ಹೊಳಲ್ಕೆರೆ
ಕೊಳಾಳು ಕೆಂಚಾವಧೂತರ ಹಂಪೆ ಹುಣ್ಣಿಮೆ ಮಹೋತ್ಸವ
CHITRADURGA NEWS | 21 APRIL 2024
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೊಳಾಳು ಗ್ರಾಮದಲ್ಲಿರುವ ಶ್ರೀ ಕೆಂಚಾವಧೂತರ ಗದ್ದುಗೆ ಹಾಗೂ ದೇವಸ್ಥಾನದಲ್ಲಿ ಏಪ್ರಿಲ್ 23 ಮಂಗಳವಾರ ಹಾಗೂ ಏಪ್ರಿಲ್ 24 ಬುಧವಾರ ಹಂಪೆ ಹುಣ್ಣಿಮೆ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಕ್ರೋಧಿನಾಮ ಸಂವತ್ಸರ ಚೈತ್ರ ಶುದ್ಧ ಪೌರ್ಣಿಮೆ ಏ.23 ರಾತ್ರಿ 10 ಗಂಟೆಗೆ ಕೊಳಾಳು ಕೆಂಚಾವಧೂತರ ದೇವಸ್ಥಾನದಲ್ಲಿ ಶ್ರೀ ದೇವಿ ಪಾರಾಯಣ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮ ನಡೆಯಲಿವೆ.
ಇದನ್ನೂ ಓದಿ; ಹಿರೇಗುಂಟನೂರು ದ್ಯಾಮಲಾಂಬ ದೇವಿ ಜಾತ್ರಾ ಮಹೋತ್ಸವ | ಸಿದ್ದತೆ ಪ್ರಾರಂಭ
ಏ.24 ಬುಧವಾರ ಬೆಳಗ್ಗೆ 10 ಗಂಟೆಗೆ ಸ್ವಾಮಿಯನ್ನು ಒಳಮಠದಿಂದ ಹೊರ ಮಠಕ್ಕೆ ನಡೆಮುಡಿಯಿಂದ, ಸಕಲ ಮಂಗಳವಾದ್ಯಗಳೊಂದಿಗೆ ಕರೆದೊಯ್ಯಲಾಗುವುದು.
ಮಧ್ಯಾಹ್ನ 1 ಗಂಟೆಗೆ ಹೊರಮಠದಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ ತಲೆ ಕೂದಲು ಕೊಡುವ ಕಾರ್ಯಕ್ರಮಗಳು ಜರುಗಲಿವೆ.
ಇದನ್ನೂ ಓದಿ; ಎರಡು ದಿನ ಕರೆಂಟ್ ಇರಲ್ಲ
ಏ.24 ಬುಧವಾರ ರಾತ್ರಿ 9 ಗಂಟೆಗೆ ಶ್ರೀ ಕೊಳಾಳು ಕೆಂಚಾವಧೂತರ ಹೂವಿನ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಈ ವೇಳೆ ನಂದಿಕೋಲು, ಭಜನೆ ಮತ್ತಿತರೆ ಸಾಂಸ್ಕøತಿಕ ತಂಡಗಳು ಭಾಗವಹಿಸಲಿವೆ.