ಮುಖ್ಯ ಸುದ್ದಿ
ಟೋಲ್ ಶುಲ್ಕ ರದ್ದುಗೊಳಿಸುವಂತೆ ಕರುನಾಡ ವಿಜಯಸೇನೆ ಒತ್ತಾಯ

CHITRADURGA NEWS | 18 FEBRUARY 2025
ಚಿತ್ರದುರ್ಗ: ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳಿಂದ ವಸೂಲು ಮಾಡುತ್ತಿರುವ ಟೋಲ್ ಶುಲ್ಕವನ್ನು ಸಂಪೂರ್ಣ ರದ್ದು ಮಾಡಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿ ಬಳಿ ಕರುನಾಡ ವಿಜಯಸೇನೆಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
Also Read: ಚಿತ್ರದುರ್ಗ ನಗರಸಭೆ ಬಜೆಟ್ | ಯಾವ ಕೆಲಸಕ್ಕೆ ಎಷ್ಟು ಅನುದಾನ ಮೀಸಲು | ಇಲ್ಲಿದೆ ಪೂರ್ಣ ವಿವರ

ವಾಹನಗಳನ್ನು ಖರೀಧಿಸುವವರು ಸರ್ಕಾರಕ್ಕೆ ರೋಡ್ ಟ್ಯಾಕ್ಸ್ ಕಟ್ಟಿರುತ್ತಾರೆ. ಹೀಗಿದ್ದೂ ಟೋಲ್ ಶುಲ್ಕ ಏಕೆ ವಸೂಲಿ ಮಾಡಬೇಕು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ರಾಷ್ಟ್ರೀಯ ಹೆದ್ದಾರಿ ಟೋಲ್‌ಗಳಲ್ಲಿ ಶುಲ್ಕ ವಸೂಲು ಮಾಡುವುದನ್ನು ನಿಲ್ಲಿಸಬೇಕು. ಕಳೆದ 15-20 ವರ್ಷಗಳಿಂದ ವಸೂಲಿ ಮಾಡಿದ್ದು, ಈಗಾಗಲೇ ಸಾವಿರಾರು ಕೋಟಿಯಾಗಿದೆ. ಇಷ್ಟೆಲ್ಲಾ ಹಣ ಸಂಗ್ರಹಿಸಿದರೂ ಟೋಲ್‌ಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯೂ ಇಲ್ಲದ ಸ್ಥಿತಿಯಿದೆ.
ಅಪಘಾತವಾದ ಕೂಡಲೆ ಚಿಕಿತ್ಸೆ ನೀಡಲು ಹೆದ್ದಾರಿ ಪ್ರಾಧಿಕಾರದಿಂದ ಅಲ್ಲಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಒತ್ತಾಯಿಸಿದರು.
Also Read: ಐಮಂಗಲ ಪೊಲೀಸರಿಂದ ಅಂತಾರಾಜ್ಯ ಕಳ್ಳನ ಬಂಧನ | 351 ಗ್ರಾಂ ಚಿನ್ನಾಭರಣ ವಶಕ್ಕೆ
ವೀಣಗೌರಣ್ಣ, ಗೋಪಿನಾಥ್, ಜಗದೀಶ್, ರತ್ನಮ್ಮ, ಮುಜಾಹಿದ್, ಮಧು, ಅಖಿಲೇಶ್, ಸುರೇಶ್, ಅವಿನಾಶ್, ತಿಪ್ಪೇಸ್ವಾಮಿ, ಕಮಲ ಇತರರಿದ್ದರು.
