Connect with us

    K.C.Virendra Pappi; 32 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಚಾಲನೆ

    ಸಾರ್ವಜನಿಕರೊಂದಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

    ಮುಖ್ಯ ಸುದ್ದಿ

    K.C.Virendra Pappi; 32 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಚಾಲನೆ

    CHITRADURGA NEWS | 09 OCTOBER 2024

    ಚಿತ್ರದುರ್ಗ: ತಾಲೂಕಿನ ಭೀಮಸಮುದ್ರದ ಬೊಮ್ಮೇನಹಳ್ಳಿಯಲ್ಲಿ 32 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ(K.C.Virendra Pappi) ಚಾಲನೆ ನೀಡಿದರು.

    ಕ್ಲಿಕ್ ಮಾಡಿ ಓದಿ: AdikeRate: ಅಡಿಕೆ ಧಾರಣೆ | ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಹೆಚ್ಚಳ

    ಭೀಮಸಮುದ್ರ ಕೆರೆಗೆ ಭೇಟಿ ನೀಡಿ ಸಾಸ್ವೇಹಳ್ಳಿ ಏತ ನೀರಾವರಿ ಕಾಮಗಾರಿ ವೀಕ್ಷಿಸಿದರು.

    ಸಿರಿಗೆರೆ ಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಶ್ರಮ, ಇಚ್ಛಾಶಕ್ತಿ ಫಲ ಅನೇಕ ಕೆರೆಗಳು ತುಂಬಿವೆ. ಜತೆಗೆ ಭೀಮಸಮುದ್ರ ಕೆರೆಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಪೈಪ್‍ಲೈನ್ ಜೋಡಣೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    32 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಚಾಲನೆ

    32 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಚಾಲನೆ

    ಒಟ್ಟು 121 ಕೆರೆಗೆ ನೀರು ತುಂಬಿಸುವ ಬಾಕಿ ಇದ್ದು, 2 ಕೋಟಿ ಜತೆಗೆ ಹೆಚ್ಚುವರಿ 3 ಕೋಟಿ ರೂ. ಬಿಡುಗಡೆ ಮಾಡಲು ಪ್ರಯತ್ನಿಸುವುದಾಗಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ ನೀಡಿದರು.

    ಕ್ಲಿಕ್ ಮಾಡಿ ಓದಿ: Internal Reservation; ಒಳಮೀಸಲಾತಿಗೆ ಒತ್ತಾಯಿಸಿ ಹೋರಾಟ | ಗೋವಿಂದ ಕಾರಜೋಳ

    MUSS ಸ್ಥಳ ಪರಿಶೀಲನೆ ನಡೆಸಿ ಶ್ರೀ ಪಾಳ್ಯ ಗ್ರಾಮದ ಸರ್ವೇ ನಂಬರ್ 10ರ 11 ಎಕರೆ 12 ಗುಂಟೆ ಇದರಲ್ಲಿ 3 ರಿಂದ 4 ಎಕರೆ ಜಮೀನನ್ನು ಮಂಜೂರು ಮಾಡುವಂತೆ ತಿಳಿಸಿದರು.

    ಸಾಸ್ವೇಹಳ್ಳಿ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಟಿ.ಪುಟ್ಟಪ್ಪ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮೂಲಕ ಸಿರಿಗೆರೆ ಸ್ವಾಮೀಜಿ ಬರದ ನಾಡಿನ ಭಗೀರಥರಾಗಿದ್ದಾರೆ. ಅವರ ಮಾರ್ಗದಲ್ಲಿ ನಾವೆಲ್ಲರೂ ಶ್ರಮಿಸಬೇಕು. ಜತೆಗೆ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

    ಏಳು ವರ್ಷ ನನೆಗುದಿಗೆ ಬಿದ್ದಿತ್ತು. ನ್ಯಾಯಾಲಯದ ಮೆಟ್ಟಿಲು ಏರಲಾಗಿತ್ತು. ಎಲ್ಲ ಕಾನೂನು ತೊಡಕುಗಳಿಗೆ ತೆರೆ ಬಿದ್ದಿದ್ದು, ಭೀಮಸಮುದ್ರ ಕೆರೆಗೆ ನೀರು ಶೀಘ್ರ ಹರಿಯಲಿದೆ.

    ಏಳು ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದ್ದು, ಅವರ ಇಚ್ಛಾಶಕ್ತಿ ಪ್ರದರ್ಶಿಸಿದರೆ ನೀರು ಬರುತ್ತಿರಲಿಲ್ಲ. ಚನ್ನಗಿರಿ, ಜಗಳೂರು, ಹರಪನಹಳ್ಳಿ, ಚಿತ್ರದುರ್ಗ, ಹೊಳಲ್ಕೆರೆ, ಮಾಯಕೊಂಡ ಹೀಗೆ ಅನೇಕ ತಾಲೂಕುಗಳ ಕೆರೆಗೆ ನೀರು ತುಂಬಿಸಲಾಗುತ್ತಿದೆ ಎಂದರು.

    ಕ್ಲಿಕ್ ಮಾಡಿ ಓದಿ: Railway Underbridge; ತುರುವನೂರು ರಸ್ತೆ ರೈಲ್ವೆ ಕೆಳಸೇತುವೆ ದುರಸ್ಥಿ ಮಾಡಿ | ಸಂಸದ ಗೋವಿಂದ ಕಾರಜೋಳ

    ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಗಿರಿ ಎಂ.ಜಾನಕಲ್, ಬಿಟಿ ವೀರೇಶ್, ಟಿ.ಎಸ್.ಮಹೇಶ್ವರಪ್ಪ, ಗ್ರಾಮ ಪಂಚಾಯತಿ ಸದಸ್ಯ ಶರತ್ ಪಟೇಲ್, ನಾಗರಾಜ, ಸಿ.ಆರ್.ಮಂಜುನಾಥ್, ಟಿ ಜಿ ಅಶೋಕ್ ಆರ್ ರಮೇಶ್ ಮುದ್ದಾಪುರ ರಾಜಣ್ಣ, ಬಸವರಾಜಯ್ಯ ಕೆಡಿಪಿ ಸದಸ್ಯ ಸಿಬಿ ನಾಗರಾಜ್, ಕಾಂಗ್ರೆಸ್ ಮುಖಂಡ ಸೈಯದ್ ಅನೀಸ್, ವೀರಶೈವ ಲಿಂಗಾಯಿತ ವೇದಿಕೆಯ ಅಧ್ಯಕ್ಷ ಮಂಜುನಾಥ್ ಇತರರು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top