ತಾಲೂಕು
ಕಡೂರು ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಗರಡಿ ಪೈಲ್ವಾನ್
ಚಿತ್ರದುರ್ಗ ನ್ಯೂಸ್.ಕಾಂ: ನೋಡಲೂ ಕಟ್ಟುಮಸ್ತಾಗಿ, ಅಜಾನುಬಾಹುವಿನಂತೆ ಕಾಣುವ ಕಡೂರು ಮಾಜಿ ಎಂಎಲ್ಎ ಬೆಳ್ಳಿ ಪ್ರಕಾಶ್ ಈಗ ಪೈಲ್ವಾನ್ ಆಗಿದ್ದಾರೆ.
ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಆಗಮಿಸಿದ್ದ ವೇಳೆ, ಮಾತನಾಡುತ್ತಿದ್ದ ಅವರು, ಕೌರವ ಪ್ರೊಡಕ್ಷನ್ನಲ್ಲಿ ನಿರ್ಮಾಣವಾಗಿರುವ ಗರಡಿ ಸಿನಿಮಾದಲ್ಲಿ ನಾನು ಪೈಲ್ವಾನ್ ಆಗಿದ್ದೇನೆ.
ನನ್ನಿಂದಲೇ ಸಿನಿಮಾ ಪ್ರಾರಂಭವಾಗುತ್ತದೆ. ನನ್ನ ಕೊಲೆಯೊಂದಿಗೆ ಅಂತ್ಯವಾಗುತ್ತದೆ ಎಲ್ಲರೂ ಚಿತ್ರಮಂದಿರಗಳಿಗೆ ಬಂದು ನೋಡಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಯುವಜೋಡಿ | ರಕ್ಷಣೆ ಕೋರಿ ಎಸ್ಪಿಗೆ ಮನವಿ
ನನ್ನ ಕ್ಷೇತ್ರ ಕಡೂರಿನ ಜನತೆ ಅನ್ನಪೂರ್ಣ ಚಿತ್ರಮಂದಿರದಲ್ಲಿ ವೀಕ್ಷಿಸಿ ಚಿತ್ರ ಗೆಲ್ಲಿಸಿ ಎಂದು ತಮ್ಮ ಅಭಿನಯದ ಕಥೆ ಹೇಳಿದರು.
ಗರಡಿ ಸಿನಿಮಾ ಪ್ರಚಾರದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ಮಾತನಾಡುತ್ತಾ, ಶಾಸಕರಾದ ಬೆಳ್ಳಿ ಪ್ರಕಾಶ್ ಕಥಾ ನಾಯಕರ ತಂದೆಯ ಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ. ಉತ್ತಮವಾಗಿ ಅಭಿನಯಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದರು.
ಮಾಜಿ ಸಚಿವ ಬಿ.ಸಿ.ಪಾಟೀಲ್ ಕೂಡಾ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ಸಾಕಷ್ಟು ನಿರೀಕ್ಷೆ ಹೊಂದಿರುವ ಈ ಚಿತ್ರ ನವೆಂಬರ್ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.