Connect with us

    Murugha math: ಮುರುಘಾ ಮಠದಲ್ಲಿ ಜ್ಞಾನ ದೀಪೋತ್ಸವ | ದೀಪಾರತಿ, ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಣೆ

    ಮುರುಘಾ ಮಠದಲ್ಲಿ ಜ್ಞಾನ ದೀಪೋತ್ಸವ

    ಮುಖ್ಯ ಸುದ್ದಿ

    Murugha math: ಮುರುಘಾ ಮಠದಲ್ಲಿ ಜ್ಞಾನ ದೀಪೋತ್ಸವ | ದೀಪಾರತಿ, ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಣೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 02 DECEMBER 2024

    ಚಿತ್ರದುರ್ಗ: ಐತಿಹಾಸಿಕ ಮುರುಘರಾಜೇಂದ್ರ ಬೃಹನ್ಮಠ(Murugha math)ದಲ್ಲಿ ದೀಪಾವಳಿಯಿಂದ ಆರಂಭವಾಗಿದ್ದ ಜ್ಞಾನದೀಪೋತ್ಸವ ಕಾರ್ಯಕ್ರಮವನ್ನು ಕಾರ್ತಿಕ ಮಾಸದಲ್ಲಿ ಸಮಾರೋಪಗೊಳಿಸಲಾಯಿತು.

    ಕ್ಲಿಕ್ ಮಾಡಿ ಓದಿ: ರೈತ ಉತ್ಪಾದಕ ಸಂಸ್ಥೆಗಳಿಂದ ಮೈಸೂರು ಕಿಸಾನ್ ಮಾಲ್ ಸ್ಥಾಪನೆ

    ಜ್ಞಾನ ದೀಪೋತ್ಸವದ ಅಂಗವಾಗಿ ಮುರುಗಿಯ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮಿಗಳ ಗದ್ದುಗೆಗೆ ವಿಶೇಷ ಅಲಂಕಾರ ಮಾಡಿ, ದೀಪಗಳನ್ನು ಬೆಳಗಿಸಿ ಪುಷ್ಪಾರ್ಚನೆ ಮಾಡಲಾಯಿತು.

    ಶ್ರೀಮಠದ ಹರಗುರು ಚರಮೂರ್ತಿಗಳು, ಭಕ್ತರು ಹಾಗೂ ಸಾರ್ವಜನಿಕರು ಶ್ರದ್ಧಾ ಭಕ್ತಿಯಿಂದ ಪುಷ್ಪಾರ್ಚನೆ, ದೀಪಾರತಿ ಮೂಲಕ ಭಕ್ತಿ ಸಮರ್ಪಣೆ ಮಾಡಿದರು. ನಂತರ ವಚನ ಚಿಂತನ ಕಾರ್ಯಕ್ರಮ ನಡೆಯಿತು.

    ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶಿರಸಂಗಿ ಮಠದ ಬಸವ ಮಹಾಂತ ಸ್ವಾಮೀಜಿ ಮಾತನಾಡಿ, ನಿಸರ್ಗದ ಸೂರ್ಯ ಯಾವತ್ತೂ ಯಾರ ಮೇಲೂ ಬೇಧ ಭಾವ ಎಣಿಸದೆ ತಾರತಮ್ಯ ತೋರದೆ ಬೆಳಕು ಕರುಣಿಸುವಾಗ, ಮನುಷ್ಯರಾದ ನಾವು ಮಾನವೀಯತೆಯೆಂಬ ಅಂತಃಕರಣ ತೆರೆಯಬೇಕು ಎಂದರು.

    ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಮೆಕ್ಕೆಜೋಳ, ಶೇಂಗಾ, ತೊಗರಿಬೆಳೆ ರೇಟ್ ಎಷ್ಟಿದೆ?

    ನಮ್ಮ ಹಬ್ಬಗಳಲ್ಲಿ ಪೂರ್ವಿಕರು ಅಂತರಂಗ ಬಹಿರಂಗ ಶುದ್ದಿಗೆ ಬೇಕಾದ ಆದರ್ಶ ಮೌಲ್ಯಗಳನ್ನು ಕೊಟ್ಟು ಹೋಗಿದ್ದಾರೆ. ಈ ಕಾರ್ತಿಕ ಮಾಸವನ್ನು ನಮ್ಮ ಅಂಕು ಡೊಂಕುಗಳನ್ನ ತಿದ್ದಿಕೊಳ್ಳಲು, ಕತ್ತಲೆಯಿಂದ ಬೆಳಕಿನಡೆಗೆ ಬರಲು ನಮ್ಮನ್ನು ನಾವು ಒಗ್ಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

    ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಜಗತ್ತನ್ನು ಉದ್ದರಿಸಲು ಅನೇಕ ದಾರ್ಶನಿಕರು ಮಹನೀಯರು, ಮಹಾತ್ಮರು ಬಂದು ಹೋಗಿದ್ದಾರೆ. ಅದರಲ್ಲಿ 12ನೇ ಶತಮಾನದ ಬಸವಾದಿ ಶರಣರು ಮುರುಘಾ ಪರಂಪರೆಯ ಪೂಜ್ಯರು ಸಮಾಜ ಸುಧಾರಣೆಗಾಗಿ ಈ ನಾಡಿಗೆ ಬೆಳಕನ್ನು ಪಸರಿಸಲು ತಮ್ಮ ಬದುಕನ್ನ ಮೀಸಲಿಟ್ಟು ಶ್ರಮಿಸಿದವರು ಎಂದು ಸ್ಮರಿಸಿದರು.

    ದೇಹ ಎನ್ನುವ ಪ್ರಣತೆಯಲ್ಲಿ ಜೀವ ಜ್ಯೋತಿ ಎನ್ನುವ ಪ್ರಣತೆ ಇದೆ. ದೀಪದಲ್ಲಿ ಎಣ್ಣೆ ಇರುವ ತನಕ ಉರಿಯುತ್ತದೆ. ಹಾಗೆ ದೇಹ ಎನ್ನುವ ಪ್ರಣತಿಯಲ್ಲಿ ಜೀವವಿದೆ ಆ ಪ್ರಣತೆಯಲ್ಲಿನ ಪ್ರಾಣ ವಾಯು ಹಾರುವ ಮುನ್ನ ಸತ್ಕಾರ್ಯಗಳನ್ನು ಮಾಡಬೇಕಿದೆ.

    ಕ್ಲಿಕ್ ಮಾಡಿ ಓದಿ: ಕುರಿ, ಮೇಕೆ ಪೂರೈಕೆ ಯೋಜನೆ | ಪರಿಶಿಷ್ಟ ಪಂಗಡದ ಸದಸ್ಯರಿಂದ ಅರ್ಜಿ ಆಹ್ವಾನ

    ಪುಣ್ಯ – ಪಾಪಗಳು ಬೇರೆ ಇಲ್ಲ. ಒಳ್ಳೆಯ ಕಾರ್ಯಗಳನ್ನು ಮಾಡುವುದೇ ಪುಣ್ಯ ಕೆಟ್ಟ ಕಾರ್ಯಗಳನ್ನು ಮಾಡುವುದೇ ಪಾಪ. ಸದಾ ಒಳ್ಳೆಯದನ್ನ ಮಾಡುವ ಮುಖಾಂತರ ಬಾಳನ್ನ ಹಸನು ಮಾಡಿಕೊಳ್ಳುವತ್ತ ನಮ್ಮ ಚಿತ್ತ ಇರಬೇಕೆಂದರು.

    ಮುರುಗೇಂದ್ರ ಸ್ವಾಮಿಗಳು ಮಾತನಾಡಿ, 12ನೇ ಶತಮಾನದ ಬಸವಾದಿ ಶಿವಶರಣರ ವಚನಗಳೇ ನಮಗೆ ದಾರಿದೀಪ. ಅವುಗಳನ್ನು ಅನುಸರಿಸದರೆ ನಾವು ಸದಾ ಸುಖಿಗಳಾಗಿರಬಹುದು ಎಂದು ನುಡಿದರು.

    ಉದ್ಯಮಿ ಕಿರಣ್‌ಕುಮಾರ್, ರಶ್ಮಿ, ಮುಖಂಡರಾದ ಎಸ್.ಷಣ್ಮುಖಪ್ಪ, ಶರಣಯ್ಯ, ಮುರುಗೇಶ್, ವಕೀಲರಾದ ಉಮೇಶ್, ಗುತ್ತಿನಾಡು ಪ್ರಕಾಶ್, ನಾಗರಾಜ್ ಸಂಗಮ್ ಮತ್ತಿತರರಿದ್ದರು.

    ಕ್ಲಿಕ್ ಮಾಡಿ ಓದಿ: SRS ಕಾಲೇಜಿನಲ್ಲಿ ಬಿ.ಇಡಿ ವಿದ್ಯಾರ್ಥಿಗಳ ಬೀಳ್ಕೊಡುಗೆ

    ಶ್ರೀಮಠದ ವಿದ್ಯಾರ್ಥಿಗಳು ಸಾಮೂಹಿಕ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಲಂಕೇಶ್ ದೇವರು ಸ್ವಾಗತಿಸಿದರು. ಟಿ.ಏನ್.ಲಿಂಗರಾಜು ಕಾರ್ಯಕ್ರಮ ನಿರ್ವಹಿಸಿದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top