ಮುಖ್ಯ ಸುದ್ದಿ
Kanaka Jayanti: ಕನಕ ಜಯಂತಿಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ | ಬಿ.ಟಿ.ಜಗದೀಶ್
CHITRADURGA NEWS | 16 NOVEMBER 2024
ಚಿತ್ರದುರ್ಗ: ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ( Kanaka Jayanti)ಯನ್ನು ನ.18 ರಂದು ನಗರದಲ್ಲಿ ಆಚರಣೆ ಮಾಡುತ್ತಿದ್ದು, ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕನಕಶ್ರೀ ಪುರಸ್ಕಾರ, ಸನ್ಮಾನ ಮಾಡಲಾಗುವುದು ಎಂದು ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ತಿಳಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ಉಪ್ಪರಿಗೇನಹಳ್ಳಿ ಮಹಿಳೆ ಕೊಲೆಗಾರರ ಬಂಧನಕ್ಕೆ ಗಡುವು | ನ.30 ರಿಂದ ಎಸ್‌ಪಿ ಕಚೇರಿ ಬಳಿ ಉಪವಾಸ ಸತ್ಯಾಗ್ರಹ | ಪ್ರಣವಾನಂದ ಶ್ರೀ
ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕನಕದಾಸರ ಜಯಂತಿಯನ್ನು ಮುಂದಿನ ದಿನಗಳಲ್ಲಿ ಗ್ರಾಮ, ಹೋಬಳಿ ಮಟ್ಟದಲ್ಲೂ ಆಚರಣೆ ಮಾಡುವ ಬಗ್ಗೆ ಕುರುಬರ ಸಂಘ ಆಲೋಚನೆ ನಡೆಸುತ್ತಿದೆ. ಇದಕ್ಕೆ ಬೇಕಾದ ತಯಾರಿಯನ್ನೂ ಮಾಡಿಕೊಳ್ಳಲಾಗುತ್ತಿದೆ ಎಂದರು.
ನ.18 ರಂದು ಜಿಲ್ಲಾಡಳಿತ, ಜಿಲ್ಲಾ ಕುರುಬರ, ತಾಲ್ಲೂಕು, ಮಹಿಳಾ ಕನಕ ನೌಕರರ ಹಾಗೂ ಸಮಾಜದ ಇತರೆ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ನಡೆಯಲಿರುವ ಕನಕದಾಸ ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ 9.30ಕ್ಕೆ ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಕನಕದಾಸರ ಪ್ರತಿಮೆ ಬಳಿ ಶ್ರೀ ಈಶ್ವರಾನಂದ ಸ್ವಾಮೀಜಿ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದರು.
ಈ ಮೆರವಣಿಗೆಯಲ್ಲಿ ಡೊಳ್ಳು, ಭಜನಾ ತಂಡ, ಸೋಬಾನೆ ತಂಡ, ಗೊರವರ ತಂಡ ನಂಧಿಧ್ವಜ, ಕರಡಿ ಚಮ್ಮಾಳ, ಕೋಲಾಟದಂತಹ ಸಾಂಸ್ಕೃತಿಕ ತಂಡದೊ0ದಿಗೆ ಮರೆವಣಿಗೆಯೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಡಿ ಗಾಂಧಿವೃತ್ತ, ಮೈಸೂರು ಬ್ಯಾಂಕ್ ವೃತ್ತ, ಮಾರ್ಗವಾಗಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತರಾಸು ರಂಗಮಂದಿರವನ್ನು ತಲುಪಲಿದೆ.
ಕ್ಲಿಕ್ ಮಾಡಿ ಓದಿ: ಜಿಲ್ಲಾ ಮಟ್ಟದ ಯುವಜನೋತ್ಸವ | ಪೂರ್ವಭಾವಿ ಸಭೆ
ತರಾಸು ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೊಪ್ಪಳ ವಿಶ್ವ ವಿದ್ಯಾಲಯದ ಉಪ ಕುಲಪತಿಗಳಾದ ಡಾ.ಬಿ.ಕೆ.ರವಿ ಕನಕದಾಸರ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ಕುರುಬ ಸಂಘದಿಂದ ನೀಡುವ ಕನಕಶ್ರೀ ಪ್ರಶಸ್ತಿಗೆ ವೀರಶೈವ ಸಮಾಜದ ಮುಖಂಡರಾದ ಷಣ್ಮುಖಪ್ಪ, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಸತೀಶ್, ಸಮಾಜ ಸೇವೆಯಲ್ಲಿ ಲಿಂಗವ್ವ ನಾಗತಿಹಳ್ಳಿಯ ತಿಪ್ಪೇಸ್ವಾಮಿ, ಸರ್ಕಾರಿ ನೌಕರರಲ್ಲಿ ಚೋಳಗಟ್ಟದ ಪಿಡಿಓ ರೂಪಕುಮಾರಿ, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಅವರಿಗೆ ಪ್ರಧಾನ ಮಾಡಲಾಗುವುದು ಎಂದು ಜಗದೀಶ್ ತಿಳಿಸಿದರು.
ನ.18 ರ ಸಂಜೆ 6.30ಕ್ಕೆ ಕನಕ ವೃತ್ತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಪತ್ರಿಕಾರಂಗದಲ್ಲಿ ಮಾಲತೇಶ್ ಅರಸ್, ಶಿಕ್ಷಣ ಕ್ಷೇತ್ರದಲ್ಲಿ ಯೋಗೀಶ್ ಸಹ್ಯಾದ್ರಿ, ಪರಿಸರ ಕ್ಷೇತ್ರದಲ್ಲಿ ಮಲ್ಲಿಕಾರ್ಜನಯ್ಯ, ಆರೋಗ್ಯವೇ ಭಾಗ್ಯ ಸಂಘದ ಅಧ್ಯಕ್ಷ ಪರಶುರಾಮ್, ಕೃಷಿ ಕ್ಷೇತ್ರದಲ್ಲಿ ಕ್ಯಾದಿಗೆರೆಯ ರೇಣುಕಾ ರಾಜ್ ಅವರನ್ನು ಸನ್ಮಾನಿಸಲಾಗುವುದು ಎಂದರು.
ಇದೇ ವೇಳೆ ಕಂಬದ ರಂಗಯ್ಯ ಅವರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ಕ್ಲಿಕ್ ಮಾಡಿ ಓದಿ: ಸಹ್ಯಾದ್ರಿ ದುರ್ಗ | ಬಯಲು ಸೀಮೆಯ ಹೊಸ ಶೇಂಗಾ ತಳಿ ಸಂಶೋಧನೆ | ಬಬ್ಬೂರು ಕೃಷಿ ವಿಜ್ಞಾನಿಗಳ ಸಾಧನೆ
ಜಿಲ್ಲಾ ಕುರುಬರ ಸಂಘದ ಗೌರವಾಧ್ಯಕ್ಷ ಎಚ್.ಮಂಜಪ್ಪ ಮಾತನಾಡಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಭರಮಸಾಗರ ಪಿಎಸ್‌ಐ ಸುರೇಶ್, ಸಾಹಿತಿಗಳಾದ ಸುಭಾಷ ಚಂದ್ರ, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ರಶ್ಮಿ ಮಲ್ಲಪ್ಪ, ಸಮಾಜ ಸೇವೆಯಲ್ಲಿ ಎಂ.ವಿ.ಮಾಲತೇಶ್, ಕಾರ್ಮಿಕ ಕ್ಷೇತ್ರದಲ್ಲಿ ತಿಪ್ಪೇಸ್ವಾಮಿ ಹಾಗೂ ಕೃಷಿ ಕ್ಷೇತ್ರದಲ್ಲಿ ಜಗನ್ನಾಥ್ ಅವರನ್ನೂ ಸನ್ಮಾನಿಸಲಾಗುತ್ತದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಓಂಕಾರ್, ಪ್ರೇಮ್, ಲೋಕೇಶ್, ರಾಜು, ಮಹಾಲಿಂಗಪ್ಪ, ನಾರಾಯಣಗೌಡ, ಉಮೇಶ್ ಮಾಲೇಶ್ ಇದ್ದರು.