Connect with us

    ರೈತರಿಗೆ ಶುಭಸುದ್ದಿ | ಕೃಷಿ ಹೊಂಡ, ಪಂಪ್‍ಸೆಟ್ ಖರೀಧಿಗೆ ಅನುಕೂಲ | ಕೃಷಿಭಾಗ್ಯ ಯೋಜನೆ ಮರುಜಾರಿ

    ಮುಖ್ಯ ಸುದ್ದಿ

    ರೈತರಿಗೆ ಶುಭಸುದ್ದಿ | ಕೃಷಿ ಹೊಂಡ, ಪಂಪ್‍ಸೆಟ್ ಖರೀಧಿಗೆ ಅನುಕೂಲ | ಕೃಷಿಭಾಗ್ಯ ಯೋಜನೆ ಮರುಜಾರಿ

    https://chat.whatsapp.com/Jhg5KALiCFpDwME3sTUl7x

    ಚಿತ್ರದುರ್ಗ ನ್ಯೂಸ್.ಕಾಂ: ಮಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಕೊಂಚ ನಿಟ್ಟುಸಿರು ಬಿಡುವಂತಹ ಯೋಜನೆ ರೂಪಿಸಿ ಮರು ಜಾರಿ ಮಾಡುತ್ತಿದೆ.

    ಸಂಧಿಗ್ದ ಪರಿಸ್ಥಿತಿಗಳಲ್ಲಿ ನೀರು ಸಂಗ್ರಹಿಸಿಟ್ಟುಕೊಂಡು ಬೆಳೆಗಳನ್ನು ಕಾಪಾಡಿಕೊಳ್ಳಲು ನೆರವಾಗುವ ಕೃಷಿ ಹೊಂಡ ನಿರ್ಮಾಣಕ್ಕೆ ಅನುಕೂಲವಾಗುವ ಕೃಷಿಭಾಗ್ಯ ಯೋಜನೆಯನ್ನು ರಾಜ್ಯ ಸರ್ಕಾರ ಮರು ಜಾರಿ ಮಾಡಿದೆ.

    ಚಿತ್ರದುರ್ಗ ಜಿಲ್ಲೆಯ 6 ತಾಲ್ಲೂಕಿನ ರೈತರು ಯೊಜನೆ ಲಾಭ ಪಡೆದುಕೊಳ್ಳಬಹುದು.
    ಕೃಷಿಭಾಗ್ಯ ಯೋಜನೆಯನ್ನು ಪ್ಯಾಕೇಜ್ ಮಾದರಿಯಲ್ಲಿ ಜಾರಿಗೆ ತರಲಾಗಿದೆ. ಕೃಷಿ ಹೊಂಡದ 6 ಘಟಕಗಳ ನಿರ್ಮಾಣಕ್ಕೆ ವಿವಿಧ ರೀತಿಯಲ್ಲಿ ಸಹಾಯಧನ ಒದಗಿಸಲಾಗುತ್ತಿದೆ.

    ಇದನ್ನೂ ಓದಿ: ಜಿಲ್ಲಾ-ತಾಲೂಕು ಪಂಚಾಯಿತಿಗೆ ಸದ್ಯದಲ್ಲೇ ಚುನಾವಣೆ

    ಕ್ಷೇತ್ರ ಬದು, ಕೃಷಿ ಹೊಂಡ ಹಾಗೂ ಪಾಲಿಥೀನ್ ಹೊದಿಕೆಗೆ ಸಾಮಾನ್ಯ ವರ್ಗದವರಿಗೆ ಶೇ.80 ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶೇ.90ರಷ್ಟು, ಕೃಷಿ ಹೊಂಡದ ಸುತ್ತ ತಂತಿ ಬೇಲಿ ನಿಮಾರ್ಣಕ್ಕೆ ಸಾಮಾನ್ಯ ವರ್ಗದವರಿಗೆ ಶೇ.40 ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶೇ.50ರಷ್ಟು, 10 ಹೆಚ್.ಪಿ. ಸಾಮಥ್ರ್ಯದ ನೀರು ಎತ್ತುವ ಪಂಪ್ ಸೆಟ್‍ಗಳಿಗೆ ಸಾಮಾನ್ಯ ವರ್ಗದವರಿಗೆ ಶೇ.50 ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶೇ.90ರಷ್ಟು, ತುಂತುರು ನೀರಾವರಿ ಘಟಕಕ್ಕೆ ಎಲ್ಲಾ ರೈತರಿಗೂ ಶೇ.90 ರಷ್ಟು ಸಹಾಯಧನ ನೀಡಲಾವುದು.

    ಕನಿಷ್ಟ 1 ಎಕರೆ ಸಾಗುವಳಿ ಭೂಮಿ ಹೊಂದಿರುವ ರೈತರು ಯೋಜನೆ ಸಮಗ್ರ ಉಪಯೋಗವನ್ನು ಪಡೆದುಕೊಳ್ಳಬಹುದು. ಡಿ.31 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಆಸಕ್ತರು ಚಿತ್ರದುರ್ಗ ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ, ತಾಲ್ಲೂಕ ಮಟ್ಟದ ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು ಎಂದು ಪಕ್ರಟಣೆಯಲ್ಲಿ ತಿಳಿಸಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top