ಮುಖ್ಯ ಸುದ್ದಿ
ನಗರಸಭೆಯಲ್ಲಿ ಅಧ್ಯಕ್ಷರೇ ಸುಪ್ರೀಂ, ಇನ್ಯಾರೋ ಅಲ್ಲ | ನಗರಸಭೆ ಸದಸ್ಯರ ಗುಡುಗು

CHITRADURGA NEWS | 18 FEBRUARY 2025
ಚಿತ್ರದುರ್ಗ: ನಗರದಲ್ಲಿ ರಸ್ತೆ ಅಗಲೀಕರಣ ಕುರಿತಂತೆ ಕಳೆದ ಮೂರ್ನಾಲ್ಕು ತಿಂಗಳಿಂದ ಆಗುತ್ತಿರುವ ಚರ್ಚೆ ನಗರಸಭೆ ಸದಸ್ಯರನ್ನು ಕೆರಳಿಸಿತ್ತು.
ನಗರದ ರಸ್ತೆ ಅಗಲೀಕರಣದಂತಹ ವಿಚಾರ ನಗರಸಭೆ ಸದಸ್ಯರ ಗಮನಕ್ಕೆ ಬಾರದೆ ಅಧಿಕಾರಿಗಳು, ಶಾಸಕರು ತೀರ್ಮಾಣ ತೆಗೆದುಕೊಳ್ಳುವ ಬಗ್ಗೆ ತೀವ್ರ ಅಸಮಧಾನ ವ್ಯಕ್ತವಾಯಿತು.

ಇದನ್ನೂ ಓದಿ: ಚಿತ್ರದುರ್ಗ ನಗರಸಭೆ ಬಜೆಟ್ | ಯಾವ ಕೆಲಸಕ್ಕೆ ಎಷ್ಟು ಅನುದಾನ ಮೀಸಲು | ಇಲ್ಲಿದೆ ಪೂರ್ಣ ವಿವರ
ಶಾಸಕರು, ಪೌರಾಯುಕ್ತರೇ ಸಭೆ ನಡೆಸುವುದಾದರೆ ಸಾಮಾನ್ಯ ಸಭೆಯಲ್ಲಿ ರಸ್ತೆ ಅಗಲೀಕರಣದ ವಿಚಾರ ಯಾಕೆ ತಂದಿದ್ದೀರಿ. ನಾವೇನು ರಸ್ತೆ ಅಗಲೀಕರಣ, ನಗರದ ಅಭಿವೃದ್ಧಿಗೆ ವಿರೋಧಿಗಳೇ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದರು.
ನಗರದ ಅಭಿವೃದ್ಧಿ ಆಗಬೇಕು. ರಸ್ತೆ ಅಗಲೀಕರಣ ಆಗಬೇಕು. ಇದು ನಮ್ಮೆಲ್ಲರ ಅಪೇಕ್ಷೆ. ಆದರೆ, ಈ ವಿಚಾರದಲ್ಲಿ ಪ್ರಚಾರ ಪಡೆಯುವ ಬೂಟಾಟಿಕೆ ಬೇಡ ಎಂದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಟೋಲ್ ಶುಲ್ಕ ರದ್ದುಗೊಳಿಸುವಂತೆ ಕರುನಾಡ ವಿಜಯಸೇನೆ ಒತ್ತಾಯ
ಸದಸ್ಯ ಶ್ರೀನಿವಾಸ್ ಮಾತನಾಡಿ, ನಗರದಲ್ಲಿ ರಸ್ತೆ ಅಗಲೀಕರಣಕ್ಕಾಗಿ ಮಾರ್ಕ್ ಮಾಡಲಾಗಿದೆ. ಇದು ವಸೂಲಿ ತಂತ್ರ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದರ ಹಿಂದಿನ ಹುನ್ನಾರ ಏನು, ರಸ್ತೆ ಅಗಲೀಕರಣಕ್ಕೆ ಕಟ್ಟಡ ತೆರವು ಮಾಡಿದರೆ 300-400 ಕೋಟಿ ಪರಿಹಾರ ಕೊಡಬೇಕಾಗುತ್ತದೆ ಇಷ್ಟು ದುಡ್ಡು ನಗರಸಭೆಯಲ್ಲಿ ಇದೆಯೇ ಎಂದು ಪ್ರಶ್ನಿಸಿದರು.
ಸದಸ್ಯ ಗೊಪ್ಪೆ ಮಂಜುನಾಥ್ ಮಾತನಾಡಿ, ಅಜೆಂಡಾ ಪುಸ್ತಕದಲ್ಲಿ ರಸ್ತೆ ಅಗಲೀಕರಣ ಎಂದು ನಮೂದಿಸಿ, ಒತ್ತುವರಿ ತೆರವು ಎಂದಲ್ಲ. ನಾವು ಅಭಿವೃದ್ಧಿ ವಿರೋಧಿಗಳಲ್ಲ. ಆದರೆ, ಜನರಿಂದ ಆಯ್ಕೆಯಾದ ಸದಸ್ಯರ ಗಮನಕ್ಕೆ ತನ್ನಿ. ನಾವು ರಸ್ತೆಯಲ್ಲಿ ಓಡಾಡುವಾಗ ಜನ ನಮ್ಮನ್ನು ಕೇಳುತ್ತಾರೆ. ಏನೆಂದು ಉತ್ತರ ಕೊಡಲಿ ಎಂದು ಪೌರಾಯುಕ್ತರನ್ನು ಪ್ರಶ್ನಿಸಿದರು.
ಇದನ್ನೂ ಓದಿ: ಐಮಂಗಲ ಪೊಲೀಸರಿಂದ ಅಂತಾರಾಜ್ಯ ಕಳ್ಳನ ಬಂಧನ | 351 ಗ್ರಾಂ ಚಿನ್ನಾಭರಣ ವಶಕ್ಕೆ
ಸದಸ್ಯ ದೀಪಕ್ ಮಾತನಾಡಿ, ನಗರಸಭೆಗೆ ಅಧ್ಯಕ್ಷರೇ ಸುಪ್ರೀಂ, ಇನ್ಯಾರೋ ಅಲ್ಲ. ರಸ್ತೆ ಅಗಲೀಕರಣಕ್ಕೆ ಅನುಮೋದನೆ ನೀಡಬೇಕಾಗಿರುವುದು ಈ ಸಭೆ, ಇಲ್ಲಿರುವ ಸದಸ್ಯರು, ಅಧ್ಯಕ್ಷರು ಎನ್ನುವುದು ತಿಳಿದಿರಲಿ ಎಂದು ಹೇಳಿದರು.
ಪೌರಾಯುಕ್ತೆ ಎಂ.ರೇಣುಕಾ ಮಾತನಾಡಿ, ಕಟ್ಟಡ ತೆರವು ಸಂಬಂಧ ಎಲ್ಲಿಯೂ ಹೊಡೆದಿಲ್ಲ. ನೋಟೀಸ್ ಕೊಟ್ಟಿಲ್ಲ. ಶಾಸಕರು, ಸಚಿವರ ಸೂಚನೆ ಮೇರೆಗೆ ಸಭೆ ನಡೆದಿದೆ. ಅಳತೆ ಮಾಡಲಷ್ಟೇ ಹೇಳಿದ್ದರಿಂದ ಅದನ್ನು ಮಾಡಿದ್ದೇವೆ. ಯಾವುದೂ ಉದ್ದೇಶಪೂರ್ವಕ ಅಲ್ಲ. ದಿಢೀರನೇ ಶಾಸಕರು ನಗರಸಭೆ ಕಚೇರಿಗೆ ಬಂದು ಅಧಿಕಾರಿ, ಸಿಬ್ಬಂದಿ ಕರೆಯಿರಿ ಎಂದಾಗ ಕರೆದಿದ್ದೇವೆ ಎಂದು ಸ್ಪಷ್ಟೀಕರಣ ನೀಡುವ ಪ್ರಯತ್ನ ಮಾಡಿದರು.
