Connect with us

    SALUMARADA THIMMAKKA; ಇಮ್ಮಡಿ‌ ಸಿದ್ಧರಾಮೇಶ್ವರ ಸ್ವಾಮೀಜಿ ರಜತ‌ ಮಹೋತ್ಸವ | ಸಸಿ ನೆಟ್ಟ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ

    ಸಸಿ ನೆಟ್ಟ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ

    ಮುಖ್ಯ ಸುದ್ದಿ

    SALUMARADA THIMMAKKA; ಇಮ್ಮಡಿ‌ ಸಿದ್ಧರಾಮೇಶ್ವರ ಸ್ವಾಮೀಜಿ ರಜತ‌ ಮಹೋತ್ಸವ | ಸಸಿ ನೆಟ್ಟ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ

    CHITRADURGA NEWS | 18 JULY 2024

    ಚಿತ್ರದುರ್ಗ: ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿರವರ ದೀಕ್ಷಾ ರಜತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಭೋವಿ ಗುರುಪೀಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ(SALU MARADA THIMMAKKA) ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು.

    ಇದನ್ನೂ ಓದಿ: ಬೇಲಿ ಮೇಲಿನ ಹಣ್ಣು ತಿಂದು ಮಕ್ಕಳು ಅಸ್ವಸ್ಥ | ಆಸ್ಪತ್ರೆಗೆ ದಾಖಲು

    ಈ ವೇಳೆ ಮಾತನಾಡಿದ ಅವರು, ಪರಿಸರ ಸಂರಕ್ಷಣೆಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಾಕಷ್ಟು ಯೋಜನೆಗಳು ಯಶಸ್ವಿಯಾಗಬೇಕಾದರೆ ಸಾರ್ವಜನಿಕರು ಕೈಜೋಡಿಸಬೇಕೆಂದು ಎಂದು ಮನವಿ ಮಾಡಿದರು.

    ಗಿಡಗಳೆ ಮಕ್ಕಳು, ಗಿಡವಿದ್ದರೆ ಎಲ್ಲರೂ ಉಳಿಯಲು ಸಾಧ್ಯ. ಅದಕ್ಕಾಗಿ ಎಲ್ಲರೂ ಒಂದೊಂದು ಗಿಡ ನೆಟ್ಟು ಜೋಪಾನವಾಗಿ ಕಾಪಾಡಬೇಕು ಎಂದು ಹೇಳಿದರು.

    ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಗಿಡ-ಮರಗಳ ರಕ್ಷಣೆಗಾಗಿ ಖರ್ಚು ಮಾಡುತ್ತಿರುವ ಹಣ ವ್ಯರ್ಥವಾಗಬಾರದು. ಎಲ್ಲರೂ ಗಿಡ ನೆಟ್ಟು ಪೋಷಿಸಿ ದೊಡ್ಡ ಮರವನ್ನಾಗಿ ಬೆಳೆಸಿ ಪರಿಸರಕ್ಕೆ ಕೊಡುಗೆ ಕೊಡಬೇಕಾಗಿದೆ ಎಂದು ತಿಳಿಸಿದರು.

    ಇದನ್ನೂ ಓದಿ: SILVER JUBILEE; ಜು.20ಕ್ಕೆ ಚಿತ್ರದುರ್ಗಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ | ಭೋವಿ ಶ್ರೀಗಳ ಧೀಕ್ಷಾ ರಜತ ಮಹೋತ್ಸವಕ್ಕೆ ಆಹ್ವಾನ

    ಸಾಲು ಮರದ ತಿಮ್ಮಕ್ಕನ ಪುತ್ರ ಉಮೇಶ್ ಮಾತನಾಡಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಗಳು ದೀಕ್ಷಾ ರಜತ ಮಹೋತ್ಸವದ ನಿಮಿತ್ತ ಪರಿಸರ ಸಸ್ಯೋತ್ಸವ ಹಮ್ಮಿಕೊಂಡಿರುವುದು ಪುಣ್ಯದ ಕೆಲಸ. ರಾಜ್ಯಾದ್ಯಂತ ಗಿಡ ನೆಡುವ ಕಾರ್ಯಕ್ರಮಕ್ಕೆ ಮುಂದಾಗಿರುವುದು ಇಡಿ ದೇಶಕ್ಕೆ ಮಾದರಿ.

    ಹುಟ್ಟುಹಬ್ಬವೆಂದರೆ ಸಾಮಾನ್ಯವಾಗಿ ಎಲ್ಲರೂ ವಿಜೃಂಭಣೆಯಿಂದ ಆಚರಿಸಿಕೊಳ್ಳುವುದು ಸಹಜ. ಇಂತಹ ಕಾಲದಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಪರಿಸರ ಸಂರಕ್ಷಣೆಗೆ ಒತ್ತು ಕೊಡುತ್ತಿರುವುದು ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶಾಂತವೀರಸ್ವಾಮೀಜಿ, ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ,ಎಸ್ಪಿ ಧರ್ಮೇಂದ್ರಕುಮಾರ್ ಮೀನಾ, ಭೋವಿ ಮಠದ ಮುಖಂಡ ನೇರ್ಲಗುಂಟೆ ರಾಮಪ್ಪ ಸೇರಿದಂತೆ ವಿವಿಧ ಮಠದ ಮಠಾಧೀಶರು ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top