Connect with us

    ಸರ್ಕಾರದ ಆದೇಶಕ್ಕೆ ಇರೋ ಕಿಮ್ಮತ್ತು ಇಷ್ಟೇನಾ | ಕೆ. ಟಿ. ಶಿವಕುಮಾರ್

    ಕರುನಾಡ ವಿಜಯ ಸೇನೆ ವತಿಯಿಂದ ಪ್ರತಿಭಟನೆ

    ಮುಖ್ಯ ಸುದ್ದಿ

    ಸರ್ಕಾರದ ಆದೇಶಕ್ಕೆ ಇರೋ ಕಿಮ್ಮತ್ತು ಇಷ್ಟೇನಾ | ಕೆ. ಟಿ. ಶಿವಕುಮಾರ್

    CHITRADURGA NEWS | 28  FEBRUARY 2024
    ಚಿತ್ರದುರ್ಗ: ಶೇ. 65 ರಷ್ಟು ಕನ್ನಡ ನಾಮಫಲಕಗಳನ್ನು ಹಾಕಿದಂತೆ ಕಾಣಿಸುವುದಿಲ್ಲ ಇದರಿಂದ ಸರ್ಕಾರದ ಆದೇಶಕ್ಕೆ ಕಿಮ್ಮತ್ತಿಲ್ಲವೆನ್ನುವುದು ಗೊತ್ತಾಗುತ್ತದೆ ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಪ್ರತಿಭಟನೆಯಲ್ಲಿ ಹೇಳಿದರು.

    ಇದನ್ನೂ ಓದಿ: ರೈತರಿಂದ ಪಂಜಿನ ಮೆರವಣಿಗೆ | ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗೆ ಧಿಕ್ಕಾರ

    ನಗರದಲ್ಲಿ ಮಂಗಳವಾರ ಕರುನಾಡ ವಿಜಯ ಸೇನೆ ವತಿಯಿಂದ ಶೇ. 65 ರಷ್ಟು ಕನ್ನಡ ನಾಮಫಲಕಗಳಿರಬೇಕೆಂದು ಪ್ರತಿಭಟಿಸಿ. ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ ಅವರು ಜಿಲ್ಲಾಡಳಿತವಾಗಲಿ, ನಗರ ಸಭೆಯಾಗಲಿ ಇದರ ಬಗ್ಗೆ ಆಸಕ್ತಿತೋರಿಸುತ್ತಿಲ್ಲ. ಕೂಡಲೇ ಆಂಗ್ಲ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸಿ ಕನ್ನಡ ನಾಮಫಲಗಳನ್ನು ಅಳವಡಿಸುವಂತೆ ಸೂಚಿಸಬೇಕು, ಇಲ್ಲವಾದಲ್ಲಿ ಮಾರ್ಚ್ 4ರಂದು ಕರುನಾಡ ವಿಜಯ ಸೇನೆ ವತಿಯಿಂದ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿ ಇಂಗ್ಲಿಷ್ ನಾಮಫಲಕಗಳನ್ನು ಕಿತ್ತೆಸಲಾಗುವುದೆಂದು ಎಂದು ಎಚ್ಚರಿಸಿದರು.

    ಇದನ್ನೂ ಓದಿ: ಸಂಗಮೇಶ್ವರ ಜಯಂತಿ ಸರಳ ಆಚರಣೆ | ಕುಂಚಿಟಿಗ ಮಠದ ಶ್ರೀ ಶಾಂತವೀರ ಮಹಾ ಸ್ವಾಮೀಜಿ

    ಪ್ರತಿ ಅಂಗಡಿ ಮುಂಗಟ್ಟು, ಶಾಲೆ, ಕಂಪನಿಗಳು ಹಾಗೂ ವ್ಯಾಪಾರ ವಹಿವಾಟು ನಡೆಸುವ ಸ್ಥಳಗಳಲ್ಲಿ ಶೇಕಡ 65 ರಷ್ಟು ಕನ್ನಡದಲ್ಲಿ ನಾಮಫಲಕಗಳಿರಬೇಕೆಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದೇಶ ಹೊರಡಿಸಿ ಫೆಬ್ರವರಿ 28 ರ ಗಡುವು ನೀಡಿದ್ದಾರೆ.

    ಗಾಂಧಿ ವೃದ್ಧ ದಿಂದ ರಸ್ತೆ ಎರಡು ಬದಿಗಳಲ್ಲಿರುವ ಅಂಗಡಿಯವರಿಗೆ ಗುಲಾಬಿ ಹೂವು ನೀಡುವ ಮೂಲಕ ಪ್ರತಿಭಟನಾಕಾರರು ಆಂಗ್ಲದ ಬದಲು ಕನ್ನಡ ನಾಮಫಲಕಗಳನ್ನು ಅಳವಡಿಸುವಂತೆ ಕೋರಿದರು.

    ಇದನ್ನೂ ಓದಿ: ಚಿತ್ರದುರ್ಗದ ಟಿ.ಸುಮಾ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆ | ಅಪ್ಪ ಆಟೋ ಡ್ರೈವರ್ ಮಗಳು ಜಡ್ಜ್ | ಅಪರೂಪದ ಸಾಧನೆಗೆ ಕೋಟೆನಾಡು ಸಾಕ್ಷಿ

    ಕರ್ನಾಟಕ ರಾಜ್ಯ ಸರ್ಕಾರ ನಾಡಿನಾದ್ಯಂತ ಶೇ. 65 ರಷ್ಟು ಕನ್ನಡ ನಾಮಫಲಕಗಳಿರಬೇಕೆಂದು ಎಂದು ಆದೇಶ ಹೊರಡಿಸಿದ್ದರು ಯಾರು ಪಾಲನೆ ಮಾಡುತ್ತಿಲ್ಲದಿರುವುದನ್ನು ಖಂಡಿಸಿ ಕನ್ನಡ ವಿಜಯ ಸೇನೆ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

    ಮಹಿಳಾ ಘಟಕದ ಜಿಲ್ಲಾಧ್ಯಕ್ಷ ವೀಣಾ ಗೌರಣ್ಣ, ಉಪಾಧ್ಯಕ್ಷ ರತ್ನಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಕಾರ್ಯದರ್ಶಿಗಳಾದ ಅಣ್ಣಪ್ಪ, ಜಗದೀಶ್ ಸಿ, ಯುವ ಘಟಕದ ಅಧ್ಯಕ್ಷ ನಾಗರಾಜ್ ಮುತ್ತು, ನಗರಾಧ್ಯಕ್ಷ ಅವಿನಾಶ್, ತಾಲೂಕು ಅಧ್ಯಕ್ಷ ಎನ್.ಸಂತೋಷ್, ಅಖಿಲೇಶ್, ರಾಜಣ್ಣ, ಹರೀಶ್ ಕುಮಾರ್, ಕಮಲಮ್ಮ ಸೇರಿದಂತೆ ಇನ್ನೂ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top