ಕ್ರೈಂ ಸುದ್ದಿ
ಖಾತೆ ಬದಲಾವಣೆಗೆ ಲಂಚ | ಲೋಕಾಯುಕ್ತರಿಂದ ಪಿಡಿಒ ಸೇರಿ ಇಬ್ಬರ ಬಂಧನ
ಚಿತ್ರದುರ್ಗ ನ್ಯೂಸ್.ಕಾಂ: ಮನೆಯ ಖಾತೆ ಬದಲಾವಣೆ ಮಾಡಿಕೊಡಲು ಲಂಚದ ಪಡೆಯುತ್ತಿದ್ದ ವೇಳೆ ಭರಮಸಾಗರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(PDO) ಹಾಗೂ ಹೊಳಲ್ಕೆರೆ ಸ್ಟಾಂಪ್ ವೆಂಡರನ್ನು ಲೋಕಾಯುಕ್ತರು ಬಂಧಿಸಿದ್ದಾರೆ.
ಭರಮಸಾಗರ ಪಿಡಿಓ ಶಿವಪ್ಪ ಹಾಗೂ ಹೊಳಲ್ಕೆರೆಯ ಸ್ಟಾಂಪ್ವೆಂಡರ್ ಕಲ್ಲೇಶ್ ಬಂಧಿತ ಆರೋಪಿಗಳು.
ಭರಮಸಾಗರದ ಬಿ.ಎನ್.ಕುಮಾರಸ್ವಾಮಿ ಎಂಬುವವರು ತಮ್ಮ ತಾಯಿಯ ಮರಣ ನಂತರ ಮನೆಯನ್ನು ತಮ್ಮ ಹಾಗೂ ಸಹೋಧರರ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡಲು ಗ್ರಾಮ ಪಂಚಾಯಿತಿಯಲ್ಲಿ ಪಿಡಿಓ ಶಿವಪ್ಪ ಅವರಿಗೆ 2023 ಅಕ್ಟೋಬರ್ ತಿಂಗಳಲ್ಲಿ ಮನವಿ ಸಲ್ಲಿಸಿದ್ದರು.
ಆದರೆ, ಖಾತೆ ಬದಲಾವಣೆ ಮಾಡಿಕೊಡದೇ ತಿಂಗಳ ಕಾಲ ಸತಾಯಿಸಿ ಕೊನೆಗೆ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ 10 ಸಾವಿರ ರೂ.ಗಳನ್ನು ಶಿವಪ್ಪ ಪಡೆದುಕೊಂಡಿದ್ದರು.
ಇದನ್ನೂ ಓದಿ: ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಲು 2 ಡಜನ್ ಆಕಾಂಕ್ಷಿಗಳು
ಉಳಿದ 40 ಸಾವಿರಕ್ಕೆ ಮತ್ತೆ ಬೇಡಿಕೆ ಇಟ್ಟಿದ್ದರಿಂದ ಕುಮಾರಸ್ವಾಮಿ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಡಿ.16 ರಂದು ಭರಮಸಾಗರ ಗ್ರಾಮ ಪಂಚಾಯಿತಿ ಕಚೇರಿ ಬಳಿ ಪಿಡಿಓ ಶಿವಪ್ಪ 40 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದಾರೆ. ಹಣವನ್ನು ಜಪ್ತಿ ಮಾಡಿ ಪಿಡಿಓ ಶಿವಪ್ಪ ಹಾಗೂ 2ನೇ ಆರೋಪೊ ಸ್ಟಾಂಪ್ ವೆಂಡರ್ ಹೊಳಲ್ಕೆರೆಯ ಕಲ್ಲೇಶ್ ಅವರನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ.
ಮುಂದಿನ ತನಿಖೆಯನ್ನು ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಆರ್.ವಸಂತಕುಮಾರ್ ನಡೆಸಲಿದ್ದಾರೆ. ಲೋಕಾಯುಕ್ತ ಎಸ್ಪಿ ಎನ್.ವಾಸುದೇವರಾವ್, ಉಪಾಧೀಕ್ಷಕರಾದ ಎನ್.ಮೃತ್ಯಂಜಯ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ವೈ.ಎಸ್.ಶಿಲ್ಪಾ, ಬಿ.ಮಂಜುನಾಥ, ಸಿಬ್ಬಂದಿಗಳಾದ ಜಿ.ಎಂ.ತಿಪ್ಪೇಸ್ವಾಮಿ, ಎಚ್.ಶ್ರೀನಿವಾಸ್, ಎಸ್.ಆರ್.ಪುಷ್ಪಾ, ಎಲ್.ಜಿ.ಸತೀಶ್, ಜಿ.ಎನ್.ಸಂತೋಷ್ ಕುಮಾರ್, ಎಸ್.ರಾಜೇಶ್, ಮಂಜುನಾಥ್, ಮಹಾಲಿಂಗಪ್ಪ, ಕೆ.ಟಿ.ಮಾರುತಿ, ಎನ್.ಎಲ್.ಶ್ರೀಪತಿ, ಶಿವಮೊಗ್ಗ ಠಾಣೆಯ ಸಿಬ್ಬಂದಿಗಳಾದ ಜಿ.ಸುರೇಂದ್ರ ಭಾಗವಹಿಸಿದ್ದರು.