Connect with us

    ವಿಶೇಷಚೇತನರ ವಿವಾಹ | 50 ಸಾವಿರ ಪ್ರೋತ್ಸಾಹ ಧನದ ಬಾಂಡ್ ವಿತರಣೆ

    ವಿಶೇಷಚೇತನರ ವಿವಾಹ | 50 ಸಾವಿರ ಪ್ರೋತ್ಸಾಹ ಧನದ ಬಾಂಡ್ ವಿತರಣೆ

    ಮುಖ್ಯ ಸುದ್ದಿ

    ವಿಶೇಷಚೇತನರ ವಿವಾಹ | 50 ಸಾವಿರ ಪ್ರೋತ್ಸಾಹ ಧನದ ಬಾಂಡ್ ವಿತರಣೆ

    ವಿಶೇಷಚೇತನರ ವಿವಾಹ | 50 ಸಾವಿರ ಪ್ರೋತ್ಸಾಹ ಧನದ ಬಾಂಡ್ ವಿತರಣೆ

    CHITRADURGA NEWS | 29 OCTOBER 2024

    ಚಿತ್ರದುರ್ಗ: ತಾಲ್ಲೂಕಿನ ಜೆ.ಎನ್.ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಜ್ಜನಕೆರೆ ಗ್ರಾಮದ ವಿಶೇಷಚೇತನರಾದ ಕೀರ್ತನಾ ಹಾಗೂ ಅವರನ್ನು ವಿವಾಹವಾದ ನರಸಿಂಹ ಮೂರ್ತಿ ದಂಪತಿಗಳಿಗೆ ಹೂಡಿಕೆ ಮಾಡಿರುವ ರೂ.50,000/- ಪ್ರೋತ್ಸಾಹ ಧನದ ಬಾಂಡ್ ಅನ್ನು ಮಂಗಳವಾರ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ತಾ.ಪಂ ಇಒ ರವಿಕುಮಾರ್ ವಿತರಿಸಿದರು.

    ಕ್ಲಿಕ್ ಮಾಡಿ ಓದಿ: ಅಂಬೇಡ್ಕರ್ ವೃತ್ತದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ | ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ ಪೊಲೀಸರು 

    ವಿಶೇಷಚೇತನ ಯುವಕ, ಯುವತಿಯರನ್ನು ಸಾಮಾನ್ಯ ವ್ಯಕ್ತಿಗಳು ವಿವಾಹವಾಗುವ ಬಗ್ಗೆ ನಿರ್ಲಕ್ಷತೆ ತೋರಬಾರದು ಹಾಗೆ ಇದರಿಂದ ವಿಶೇಷಚೇತನರು ವೈವಾಹಿಕ ಜೀವನದಿಂದ ವಂಚಿತರಾಗದೆ ಸಾಮಾನ್ಯರಂತೆ ವೈವಾಹಿಕ ಜೀವನ ಸಾಗಿಸಬೇಕು.

    ಹಾಗಾಗಿ ವಿಶೇಷಚೇತನ ಯುವಕ-ಯುವತಿಯರನ್ನು ಸಾಮಾನ್ಯ ವ್ಯಕ್ತಿಗಳು ಮದುವೆಯಾಗುವುದಕ್ಕೆ ಪ್ರೋತ್ಸಾಹ ನೀಡುವುದರಿಂದ ಹೆಚ್ಚು ಹೆಚ್ಚು ಸಾಮಾನ್ಯ ವ್ಯಕ್ತಿಗಳು ವಿಕಲಚೇತನ ವ್ಯಕ್ತಿಗಳನ್ನು ವಿವಾಹವಾಗಲು ಮುಂದೆ ಬಂದು ವಿಕಲಚೇತನರ ವೈವಾಹಿಕ ಜೀವನ ಸುಗುಮವಾಗಿ ನಡೆಸಲು ಅನುಕೂಲವಾಗುತ್ತದೆ ಎಂದು ಸರ್ಕಾರವು ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಭಲೀಕರಣ ಇಲಾಖೆಯ ಮೂಲಕ ವಿವಾಹವಾಗುವ ಸಾಮಾನ್ಯ ಯುವಕ,ಯುವತಿಯರಿಗೆ ನಿರಂತರವಾಗಿ ಮಾಸಿಕ ಒಂದಷ್ಟು ಸಹಾಯ ದೊರಕಿಸಲು ವಿಕಲಚೇತನರ ವ್ಯಕ್ತಿಯ ಹೆಸರಿನಲ್ಲಿ ರೂ.50,000/- ಗಳನ್ನು ಹೂಡಿಕೆಯ ರೂಪದಲ್ಲಿ ಪ್ರೋತ್ಸಾಹ ನೀಡಲು ಹಾಗೂ ಅದರಿಂದ ಬರುವ ಬಡ್ಡಿ ಹಣವನ್ನು ಭತ್ಯೆಯಾಗಿ ಮದುವೆಯಾದ ಸಾಮಾನ್ಯ ವ್ಯಕ್ತಿ ಪಡೆಯಲು ಅನುವಾಗುವಂತೆ ಯೋಜನೆ ಅನುಷ್ಠಾನಗೊಳಿಸಿದೆ.

    ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮಾರುಕಟ್ಟೆ ಧಾರಣೆ | ಅಕ್ಟೋಬರ್ 29 | ಇಂದಿನ ಹತ್ತಿ ರೇಟ್ 

    ಈ ಸಂದರ್ಭದಲ್ಲಿ ತಾಲ್ಲೂಕು ಯೋಜನಾಧಿಕಾರಿ ರಾಘವೇಂದ್ರ, ತಾ.ಪಂ ವ್ಯವಸ್ಥಾಪಕ ಇರ್ಫಾನ್ ಹಾಗೂ ಎಂಆರ್‍ಡಬ್ಲ್ಯೂ ಮೈಲಾರಪ್ಪ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top