ಮುಖ್ಯ ಸುದ್ದಿ
ಚಿತ್ರದುರ್ಗದಲ್ಲಿ SBI ಪ್ರಾದೇಶಿಕ ಕಚೇರಿ | ಸಂಸದ ಗೋವಿಂದ ಕಾರಜೋಳ ಪತ್ರ

CHITRADURGA NEWS | 12 FEBURARY 2025
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪ್ರಾದೇಶಿಕ ಕಚೇರಿ ತೆರೆಯುವಂತೆ ಸಂಸದ ಗೋವಿಂದ ಕಾರಜೋಳ ಮನವಿ ಮಾಡಿದ್ದಾರೆ.
ಈ ಹಿಂದೆ ಚಿತ್ರದುರ್ಗ ಲೋಕಸಭಾ ಸದಸ್ಯರು, ಕೇಂದ್ರ ಸಚಿವರೂ ಆಗಿದ್ದ ಎ.ನಾರಾಯಣಸ್ವಾಮಿ ಅವರು ಕೂಡಾ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಎಸ್‍ಬಿಐ ಪ್ರಾದೇಶಿಕ ಕಚೇರಿ ತೆರೆಯುವ ಸಂಬಂಧ ಬೇಡಿಕೆ ಸಲ್ಲಿಸಿದ್ದರು.

ಇದನ್ನೂ ಓದಿ: ಅಮಿತ್ ಶಾ ಭೇಟಿಯಾದ ಗೋವಿಂದ ಕಾರಜೋಳ | ಭದ್ರಾ ಮೇಲ್ದಂಡೆ ಯೋಜನೆ ಕುರಿತು ಚರ್ಚೆ
ಸದರಿ ಮನವಿಗೆ ಉತ್ತರವಾಗಿ ಬೆಂಗಳೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ ಸಂಸದರಿಗೆ ಪತ್ರ ಬರೆದು 4-5 ತಿಂಗಳಲ್ಲಿ ಪ್ರಾದೇಶಿಕ ಕಛೇರಿ ತೆರೆಯುವುದಾಗಿ 2021 ರಲ್ಲಿ ತಿಳಿಸಿದ್ದರು.
ಆದರೆ, ನಾಲ್ಕು ವರ್ಷ ಕಳೆದರೂ ಈ ಬಗ್ಗೆ ಕ್ರಮ ಕೈಗೊಳ್ಳದ ಕಾರಣ ಸಂಸದ ಗೋವಿಂದ ಕಾರಜೋಳ ಅವರು ಜನರಲ್ ಮ್ಯಾನೇಜರ್, ಎಸ್.ಬಿ.ಐ. ಬೆಂಗಳೂರು ಇವರಿಗೆ ಈ ಹಿಂದಿನ ಕ್ರಮವನ್ನು ನೆನಪಿಸಿ ಆದಷ್ಟು ಶೀಘ್ರವಾಗಿ ಎಸ್.ಬಿ.ಐ. ಪ್ರಾದೇಶಿಕ ಕಛೇರಿಯನ್ನು ತೆರೆಯುವಂತೆ ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: ನಿಧಿ ಆಸೆಗೆ ನರಬಲಿ | ಜಿಲ್ಲೆಯಲ್ಲಿ ನಡೆಯಿತು ಘೋರ ಕೃತ್ಯ
ಚಿತ್ರದುರ್ಗ ಜಿಲ್ಲೆಯ ಸಾಕಷ್ಟು ಜನಸಂಖ್ಯೆ ಹೊಂದಿದ್ದು, ಉತ್ತಮ ಆರ್ಥಿಕತೆಯೊಂದಿಗೆ ಅಭಿವೃದ್ದಿ ಹೊಂದುತ್ತಿರುವ ನಗರವಾಗಿದೆ.
ಇಲ್ಲಿನ ಜನರ ಆರ್ಥಿಕ ಪ್ರಗತಿಗಾಗಿ ಚಿತ್ರದುರ್ಗದಲ್ಲಿ ಎಸ್.ಬಿ.ಐ. ಪ್ರಾದೇಶಿಕ ಕಛೇರಿ ಅತ್ಯಗತ್ಯವಾಗಿದೆ ಎಂದು ಒತ್ತಿ ಹೇಳಿದ್ದಾರೆ.
ಪ್ರಾದೇಶಿಕ ಕಛೇರಿಯನ್ನು ಚಿತ್ರದುರ್ಗದಲ್ಲಿ ತೆರೆಯುವುದರಿಂದ ಚಿತ್ರದುರ್ಗದ ಜನರಿಗೆ ಬ್ಯಾಂಕಿಂಗ್ ಸೌಲಭ್ಯ ಹೆಚ್ಚಿಸುವುದಲ್ಲದೇ ದೇಶದ ಆರ್ಥಿಕ ಪ್ರಗತಿಗೆ ನೀವೂ ಸಹ ಸಹಕರಿಸದಂತಾಗುತ್ತದೆ ಎನ್ನುವುದನ್ನು ಪತ್ರದಲ್ಲಿ ವಿವರಿಸಿದ್ದಾರೆ. ಆದಷ್ಟು ತ್ವರಿತವಾಗಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಸದರು ಪತ್ರದಲ್ಲಿ ತಿಳಿಸಿದ್ದಾರೆ.
