Connect with us

    ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ನೇತೃತ್ವದಲ್ಲಿ ಜನತಾ ದರ್ಶನ | 230 ಅಹವಾಲುಗಳ ಸಲ್ಲಿಕೆ

    ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ನೇತೃತ್ವದಲ್ಲಿ ಜನತಾ ದರ್ಶನ

    ಮುಖ್ಯ ಸುದ್ದಿ

    ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ನೇತೃತ್ವದಲ್ಲಿ ಜನತಾ ದರ್ಶನ | 230 ಅಹವಾಲುಗಳ ಸಲ್ಲಿಕೆ

    ಚಿತ್ರದುರ್ಗ ನ್ಯೂಸ್.ಕಾಂ: ನಗರದ ತರಾಸು ರಂಗಮಂದಿರದಲ್ಲಿ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಅಧ್ಯಕ್ಷತೆಯಲ್ಲಿ ಚಿತ್ರದುರ್ಗ ತಾಲೂಕಿನ ಜನತಾ ದರ್ಶನ ನಡೆಯಿತು. ಜನತಾ ದರ್ಶನದಲ್ಲಿ 230 ಅರ್ಜಿಗಳು ಸಲ್ಲಿಕೆಯಾದವು.

    ಪ್ರಮುಖವಾಗಿ ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಈ ಹಿಂದೆ ಪಿಯುಸಿ ವಿಜ್ಞಾನ ವಿಭಾಗಕ್ಕೆ ಪ್ರವೇಶಕ್ಕೆ ಅವಕಾಶವಿತ್ತು, ಆದರೆ ಈಗ ಕೊಡುತ್ತಿಲ್ಲ. ಸದ್ಯ ನಗರದಲ್ಲಿ ಕೇವಲ 02 ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ಪಿಯುಸಿ ವಿಜ್ಞಾನ ತರಗತಿಗೆ ಪ್ರವೇಶವಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಪ್ರತಿಭಾವಂತ ಮಕ್ಕಳಿಗೆ ತೊಂದರೆಯಾಗುತ್ತಿದೆ. ಈ ಹಿಂದಿನಂತೆಯೇ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ ಸಾರ್ವಜನಿಕರು ಕೋರಿದರು.

    ಪುಟ್‍ಪಾತ್ ಒತ್ತುವರಿ ತೆವಿಗೆ ಮನವಿ:

    ಚಿತ್ರದುರ್ಗ ನಗರದ ಪ್ರಮುಖ ಬಿ.ಡಿ. ರಸ್ತೆ ಹಾಗೂ ತುರುವನೂರು ರಸ್ತೆಯಲ್ಲಿ ಫುಟ್‍ಪಾತ್‍ಗಳನ್ನು ಅಂಗಡಿಕಾರರೇ ಬಳಸುತ್ತಿದ್ದಾರೆ, ಪಾದಚಾರಿಗಳು ಓಡಾಡಲು ಜಾಗವಿಲ್ಲದಂತಾಗಿದೆ.

    ನಗರದ ತ.ರಾ.ಸು. ರಂಗಮಂದಿರದ ಶೌಚಾಲಯಗಳು ಹಾಳಾಗಿದ್ದು, ಸರಿಪಡಿಸಬೇಕಿದೆ, ನಗರದ ರಾಜಕಾಲುವೆಗಳು ಒತ್ತುವಾರಿಯಾಗಿದ್ದು, ತೆರವಿಗೆ ನಗರಸಭೆ ಕ್ರಮ ಕೈಗೊಳ್ಳಬೇಕು, ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರು ಸಮಸ್ಯೆ, ಜಮೀನಿನ ಸರ್ವೆ ಮಾಡಿಕೊಡುವುದು, ನಿವೇಶನ ಹಾಗೂ ಮನೆ ಕೋರಿಕೆ ಸೇರಿದಂತೆ ವಿವಿಧ ಅಹವಾಲುಗಳು ಸಲ್ಲಿಕೆಯಾದವು.

    ಇದನ್ನೂ ಓದಿ: ಚಿತ್ರದುರ್ಗ ವೈದ್ಯಕೀಯ ಕಾಲೇಜಿನ ಎಲ್ಲ ಸೀಟುಗಳು ಭರ್ತಿ

    ಈ ವೇಳೆ ಸಾರ್ವಜನಿಕರನ್ನು ಉದ್ದೇಶಸಿ ಮಾತನಾಡಿದ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ), ಚಿತ್ರದುರ್ಗ ತಾಲ್ಲೂಕಿನ 158 ಗ್ರಾಮಗಳಿಗೆ ವಾಣಿವಿಲಾಸ ಸಾಗರ ಜಲಾಶಯದಿಂದ ಶುದ್ಧ ಕುಡಿಯುವ ನೀರು ಪೂರೈಸುವ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದರು.

    ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಹಳ್ಳಿಗಳಲ್ಲಿನ ಚರಂಡಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಲು ಈಗಾಗಲೆ ಸೂಚನೆ ನೀಡಲಾಗಿದೆ. ಚರಂಡಿಗಳ ಸ್ವಚ್ಛತೆ ಬಳಿಕ, ಗ್ರಾಮಸ್ಥರು ಪುನಃ ಚರಂಡಿಗಳಿಗೆ ಕಸವನ್ನು ಸುರಿಯಬಾರದು ಎಂದು ಮನವಿ ಮಾಡಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೂರದೃಷ್ಟಿ ಫಲವಾಗಿ ಸರ್ಕಾರಿ ಅಧಿಕಾರಿಗಳೇ ಜನರ ಬಳಿಗೆ ತೆರಳಿ ಅಹವಾಲುಗಳನ್ನು ಆಲಿಸುವಂತೆ ಆಗಿದೆ.

    ಜನತಾ ದರ್ಶನದಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ತಡಮಾಡದೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು. 3 ತಿಂಗಳ ನಂತರ ಚಿತ್ರದುರ್ಗ ತಾಲೂಕಿಗೆ ಸಂಬಂಧಿಸಿದಂತೆ ನಡೆಯುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಇಂದು ಸಲ್ಲಿಸಿದ ಅರ್ಜಿಗಳಿಗೆ ಪರಿಹಾರ ದೊರಕದಿದ್ದರೆ ಜನಪ್ರತಿನಿಧಿಗಳ ಗಮನಕ್ಕೆ ತರಬಹದು ಎಂದರು.

    ಈ ಹಿಂದೆ ಚಿತ್ರದುರ್ಗ ತಾಲೂಕಿನಲ್ಲಿ ಪರಿಶಿಷ್ಟ ಜಾತಿ/ ಪ.ವರ್ಗದವರಿಗೆ ಮಂಜೂರು ಮಾಡಿದ್ದ 822 ಮನೆಗಳ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು, ಈಗ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

    ಬರಗಾಲದ ಹಿನ್ನಲೆಯಲ್ಲಿ ಗ್ರಾಮೀಣ ಭಾಗದಿಂದ ವಲಸೆ ತಪ್ಪಿಸಲು ಮನರೇಗಾದಡಿ 150 ದಿನಗಳ ಕೆಲಸ ನೀಡಲಾಗುತ್ತಿದೆ. ಇದರ ಅಡಿ ರೈತರು ಜಮೀನುಗಳಿಗೆ ಬದುಗಳನ್ನು ನಿರ್ಮಿಸಿಕೊಳ್ಳಬಹುದು ಎಂದರು.

    ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾತನಾಡಿ, ಸರ್ಕಾರದ ಆದೇಶದಂತೆ ಸೆ.25 ರಂದು ಹಿರಿಯೂರಿಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾತ್ತು. 15 ದಿನಗಳಿಗೊಮ್ಮೆ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗುವುದು.

    ಜನರು ವಿವಿಧ ಕಡೆಗಳಿಂದ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಕಚೇರಿಗೆ ಬಂದು ಅಹವಾಲು ಸಲ್ಲಿಸುತ್ತಾರೆ. ಸ್ವೀಕರಿಸಿದ ಜನರ ಅಹವಾಲುಗಳನ್ನು ವಿಳಂಬ ಮಾಡದೇ ತಕ್ಷಣೆವೇ ಪರಿಹಾರ ನೀಡಲಾಗುವುದು.

    ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ನೇತೃತ್ವದಲ್ಲಿ ಜನತಾ ದರ್ಶನ

    ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ನೇತೃತ್ವದಲ್ಲಿ ಜನತಾ ದರ್ಶನ

    ಸಕಾಲದಲ್ಲಿ ಜನರಿಗೆ ಸೇವಗಳನ್ನು ನೀಡಿ ಸರ್ಕಾರದ ಯೋಜನೆಗಳನ್ನು ತಲುಪಿಸಲಾಗುವುದು. ಜನರು ಈ ಜನತಾ ದರ್ಶನ ಕಾರ್ಯಕ್ರಮ ಉಪಯೋಗಿಸಿಕೊಂಡು ಮನವಿ ಸಲ್ಲಿಸಬೇಕು. ಹೀಗೆ ಸ್ವೀಕರಿಸಿದ ಅರ್ಜಿಗಳನ್ನು ಐಪಿಜಿಆರ್‍ಎಸ್ ತಂತ್ರಾಂಶದಲ್ಲಿ ಅಳವಡಿಸಿ, ಸಂಬಂಧಪಟ್ಟ ಇಲಾಖೆಗೆ ಕಳುಹಿಸಿಕೊಡಲಾಗುವುದು. ಅರ್ಜಿಗಳು ವಿಲೇವಾರಿ ಆಗುವವರೆಗೂ ತಂತ್ರಾಂಶದ ಮೂಲಕ ಮೇಲ್ವಿಚಾರಣೆ ಮಾಡಲಾಗುವುದು ಎಂದರು.

    ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ವಿದ್ಯಾವಿಕಾಸ ಯೋಜನೆಯಡಿ ತಾಲೂಕಿನ 25,472 ಮಕ್ಕಳಿಗೆ ಎರಡನೇ ಹಂತದ ಶಾಲಾ ಸಮವಸ್ತ್ರ ವಿತರಣೆಗೆ ಸಾಂಕೇತಿಕವಾಗಿ ಮಕ್ಕಳಿಗೆ ಸಮವಸ್ತ್ರ ವಿತರಿಸುವ ಮೂಲಕ ಚಾಲನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗೃಹಲಕ್ಷ್ಮೀ, ಸುಕನ್ಯಾ ಸಮೃದ್ದಿ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ನೀಡಿದರು.

    ಕಂದಾಯ ಇಲಾಖೆ ಇಂದಿರಾ ಗಾಂಧಿ ವೃದ್ಧಾಪ್ಯ ಯೋಜನೆಗಳ ಫಲಾನುಭವಿಗಳ ಅರ್ಜಿಯನ್ನು ಸ್ಥಳದಲ್ಲಿಯೇ ಸ್ವೀಕರಿಸಿ, ಮಂಜೂರಾತಿ ಪತ್ರದ ಆದೇಶ ಪ್ರತಿಗಳನ್ನು ವಿತರಿಸಲಾಯಿತು. ಅಂಗವಿಕಲರ ವೇತನ ಭತ್ಯೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು.

    94ಸಿ ಅಡಿ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿಕೊಂಡ ಮನೆಗಳನ್ನು ಸಕ್ರಮಗೊಳಿಸಿದ ಹಕ್ಕು ಪತ್ರಗಳನ್ನು ಫಲಾನುಭವಿಗೆ ನೀಡಲಾಯಿತು. ಇದರಿಂದ ಫಲಾನುವಿಗಳಿಗೆ ಮನೆಯ ಒಡೆತನದ ಹಕ್ಕು ಲಭಿಸಿ ಅದನ್ನು ಪರಭಾರೆ ಹಾಗೂ ಬ್ಯಾಂಕಿನಲ್ಲಿ ಸಾಲ ಪಡೆದು ಅಭಿವೃದ್ಧಿ ಪಡಿಸಲು ಅವಕಾಶ ಲಭಿಸಿದೆ.

    ಕೃಷಿ ಇಲಾಖೆ ರೈತ ಆತ್ಮಹತ್ಯೆ ಪ್ರಕರಣದಲ್ಲಿ ರೈತರ ಕುಟುಂಬದವರಿಗೆ ಪರಿಹಾರ ಧನ ವಿತರಿಸಲಾಯಿತು. ರೇμÉ್ಮ ಇಲಾಖೆ ವತಿಯಿಂದ 100 ಚದುರ ಅಡಿಯ ರೇμÉ್ಮ ಮನೆ ನಿರ್ಮಾಣಕ್ಕೆ ಸಹಾಯಧನ ಆಯ್ಕೆಯಾದ ರೈತರಿಗೆ ಧನ ಸಹಾಯದ ಚೆಕ್‍ಗಳನ್ನು ವಿತರಿಸಲಾಯಿತು.

    ಜಿ.ಪಂ. ಸಿಇಓ ಎಸ್.ಜಿ.ಸೋಮಶೇಖರ್, ಉಪವಿಭಾಗಧಿಕಾರಿ ಎಂ.ಕಾರ್ತಿಕ್, ತಹಶೀಲ್ದಾರ್ ಡಾ.ನಾಗವೇಣಿ, ತಾ.ಪಂ. ಇ.ಓ ಹನುಮಂತಪ್ಪ, ನಗರಸಭೆ ಪೌರಾಯುಕ್ತೆ ರೇಣುಕಾ ಮತ್ತಿತರರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top