ಮುಖ್ಯ ಸುದ್ದಿ
Application; ಗಂಭೀರ ಕಾಯಿಲೆ ಆರೈಕೆ ಮಾಡುವವರಿಂದ ಪ್ರೊತ್ಸಾಹ ಧನಕ್ಕೆ ಅರ್ಜಿ ಆಹ್ವಾನ
Published on
CHITRADURGA NEWS | 05 OCTOBER 2024
ಚಿತ್ರದುರ್ಗ: ಸೆರೆಬ್ರಲ್ ಪಾಲ್ಸಿ, ಮಸ್ಕುಲರ್ ಡೆಸ್ಟ್ರೋಫಿ, ಪಾರ್ಕಿನ್‍ಸನ್ಸ್ ಮತ್ತು ಮಲ್ಟಿಪಲ್ ಸ್ಕ್ಲೋರೊಸಿಸ್ ನಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿರುವರನ್ನು ಆರೈಕೆ ಮಾಡುತ್ತಿರುವರಿಗೆ, ಪ್ರತಿ ಮಾಹೆ ರೂ.1000/- ಪ್ರೋತ್ಸಾಹ ಧನ ನೀಡಲು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ಆಫ್‍ಲೈನ್ ಮೂಲಕ ಅರ್ಜಿ(Application) ಆಹ್ವಾನಿಸಲಾಗಿದೆ.
ಕ್ಲಿಕ್ ಮಾಡಿ ಓದಿ: APMC: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ಧಾರಣೆ
ಯೋಜನೆಯ ಲಾಭ ಪಡೆಯಲು ವಿಕಲಚೇತನರ ಆಧಾರ ಹಾಗೂ ವಿಶೇಷ ಗುರುತಿನ ಚೀಟಿ, ವೈದ್ಯಕೀಯ, ಜಾತಿ, ಆದಾಯ, ನಿವಾಸಿ ಧೃಡೀಕರಣ ಪ್ರಮಾಣ ಪತ್ರ, ಇತ್ತೀಚಿನ ಭಾವಚಿತ್ರ ಹಾಗೂ ಆರೈಕೆದಾರರ ಬ್ಯಾಂಕ್ ಖಾತೆ ಪುಸ್ತಕದ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ನಮೂನೆಯನ್ನು www.dwdsc.kar.nic.in ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ನೇರವಾಗಿ ಜಿಲ್ಲಾ, ತಾಲ್ಲೂಕು, ಗ್ರಾಮೀಣ ವಿವಿದೊದ್ದೇಶ ಪುನರ್ವಸತಿ ಕಾರ್ಯರ್ತರಿಂದ ಅರ್ಜಿ ಪಡೆದುಕೊಂಡು ಭರ್ತಿ ಮಾಡಿದ ಅರ್ಜಿಗಳನ್ನು ಅವರ ಮೂಲಕವೇ ಸಲ್ಲಿಸಬಹುದು.
ಕ್ಲಿಕ್ ಮಾಡಿ ಓದಿ: Rain Report; ನಾಯಕನಹಟ್ಟಿಯಲ್ಲಿ 91.5 ಮಿ.ಮೀ ಮಳೆ | ತುಂಬಿ ಹರಿದ ಹಳ್ಳಗಳು
ಹೆಚ್ಚಿನ ಮಾಹಿತಿಗಾಗಿ, ಚಿತ್ರದುರ್ಗ-9880821934, ಚಳ್ಳಕೆರ-9611266930, ಹಿರಿಯೂರು-9902888901, ಹೊಳಲ್ಕೆರೆ-9740030227, ಹೊಸದುರ್ಗ-9741829990, ಮೊಳಕಾಲ್ಮೂರು 9742725576 ಹಾಗೂ ಜಿಲ್ಲಾ ಕಚೇರಿ ದೂರವಾಣಿ ಸಂಖ್ಯೆ-08194-235284 ಸಂಪರ್ಕಿಸುವಂತೆ ಅಂಗವಿಕಲ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
Continue Reading
You may also like...
Related Topics:Application, cerebral palsy, Chitradurga, Chitradurga news, Chitradurga Updates, disease, Incentive money, Kannada Latest News, Kannada News, Multiple sclerosis, muscular dystrophy, Parkinson's, ಅರ್ಜಿ, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಲೇಟೆಸ್ಟ್ ಸುದ್ದಿ, ಕನ್ನಡ ಸುದ್ದಿ, ಕಾಯಿಲೆ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಸುದ್ದಿ, ಪಾರ್ಕಿನ್‍ಸನ್ಸ್, ಪ್ರೊತ್ಸಾಹ ಧನ, ಮಲ್ಟಿಪಲ್ ಸ್ಕ್ಲೋರೊಸಿಸ್, ಮಸ್ಕುಲರ್ ಡೆಸ್ಟ್ರೋಫಿ, ಸೆರೆಬ್ರಲ್ ಪಾಲ್ಸಿ
Click to comment