ಮುಖ್ಯ ಸುದ್ದಿ
House; ಮನೆಗಳು ಅರ್ಹರಿಗೆ ಹಂಚಿಕೆಯಾಗಲಿ | ಸಂಸದ ಗೋವಿಂದ ಎಂ.ಕಾರಜೋಳ
CHITRADURGA NEWS | 18 OCTOBER 2024
ಚಿತ್ರದುರ್ಗ: ಪ್ರಸ್ತುತ ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ)ಯಡಿ ಚಿತ್ರದುರ್ಗ ಜಿಲ್ಲೆಗೆ 2024-25 ಸಾಲಿಗೆ ಸುಮಾರು 9308 ಮನೆ(House)ಗಳು ಮಂಜೂರಾಗಿವೆ.
ಕ್ಲಿಕ್ ಮಾಡಿ ಓದಿ: College: ಕಾಲೇಜು ಕಟ್ಟಡದ ಮೇಲಿಂದ ಜಿಗಿದು ವಿದ್ಯಾರ್ಥಿನಿ ಸಾವು
2011 ರ ಸಾಮಾಜಿಕ ಆರ್ಥಿಕ ಜನಗಣತಿ ಹಾಗೂ 2018 ರ ಬೇಡಿಕೆ ಸರ್ವೆ ಆಧಾರದ ಮೇಲೆ ಅರ್ಹ ಫಲಾನುಭವಿಗಳಿಗೆ ಮಾತ್ರ ಮನೆಗಳನ್ನು ಮಂಜೂರು ಮಾಡುವಂತೆ ಸಂಸದ ಗೋವಿಂದ ಕಾರಜೋಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಪ್ರಭಾವಿಗಳು ಗ್ರಾಮ ಪಂಚಾಯತಿ ಸದಸ್ಯರ ಹಾಗೂ ಅಧ್ಯಕ್ಷರ ಮೇಲೆ ಪ್ರಭಾವ ಬೀರಿ ಪದೇ ಪದೇ ವಸತಿ ಸೌಲಭ್ಯ ಪಡೆಯುವುದು ಸಾಮಾನ್ಯವಾಗಿಬಿಟ್ಟಿದೆ, ಹೀಗಾದಾಗ ವಸತಿ ಸಮಸ್ಯೆ ಬಗೆಹರಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಒಂದು ಅಂದಾಜಿನ ಪ್ರಕಾರ ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸುಮಾರು 67646 ವಸತಿ ರಹಿತರಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಪ್ರಾರಂಭವಾದಾಗಲೇ 2022 ರ ಒಳಗೆ ಎಲ್ಲರಿಗೂ ಸೂರು ಒದಗಿಸುವ ಭರವಸೆಯನ್ನು ಪ್ರಧಾನಮಂತ್ರಿ ಮೋದಿಜಿಯವರು ನೀಡಿದ್ದರು.
ಕ್ಲಿಕ್ ಮಾಡಿ ಓದಿ: APMC; ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಸೂರ್ಯಕಾಂತಿ ಧಾರಣೆ ಎಷ್ಟಿದೆ?
ಆದರೆ, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿಲ್ಲವಾದ್ದರಿಂದ ವಸತಿ ರಹಿತರ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ವಸತಿ ರಹಿತರೆಲ್ಲರಿಗೂ ಮನೆಗಳನ್ನು ಒದಗಿಸಬೇಕಾಗಿರುವುದು ಜನಪ್ರತಿನಿಧಿಗಳಾದ ನಮ್ಮ ಆದ್ಯ ಕರ್ತವ್ಯ ಎಂದು ನಾನು ಭಾವಿಸಿದ್ದೇನೆ. ಅರ್ಹ ಪಲಾನುಭವಿಗಳನ್ನು ಗುರುತಿಸಲು ಕಡ್ಡಾಯವಾಗಿ ಗ್ರಾಮಸಭೆಗಳು ನಡೆಯಬೇಕು.
ಗ್ರಾಮ ಸಭೆಗಳ ಮೂಲಕವೇ ಅರ್ಹ ಫಲಾನುಭವಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡುವ ಕೆಲಸ ಆಗಬೇಕು ಎಂದಿದ್ದಾರೆ, ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗಿದೆ.
ಕ್ಲಿಕ್ ಮಾಡಿ ಓದಿ: VV sagara; ವಿವಿ ಸಾಗರಕ್ಕೆ ಭರ್ಜರಿ ನೀರು | ಭರ್ತಿಗೆ ಐದು ಅಡಿ ಬಾಕಿ
ಯಾವ ತಾಲೂಕಿಗೆ ಎಷ್ಟು ಮನೆಗಳು:
2024-25 ನೇ ಸಾಲಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ 1978, ಚಿತ್ರದುರ್ಗಕ್ಕೆ 1609, ಹಿರಿಯೂರಿಗೆ 1389, ಹೊಳಲ್ಕೆರೆಗೆ 1568, ಹೊಸದುರ್ಗಕ್ಕೆ 1702, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ 1062 ಮನೆಗಳು ಹೀಗೆ ಒಟ್ಟು 9308 ಮನೆಗಳು ಮಂಜೂರಾಗಿವೆ.