Connect with us

    ಲಿಂಗೈಕ್ಯ ಜಗದ್ಗುರು ಶ್ರೀ ಜಯವಿಭವ ಮುರುಘರಾಜೇಂದ್ರ ಶ್ರೀಗಳ ಸ್ಮರಣೆ | ಗದ್ದುಗೆಗೆ ವಚನಾಭಿಷೇಕ

    ಮುಖ್ಯ ಸುದ್ದಿ

    ಲಿಂಗೈಕ್ಯ ಜಗದ್ಗುರು ಶ್ರೀ ಜಯವಿಭವ ಮುರುಘರಾಜೇಂದ್ರ ಶ್ರೀಗಳ ಸ್ಮರಣೆ | ಗದ್ದುಗೆಗೆ ವಚನಾಭಿಷೇಕ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 17 MAY 2024
    ಚಿತ್ರದುರ್ಗ: ಐತಿಹಾಸಿಕ ಚಿತ್ರದುರ್ಗದ ಮುರುಘ ಮಠದಲ್ಲಿ ಮೇ 18 ರಂದು ಲಿಂ. ಜಗದ್ಗುರು ಶ್ರೀ ಜಯವಿಭವ ಮುರುಘರಾಜೇಂದ್ರ ಶ್ರೀಗಳ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.

    ಮುರುಘ ರಾಜೇಂದ್ರ ಬೃಹನ್ಮಠ ಶೂನ್ಯಪೀಠ ಪರಂಪರೆಯು ಮುರುಗಿ ಶಾಂತವೀರ ಮಹಾಸ್ವಾಮೀಜಿ ಕಾಲದಿಂದ ಸಾಗಿ ಬಂದಿದೆ. ಲಿಂಗೈಕ್ಯ ಜಗದ್ಗುರು ಶ್ರೀಜಯವಿಭವ ಮುರುಘರಾಜೇಂದ್ರ ಸ್ವಾಮೀಜಿ ಈ ಪೀಠದ18ನೇ ಪೀಠಾಧಿಪತಿಗಳಾಗಿದ್ದ ಜನಾನುರಾಗಿಗಳಾಗಿದ್ದರು. ಇವರ 60ನೇಯ ಸ್ಮರಣೋತ್ಸವ ಅರ್ಥಪೂರ್ಣಗೊಳಿಸಲು ಮುರುಘಾ ಮಠದಲ್ಲಿ ಸಿದ್ದತೆ ಪ್ರಾರಂಭವಾಗಿವೆ.

    ಕ್ಲಿಕ್ ಮಾಡಿ ಓದಿ: ಅಡಿಕೆ ಧಾರಣೆ | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟಿತ್ತು

    ಅಂದು ಬೆಳಿಗ್ಗೆ 8ಗಂಟೆಗೆ ಶ್ರೀಗಳವರ ಲಿಂಗೈಕ್ಯ ಗದ್ದುಗೆಗೆ ವಚನಾಭಿಷೇಕ ನೆರವೇರಲಿದೆ. 10ಗಂಟೆಗೆ ಶ್ರೀಮಠದ ಪಕ್ಕದಲ್ಲಿ ಶ್ರೀಗಳು ಬೆಳೆಸಿದ್ದ ತೆಂಗಿನ ತೋಟದ ಮುಖ್ಯ ದ್ವಾರಕ್ಕೆ ಸ್ವಾಮೀಜಿ ಹೆಸರಿನ ನಾಮ ಫಲಕದ ಕಮಾನು ಉದ್ಘಾಟನೆ ನಡೆಯಲಿದೆ. ನಂತರ 11 ಗಂಟೆಗೆ ಅಲ್ಲಮಪ್ರಭು ಸಂಶೋಧನಾ ಕೇಂದ್ರದ ಸಭಾ ಭವನದಲ್ಲಿ ಸ್ವಾಮೀಜಿ ಜೀವನ ಸಾಧನೆ ಕುರಿತ ವಿಶೇಷ ಉಪನ್ಯಾಸ ನಡೆಯಲಿದೆ.

    ಕ್ಲಿಕ್ ಮಾಡಿ ಓದಿ: ಅಸ್ಥಿಪಂಜರ ಸಿಕ್ಕ ಮನೆಯಲ್ಲಿ ತನಿಖೆ ವೇಳೆ ಸಂಗ್ರಹಿಸಿದ ಸಾಕ್ಷ್ಯಗಳೆಷ್ಟು ಗೊತ್ತಾ

    ಸರಳತೆ, ಮಾನವೀಯತೆ, ದಾಸೋಹಂಭಾವ, ವೈಚಾರಿಕ ನಡೆಯಿಂದ ಶ್ರೀಗಳು ಜನಾನುರಾಗಿಗಳಾಗಿ ಪೀಠವನ್ನು ಮುನ್ನಡೆಸಿದ್ದರು. ಕೃಷಿ ಪ್ರೇಮ, ರಾಷ್ಟ್ರಭಕ್ತಿ , ಗುರುಭಕ್ತಿಯಲ್ಲಿ ಅವರಿಗೆ ಅವರೇ ಸಾಟಿ. ಅಂತಹ ಗುರುಗಳ ಸಂಸ್ಮರಣೆಯಲ್ಲಿ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತಿವಹಿಸಲಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top