Connect with us

    ವೇದಾಂತ ಮೈನಿಂಗ್ ಗೇಟ್ ನಂ.3 ಬಂದ್ | ಬೀದಿಗೆ ಬಿದ್ದ ಲಾರಿ ಮಾಲಿಕರು, ಕಾರ್ಮಿಕರು, ಮೆಕ್ಯಾನಿಕ್‍ಗಳು

    ಬೀದಿಗೆ ಬಿದ್ದ ಲಾರಿ ಮಾಲಿಕರು, ಕಾರ್ಮಿಕರು, ಮೆಕ್ಯಾನಿಕ್‍ಗಳು

    ಮುಖ್ಯ ಸುದ್ದಿ

    ವೇದಾಂತ ಮೈನಿಂಗ್ ಗೇಟ್ ನಂ.3 ಬಂದ್ | ಬೀದಿಗೆ ಬಿದ್ದ ಲಾರಿ ಮಾಲಿಕರು, ಕಾರ್ಮಿಕರು, ಮೆಕ್ಯಾನಿಕ್‍ಗಳು

    ಚಿತ್ರದುರ್ಗ ನ್ಯೂಸ್.ಕಾಂ: ಚಿತ್ರದುರ್ಗ ಜಿಲ್ಲೆಯ ಆದಾಯದ ಮೂಲಗಳಲ್ಲಿ ಪ್ರಮುಖವಾಗಿರುವ ಗಣಿ ಕಂಪನಿಗಳಲ್ಲಿ ಅದಿರು ಸಾಗಾಣೆ ಮಾಡುವ ಲಾರಿಗಳ ಮೂಲಕ ನೂರಾರು ನೂರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ.

    ಚಿತ್ರದುರ್ಗ ತಾಲೂಕು ವ್ಯಾಪ್ತಿಯ ಭೀಮಸಮುದ್ರ ಬಳಿ ಗಣಿಗಾರಿಕೆ ನಡೆಸುತ್ತಿರುವ ವೇದಾಂತ ಗಣಿ ಕಂಪನಿಯಲ್ಲಿ ಸಾವಿರಾರು ಲಾರಿಗಳು ಗಣಿ ಸಾಗಾಟದ ಕೆಲಸವನ್ನು ಅನೇಕ ವರ್ಷಗಳಿಂದ ಮಾಡುತ್ತಿವೆ. ಆದರೆ, ವೇದಾಂತ ಕಂಪನಿಯಲ್ಲಿ ಕಳೆದ 5 ತಿಂಗಳಿಂದ ಗೇಟ್ ನಂ.3 ಬಂದ್ ಮಾಡಿರುವುದರಿಂದ ಲಾರಿಗಳ ಸಂಚಾರಕ್ಕೆ ತೊಡಕಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗದ ನೂರಾರು ಲಾರಿಗಳ ಮಾಲಿಕರು, ಚಾಲಕರು, ಕಾರ್ಮಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

    ತಿಂಗಳಾನುಗಟ್ಟಲೇ ಲಾರಿಗಳು ನಿಂತರೆ ಎಷ್ಟು ಜನರ ಜೀವನಕ್ಕೆ ತೊಂದರೆಯಾಗುತ್ತದೆ ಎನ್ನುವುದನ್ನು ಎಳೆಎಳೆಯಾಗಿ ಸರ್ಕಾರದ ಮುಂದೆ ಬಿಡಿಸಿಟ್ಟಿದ್ದಾರೆ. ಲಾರಿಗಳು ನಿಂತಿರುವುದರಿಂದ ಫೈನಾನ್ಸ್ ಅಥವಾ ಸಾಲದ ಕಂತು ಕಟ್ಟುವುದು ಸಮಸ್ಯೆಯಾಗಿದೆ. ಪ್ರತಿ ತಿಂಗಳು 1 ರಿಂದ 1.25 ಲಕ್ಷದವರೆಗೆ ಸಾಲದ ಕಂತು ಬಾಕಿಯಾಗುತ್ತದೆ. ಇದರೊಟ್ಟಿಗೆ ಚಾಲಕರು, ನಿರ್ವಾಹಕರು, ಕ್ಲೀನರ್‍ಗಳು, ಪಂಕ್ಷರ್ ಶಾಪ್‍ಗಳ ಕಾರ್ಮಿಕರು, ಮೆಕ್ಯಾನಿಕ್‍ಗಳು, ಹಮಾಲರು, ಟೈಯರ್ ಅಂಗಡಿಗಳು ಕೂಡಾ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕಾಗಿದೆ ಎಂದು ಲಾರಿ ಮಾಲಿಕರ ಸಂಘದ ಪದಾಧಿಕಾರಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾಗಿ ಚಿತ್ರದುರ್ಗದ ಕೆ.ಅನ್ವರ್ ಬಾಷ ಅವಿರೋಧ ಆಯ್ಕೆ

    ಮಂಗಳವಾರ ಬೆಳಗ್ಗೆ ಬೃಹತ್ ಪ್ರತಿಭಟನೆ ನಡೆಸಿದ ಲಾರಿ ಮಾಲಿಕರು, ರಾಜ್ಯ ಸರ್ಕಾರದ ಗಮನಕ್ಕೆ ಈ ವಿಷಯ ತಂದರೂ ಗಮನಹರಿಸುತ್ತಿಲ್ಲ. ಅರಣ್ಯ ಸಚಿವರಿಗೆ ನಮ್ಮ ಸಮಸ್ಯೆ ಮನವರಿಕೆ ಮಾಡಿಕೊಟ್ಟರೂ ಕ್ಯಾರೇ ಎನ್ನುತ್ತಿಲ್ಲ ಸ್ಥಳೀಯ ಶಾಸಕರು ಹೇಳಿದರೂ ಅವರ ಮಾತನ್ನು ಸರ್ಕಾರ ಕೇಳಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಭಟನಾ ಮೆರವಣಿಗೆ ವೇಳೆ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಹೋಗಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್.ಎಂ.ಎಸ್.ಟಿ. ಲಾರಿಗಳ ಮಾಲಿಕ ಫಯಾಜ್, ಹದಿನೈದು ವರ್ಷಗಳಿಂದ ವೇದಾಂತ ಗಣಿ ಗುತ್ತಿಗೆ ಕಂಪನಿಯಿಂದ ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ ಹಾಗೂ ಇತರೆ ಜಿಲ್ಲೆಗಳಿಂದ ಅಂದಾಜುಒಂದೂವರೆ ಸಾವಿರ ಲಾರಿಗಳು ಅದಿರು ಸಆಗಾಣೆ ಮಾಡುತ್ತಿವೆ. ಚಿತ್ರದುರ್ಗದಿಂದಲೇ ಒಂದು ಸಾವಿರ ಲಾರಿಗಳು ಅದಿರು ಸಾಗಾಣಿಕೆ ಮಾಡುತ್ತಿವೆ. ಆದರೆ, ವಿಧಾನಸಭೆ ಚುನಾವಣೆ ನಂತರ ಮೈನ್ಸ್ ನಿಂತಿದೆ. ಶಾಸಕರು, ಅರಣ್ಯ ಸಚಿವ ಹಾಗೂ ಗಣಿ ಸಚಿವರುಗಳಿಗೆ ಮನವಿ ನೀಡಿದ್ದೇವೆ. ಯಾರು ನಮ್ಮ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಇದರಿಂದ ಇದನ್ನೆ ನಂಬಿಕೊಂಡಿರುವ ಇಪ್ಪತ್ತರಿಂದ 25 ಸಾವಿರ ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ದೂರಿದರು.

    ಅಹಿಂದ ನಾಯಕ ಎಂದು ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ನೂರು ದಿನಗಳನ್ನು ಪೂರೈಸಿರುವುದನ್ನು ಬಿಟ್ಟರೆ ನಮಗೆ ಯಾವ ರೀತಿಯ ಉಪಯೋಗವೂ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಭಟನೆಯಲ್ಲಿ ಚಿತ್ರದುರ್ಗ ಅದಿರು ಮತ್ತು ಸರಕು ಸಾಮಾಗ್ರಿಗಳ ಸಾಗಾಣಿಕೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎನ್.ಮನ್ಸೂರ್ ಅಹಮದ್, ಉಪಾಧ್ಯಕ್ಷ ಸಿ.ರಮೇಶ್, ಕಾರ್ಯದರ್ಶಿ ಎಂ.ಡಿ.ಸಾಧಿಕ್, ಖಜಾಂಚಿ ಹೆಚ್.ಕೊಟ್ರೇಶ್, ರಾಜ್ಕುಮಾರ್, ಶರತ್ ಪಾಟೀಲ್, ಗುರುಸ್ವಾಮಿ, ಟಿ.ಎಂ.ಕೆ.ಜಾಫರ್, ನಿಜಾಮುದ್ದಿನ್, ಪಾಂಡು, ನವೀದ್ ಸೇರಿದಂತೆ ಜಿಲ್ಲೆಯ ಆರು ತಾಲ್ಲೂಕಿನ ಲಾರಿ ಮಾಲೀಕರು ಹಾಗೂ ಚಾಲಕರು ಭಾಗವಹಿಸಿದ್ದರು.

    (ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ  https://www.facebook.com/chitradurganews?mibextid=ZbWKwL)

    (ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ.

     https://chat.whatsapp.com/EQUQpKalYFT1fVcJDTDjCk)

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top