Connect with us

    ವಿಜೃಂಭಣೆಯಿಂದ ಜರುಗಿದ ಮಾವಿನಹಳ್ಳಿ ಬಸವೇಶ್ವರ ಸ್ವಾಮಿ ರಥೋತ್ಸವ

    ಮುಖ್ಯ ಸುದ್ದಿ

    ವಿಜೃಂಭಣೆಯಿಂದ ಜರುಗಿದ ಮಾವಿನಹಳ್ಳಿ ಬಸವೇಶ್ವರ ಸ್ವಾಮಿ ರಥೋತ್ಸವ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 09 MARCH 2025

    ಚಿತ್ರದುರ್ಗ: ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ಭೀಮಸಮುದ್ರ ಮಜುರೆ ಬಸವಾಪುರದ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ರಥೋತ್ಸವು ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

    Also Read: ಭೀಕರ ಅಪಘಾತ | ಐದು ಜನ ಸ್ಥಳದಲ್ಲೇ ಸಾವು | ತಮಟಕಲ್ಲು ಬಳಿ ಘಟನೆ

    ಸಂಜೆ 4 ಗಂಟೆಗೆ ಸ್ವಾಮಿಗೆ ಹೂವಿನ ಪಲ್ಲಕ್ಕಿ ಉತ್ಸವದ ನಂತರ ಶ್ರೀ ಸ್ವಾಮಿಯ ರಥೋತ್ಸವ ನಡೆಸಲಾಯಿತು.

    ರಥೋತ್ಸವದ ಅಂಗವಾಗಿ ರಾಜ್ಯದ ವಿವಿಧೆಡೆಗಳಿಂದ ಗಳಿಂದ ಆಗಮಿಸಿದ್ದ ಭಕ್ತ ಸಮೂಹ ಸಕ್ರಿಯವಾಗಿ ಭಾಗವಹಿಸಿ ರಥವನ್ನು ಭಕ್ತಿಯಿಂದ ಎಳೆಯುವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು.

    ಕಂಕಣಧಾರಣೆ, ಆಶ್ವೋತ್ಸವ, ವೃಷಭೋತ್ಸವ ಕೆಂಡಾರ್ಚನೆಯಂತಹ ಕಾರ್ಯಕ್ರಮ ನಡೆಯಿತು.

    ಜಾತ್ರೆಯ ಅಂಗವಾಗಿ ದೇವಾಲಯದ ಆವರಣದ ಸುತ್ತಾ-ಮುತ್ತಲ್ಲಿನ ಪ್ರದೇಶದಲ್ಲಿ ವಿವಿಧ ರೀತಿಯ ಆಟ ಸಾಮಾನು ಬೆಂಡು-ಬೆತ್ತಾಸಿನ ಅಂಗಡಿಗಳನ್ನು ನಿರ್ಮಾಣ ಮಾಡಲಾಯಿತು.

    Also Read: Kannada Novel: 23. ಜಂಗಮಯ್ಯರ ಗೃಹ ನಿರ್ಮಾಣ

    ಹೂಸದಾಗಿ ಮದುವೆಯಾದ ಜೋಡಿಗಳು ರಥದ ಕಲಶವನ್ನು ನೋಡಬೇಕು ಎನ್ನುವ ಪ್ರತೀತಿ ಇರುವುದರಿಂದ ಹಲವಾರು ಜೋಡಿಗಳೊಂದಿಗೆ ಮಕ್ಕಳು, ವಯೋವೃದ್ದರು, ಮಧ್ಯವಯಸ್ಕನವರು, ಹೆಂಗಸರು ರಥೋತ್ಸವದಲ್ಲಿ ಭಾಗವಹಿಸಿದ್ದರು.

    ಸಂಜೆಯಾಗುತ್ತಿದ್ದಯೇ ಸ್ವಾಮಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ದೇವಾಲಯದ ಆವರಣದಲ್ಲಿ ಮೂರು ಸುತ್ತು ಹಾಕುವುದರ, ಆಗಮಿಸಿದ್ದ ಭಕ್ತಾಧಿಗಳು ರಥವನ್ನು ಎಳೆಯುವುದರ ಮೂಲಕ ಸ್ವಾಮಿಯ ರಥೋತ್ಸವವನ್ನು ಶ್ರದ್ದಾ ಭಕ್ತಿಯಿಂದ ನೇರವೇರಿಸಿದರು.

    ಈ ಭಾರಿಯ ಭಾವುಟವೂ ಒಂದು 1 ಲಕ್ಷ 22 ಸಾವಿರ, ರುದ್ರಾಕ್ಷಿ ಹಾರ 1 ಲಕ್ಷ 51 ಸಾವಿರಕ್ಕೆ ಹರಾಜಾಯಿತು. ಇದೇ ಸಂದರ್ಭದಲ್ಲಿ ಸ್ವಾಮಿಯ ಹತ್ತು ಹಾರಗಳನ್ನು ಹರಾಜು ಮಾಡಲಾಯಿತು.

    Also Read: ಮೂವರು ಪೊಲೀಸ್ Inspector ವರ್ಗಾವಣೆ

    ಈ ಸಂದರ್ಭದಲ್ಲಿ ಸ್ವಾಮಿಯ ಟ್ರಸ್ಟ್‍ನವರು ಆಗಮಿಸಿದ್ದ ಭಕ್ತಾಧಿಗಳಿಗೆ ನೆರಳಿನ ವ್ಯವಸ್ಥೆಯನ್ನು ಮಾಡಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲಿಸ್ ಬಿಗಿ ಭದ್ರತೆಯನ್ನು ಮಾಡಲಾಗಿತ್ತು.

    ಚಿತ್ರದುರ್ಗ ಜಿಲ್ಲೆ ಅಲ್ಲದೆ ರಾಜ್ಯದ ವಿವಿಧೆಡೆಗಳಿಂದ ಭಕ್ತಾಧಿಗಳು ಆಗಮಿಸುವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top