕ್ಕೆ ಸರಿಯಾಗಿ ರಸ್ತೆಗೆ ನೀರಿನ ಕ್ಯೂರಿಂಗ್ ಮಾಡಿದಾಗ ಗಟ್ಟಿಮುಟ್ಟಾಗಿರುತ್ತದೆ. ನಿಗಧಿತ ಸಮಯದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕ ತಿಳಿಸಿದರು.
Also Read: ರೆಡ್ಡಿ ಜನಸಂಘದ ವ್ಯವಸ್ಥಾಪಕ ಜಿ.ಎನ್.ಹನುಮಂತರೆಡ್ಡಿ ಇನ್ನಿಲ್ಲ
ಮಳೆಗಾಲ ಆರಂಭವಾಗುವುದರೊಳಗೆ ರಸ್ತೆ ಕಾಮಗಾರಿಯನ್ನು ಮುಗಿಸುವಂತೆ ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರನಿಗೆ ಸೂಚಿಸಿದರು.
ಈ ವೇಳೆ ಲೋಕದೊಳಲು ಗ್ರಾಮಸ್ಥರು ಉಪಸ್ಥಿತರಿದ್ದರು.
Continue Reading
Related Topics:Bhoomi Puja, CC Road, Chitradurga, Chitradurga news, Chitradurga Updates, Doddohotte Ranganathaswamy, Kannada Latest News, Kannada News, Lokdolalu, MLA M. Chandrappa, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ದೊಡ್ಡಹೊಟ್ಟೆ ರಂಗನಾಥಸ್ವಾಮಿ, ಭೂಮಿ ಪೂಜೆ, ಲೋಕದೊಳಲು, ಶಾಸಕ ಎಂ.ಚಂದ್ರಪ್ಪ, ಸಿಸಿ ರಸ್ತೆ
Click to comment