By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ನಾಳೆ ಜಾಗತಿಕ ಲಿಂಗಾಯತ ಮಹಾಸಭಾ ಉದ್ಘಾಟನೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ನಾಳೆ ಜಾಗತಿಕ ಲಿಂಗಾಯತ ಮಹಾಸಭಾ ಉದ್ಘಾಟನೆ

ಮುಖ್ಯ ಸುದ್ದಿ

ನಾಳೆ ಜಾಗತಿಕ ಲಿಂಗಾಯತ ಮಹಾಸಭಾ ಉದ್ಘಾಟನೆ

News Desk Chitradurga News
Last updated: 28 July 2024 15:07
News Desk Chitradurga News
11 months ago
Share
ಪತ್ರಿಕಾಗೋಷ್ಟಿಯಲ್ಲಿ ಜಿ.ಡಿ. ಕೆಂಚವೀರಪ್ಪ, ನಂದೀಶ್, ಧನಂಜಯ, ಬಸವರಾಜಪ್ಪ, ಹಳಿಯೂರು ಸಿದ್ದಪ್ಪ ಇದ್ದರು
ಪತ್ರಿಕಾಗೋಷ್ಟಿಯಲ್ಲಿ ಜಿ.ಡಿ. ಕೆಂಚವೀರಪ್ಪ, ನಂದೀಶ್, ಧನಂಜಯ, ಬಸವರಾಜಪ್ಪ, ಹಳಿಯೂರು ಸಿದ್ದಪ್ಪ ಇದ್ದರು
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 28 JULY 2024

ಚಿತ್ರದುರ್ಗ: ಜಾಗತಿಕ ಲಿಂಗಾಯತ ಮಹಾಸಭಾ, ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭವನ್ನು ಜುಲೈ 29(ನಾಳೆ)ರಂದು ಬೆಳಿಗ್ಗೆ 11 ಗಂಟೆಗೆ ನಗರದ ತ.ರಾ.ಸು. ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಸಂಚಾಲಕರಾದ ಜಿ.ಡಿ. ಕೆಂಚವೀರಪ್ಪ ತಿಳಿಸಿದ್ದಾರೆ.

ಕ್ಲಿಕ್ ಮಾಡಿ ಓದಿ: POLICE; ಪೊಲೀಸರ ಮೇಲೆ ಕಲ್ಲು ತೂರಿದ್ದ ಗ್ಯಾಂಗ್ | ಆಂಧ್ರ ಮೂಲದ ಕಳ್ಳನ ಬಂಧನ

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಾಣೆಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಶಾಖಾ ಮಠದ ಶ್ರೀ ಡಾ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ ಶ್ರೀ ಜಯಬಸವಕುಮಾರ ಸ್ವಾಮಿಗಳು ವಹಿಸಲಿದ್ದಾರೆ.

ನಿವೃತ್ತ ಐ.ಎ.ಎಸ್. ಅಧಿಕಾರಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಲಿದ್ದಾರೆ. ಚಿತ್ರದುರ್ಗದ ಬಸವಮಂಟಪದ ಮಾತಾದಾನೇಶ್ವರಿ ತಾಯಿ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ನಿವೃತ್ತ ಪ್ರಾಧ್ಯಾಪಕರು ಹಾಗೂ ಸಾಹಿತಿ ಡಾ ಜಿ.ಎನ್. ಮಲ್ಲಿಕಾರ್ಜುನಪ್ಪ ವಹಿಸಲಿದ್ದಾರೆ.

ಕ್ಲಿಕ್ ಮಾಡಿ ಓದಿ: Rain: ವರುಣಾರ್ಭಟಕ್ಕೆ ಮಲೆನಾಡು ತತ್ತರ | ಬಯಲುಸೀಮೆಯಲ್ಲಿ ಮಳೆಗೆ ಪ್ರಾರ್ಥನೆ

ಮುಖ್ಯ ಅತಿಥಿಗಳಾಗಿ ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾಂ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ, ಚಿಕ್ಕಮಗಳೂರು ಜಿಲ್ಲಾ ಘಟಕದ ಸಂಚಾಲಕ ಎಸ್.ವಿ.ಪುಷ್ಪಲತಾ, ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಹನುಮೇಶ ಕಲಮಂಗಿ, ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವಪ್ಪ, ದಾವಣಗೆರೆ ಜಿಲ್ಲಾ ಘಟಕ ಅಧ್ಯಕ್ಷ ರುದ್ರಮುನಿಸ್ವಾಮಿ, ದಾವಣಗೆರೆ ಮಹಿಳಾ ಘಟಕದ ಅಧ್ಯಕ್ಷೆ ಕುಸುಮ ಲೋಕೇಶ್ ಭಾಗವಹಿಸಲಿದ್ದಾರೆ.

ಶ್ರೀ ಗಾನಯೋಗಿ ಸಂಗೀತ ಬಳಗದ ತೋಟಪ್ಪ ಉತ್ತಂಗಿ ಮತ್ತು ಸಂಗಡಿಗರಿಂದ ವಚನ ಗಾಯನ ಕಾರ್ಯಕ್ರಮ ನಡೆಯಲಿದೆ.

ಪತ್ರಿಕಾಗೋಷ್ಟಿಯಲ್ಲಿ ಧನಂಜಯ, ಬಸವರಾಜಪ್ಪ, ಹಳಿಯೂರು ಸಿದ್ದಪ್ಪ ಇದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:ChitradurgaChitradurga newsGlobal transsexualityinaugurationKannada Latest NewsMahasabhaಉದ್ಘಾಟನೆಕನ್ನಡ ಲೇಟೆಸ್ಟ್ ನ್ಯೂಸ್ಚಿತ್ರದುರ್ಗಚಿತ್ರದುರ್ಗ ನ್ಯೂಸ್ಜಾಗತಿಕ ಲಿಂಗಾಯತಮಹಾಸಭಾ
Share This Article
Facebook Email Print
Previous Article RAIN Rain: ವರುಣಾರ್ಭಟಕ್ಕೆ ಮಲೆನಾಡು ತತ್ತರ | ಬಯಲುಸೀಮೆಯಲ್ಲಿ ಮಳೆಗೆ ಪ್ರಾರ್ಥನೆ
Next Article MLA KC Virendra Pappi Upper Bhadra Project : ಶೀಘ್ರ 8 ಕೆರೆಗಳಿಗೆ ಭದ್ರಾ ನೀರು | ಡಿಸಿಎಂ ಡಿ.ಕೆ.ಶಿವಕುಮಾರ್‌ ಭರವಸೆ
Leave a Comment

Leave a Reply Cancel reply

Your email address will not be published. Required fields are marked *

Gavayi smaranothsava
ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಗಾನಯೋಗಿಗಳ ಪುಣ್ಯ ಸ್ಮರಣೆ | ಸಾಧಕರಿಗೆ ಸನ್ಮಾನ
ಮುಖ್ಯ ಸುದ್ದಿ
ಮುರುಘಾಮಠದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಮೊದಲನೇ ಕಾರ್ಯಕಾರಿ ಸಭೆ | ಮಠಾಧೀಶರು ಸೇರಿದಂತೆ ಗಣ್ಯರು ಭಾಗೀ
ಮುಖ್ಯ ಸುದ್ದಿ
ಉಸಿರಾಟದ ಕಾಯಿಲೆಗಳಿಗೆ ಈ ಎಲೆಯನ್ನು ಬಳಸಿ
Life Style
ಹೃದಯಾಘಾತದ ನಂತರ ಈ ತಪ್ಪುಗಳನ್ನು ಮಾಡಬೇಡಿ
Life Style
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up