ಮುಖ್ಯ ಸುದ್ದಿ
ತಪ್ಪಿದ ಭಾರೀ ಅನಾಹುತ | 49 ಪ್ರಯಾಣಿಕರ ಜೀವ ಉಳಿಸಿದ ಐರಾವತ ಬಸ್ ಚಾಲಕ
CHITRADURGA NEWS | 14 MAY 2024
ಚಿತ್ರದುರ್ಗ: ಭಾರೀ ಅಪಘಾತದಿಂದ ಆಗಬಹುದಾಗಿದ್ದ ಸಾವು, ನೋವುಗಳನ್ನು ತಡೆಯುವ ಮೂಲಕ KSRTC ಐರಾವತ ಬಸ್ ಚಾಲಕ ಪ್ರಯಾಣಿಕರ ಪಾಲಿಗೆ ದೇವರಾಗಿದ್ದಾರೆ.
ಇದನ್ನೂ ಓದಿ: ಕೋಟೆನಾಡಲ್ಲಿ ಮದಕರಿ ನಾಯಕರ ಪುಣ್ಯ ಸ್ಮರಣೆ | ಸರಳ ಆಚರಣೆಗೆ ತೀರ್ಮಾನ ಬಿ.ಕಾಂತರಾಜ್
ಗೋವಾದ ಪಣಜಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ kstrc ಐರಾವತ ಬಸ್, ಚಿತ್ರದುರ್ಗ ಸಮೀಪದ ವಿಜಾಪುರ ಗೊಲ್ಲರಹಟ್ಟಿ ಬಳಿ ಬೆಳಗಿನ ಜಾವ 2.20 ರ ಸುಮಾರಿಗೆ ಲಾರಿಗೆ ಅಪಘಾತವಾಗಿದೆ.
ಅಪಘಾತದ ರಭಸಕ್ಕೆ ಲಾರಿ ಪಲ್ಟಿಯಾಗಿದೆ. ಆದರೆ, ಬಸ್ ಚಾಲಕನ ಚಾಣಾಕ್ಷತೆಯ ಕಾರಣಕ್ಕೆ ಹೆದ್ದಾರಿ ನಡುವಿನ ದೊಡ್ಡ ಡಿವೈಡರ್ ಹಾರಿ, ಪಕ್ಕದ ರಸ್ತೆ, ಸರ್ವೀಸ್ ರಸ್ತೆಯ ಗುಂಡಿದಾಟಿ, ರಸ್ತೆ ಬದಿಯಲ್ಲಿದ್ದ ಜಮೀನಿಗೆ ನುಗ್ಗಿದ ಬಸ್ ಸುರಕ್ಷಿತವಾಗಿ ನಿಂತಿದೆ.
ಇದನ್ನೂ ಓದಿ: ಅಂತೂ 55 ಸಾವಿರ ಗಡಿ ದಾಟಿತು ರಾಶಿ ಅಡಿಕೆ ರೇಟ್
ಬಸ್ಸಿನಲ್ಲಿ 49 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಒಬ್ಬ ಪ್ರಯಾಣಿಕನಿಗೆ ಮಾತ್ರ ಕಾಲಿನ ಬಳಿ ಸಣ್ಣ ಪೆಟ್ಟಾಗಿದೆ.
ಬಸ್ ಚಾಲಕ ಪಿ.ಎಂ.ಹೆಬ್ಸೂರ್ ಅವರ ಕೈಗೆ ಗಾಯವಾಗಿದೆ. ಉಳಿದಂತೆ ಯಾವುದೇ ಅನಾಹುತಗಳಾಗಿಲ್ಲ.
ಬಸ್ಸಿನಲ್ಲಿ ನಿರ್ವಾಹಕ ಆರ್.ಬಿ.ಮಾಡಳ್ಳಿ ಇದ್ದರು.
ಬಸ್ಸಿನಲ್ಲಿದ್ದ ಪ್ರಯಾಣಿಕರು ಚಾಲಕ ಪಿ.ಎಂ.ಹೆಬ್ಸೂರ್ ಅವರ ಸಮಯಪ್ರಜ್ಞೆ ಹಾಗೂ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿದ ಘಟನೆಯಿಂದ ನಿಟ್ಟುಸಿರು ಬಿಟ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: CBSE 10th RESULT | SRS ಶಾಲೆಗೆ ಶೇ.100 ಫಲಿತಾಂಶ
Ksrtc ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್ ಕೂಡಾ ಪ್ರಯಾಣಿಕ ಹಾಗೂ ನಿರ್ವಾಹಕರ ಕಾರ್ಯವನ್ನು ಶ್ಲಾಘಿಸಿದ್ದಾರೆ.