ಮುಖ್ಯ ಸುದ್ದಿ
Accident: ಲಾರಿ ಡಿಕ್ಕಿ ಹೆದ್ದಾರಿ ತಡೆಗೋಡೆ ಕುಸಿತ | ಚಾಲಕ ಮೃತ

CHITRADURGA NEWS | 25 JULY 2024
ಚಿತ್ರದುರ್ಗ: ಲಾರಿ ಡಿಕ್ಕಿಯಾಗಿ ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆಯೇ ಕುಸಿದು ಬಿದ್ದಿದೆ. ಲಾರಿ ಚಾಲಕ ಮೃತಪಟ್ಟಿದ್ದಾನೆ. ಬುಧವಾರ ತಡರಾತ್ರಿ ಘಟನೆ ನಡೆದಿದೆ.
ಬೆಂಗಳೂರಿನಿಂದ ಬೆಳಗಾವಿ ಕಡೆಗೆ ಸಂಚರಿಸುತ್ತಿದ್ದ ಲಾರಿಯೊಂದು ಕ್ಯಾದಿಗೆರೆ ಬಳಿ ತಡೆಗೋಡೆಗೆ ಡಿಕ್ಕಿಯಾಗಿದೆ. ಮುಂದೆ ಚಲಿಸುತ್ತಿದ್ದ ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ನಂತರ ತಡೆಗೋಡೆಗೆ ಅಪ್ಪಳಿಸಿದೆ. ಲಾರಿ ಗುದ್ದಿದ ರಭಸಕ್ಕೆ ತಡೆಗೋಡೆ ಪಕ್ಕದ ಸರ್ವೀಸ್ ರಸ್ತೆಗೆ ಉರುಳಿ ಬಿದ್ದಿದೆ.
ಇದನ್ನೂ ಓದಿ: ನಟ ದರ್ಶನ್ ಮನೆಗೆ ಬರೋ ವಿಚಾರ | ರೇಣುಕಾಸ್ವಾಮಿ ತಂದೆ ಫಸ್ಟ್ ರಿಯಾಕ್ಷನ್
ಘಟನೆಯಲ್ಲಿ ಲಾರಿ ಚಾಲಕ 35 ವರ್ಷದ ಶಂಕರ ಅಥರ್ಕಿ ಮೃತಪಟ್ಟಿದ್ದಾನೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು– ಪೂನಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ – 4ಕ್ಕೆ ಚಿತ್ರದುರ್ಗ ಬಳಿ ಹೊಸದಾಗಿ ಬೈಪಾಸ್ ನಿರ್ಮಿಸಲಾಗಿತ್ತು. ಚಿತ್ರದುರ್ಗ ಹೊರವಲಯದ ಕ್ಯಾದಿಗೆರೆಯಿಂದ ಸೀಬಾರಕ್ಕೆ ಬೈಪಾಸ್ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಯಲ್ಲಿ ಕ್ಯಾದಿಗೆರೆ ಬಳಿ ತಡೆಗೋಡೆ ಕುಸಿದಿದೆ.
