Connect with us

    MLA Chandrappa: ಮತ್ತೆ ಅಕ್ರಮ ಅದಿರು ಸಾಗಾಣಿಕೆ | ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಶಾಸಕ ಚಂದ್ರಪ್ಪ ಗರಂ

    Kdp meating

    ಮುಖ್ಯ ಸುದ್ದಿ

    MLA Chandrappa: ಮತ್ತೆ ಅಕ್ರಮ ಅದಿರು ಸಾಗಾಣಿಕೆ | ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಶಾಸಕ ಚಂದ್ರಪ್ಪ ಗರಂ

    CHITRADURGA NEWS | 14 OCTOBER 2024

    ಚಿತ್ರದುರ್ಗ: ತಾಲೂಕಿನ ಭೀಮಸಮುದ್ರ ಸಮೀಪದ ದಿಂಡದಹಳ್ಳಿ ರಿ.ಸ.ನಂ 35 ಮತ್ತು 38 ರಲ್ಲಿ ದಾಸ್ತಾನು ಮಾಡಿದ್ದ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಾಣೆ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಪ್ರಕರಣ ದಾಖಲಿಸಬೇಕು ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ(MLA Chandrappa) ಆಗ್ರಹಿಸಿದರು.

    ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಶಾಸಕರು, ಈ ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿದೆ. ಗಣಿ ಇಲಾಖೆ ನಿರ್ದೇಶಕರು ಜಮೀನಿನ ಮಾಲಿಕರನ್ನು ಅ.15 ರಂದು ವಿಚಾರಣೆಗೆ ಕರೆದಿದ್ದಾರೆ. ಆದರೆ, ಅ.11 ರಂದು ಸರ್ಕಾರಿ ರಜೆ ದಿನದಂದು 30 ಲಾರಿಗಳಲ್ಲಿ ಅದಿರು ಸಾಗಾಣೆ ಮಾಡಲು ಮುಂದಾಗಿರುವುದು ಅಕ್ರಮದ ವಾಸನೆ ಬಡಿದಿದೆ. ಇದರಲ್ಲಿ ಅಧಿಕಾರಿಗಳ ಕುಮ್ಮಕ್ಕಿದೆ ಎಂದು ದೂರಿದರು.

    ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಸೂರ್ಯಕಾಂತಿ ರೇಟ್ ಎಷ್ಟಿದೆ

    ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ಪಡೆದು ಪರಿಶೀಲಿಸಿ ಪ್ರಕರಣ ದಾಖಲಿಸಬೇಕು RTO ಅಧಿಕಾರಿಗಳು ಲಾರಿಗಳಲ್ಲಿ ತುಂಬಿರುವ ಅದಿರಿನ ಪ್ರಮಾಣ ಗಮನಿಸಿ ದೂರು ದಾಖಲಿಸಲು ಸೂಚಿಸಿದರು.

    ದಿಂಡದಹಳ್ಳಿ ಸರ್ವೆ.ನಂ 35 ಮತ್ತು 38 ರಲ್ಲಿ ದಾಸ್ತಾನು ಮಾಡಲಾಗಿರುವ ಕಬ್ಬಿಣದ ಅದಿರಿನ ಮೌಲ್ಯ ಹೆಚ್ಚಾಗಿದ್ದು, ಇದನ್ನು ಕಡಿಮೆ ಗುಣಮಟ್ಟದ ಅದಿರು ಎಂದು ಭಾವಿಸಿ, ಖಾಸಗಿ ಕಂಪನಿಗಳಿಗೆ ನೀಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಸಮಗ್ರ ಮಾಹಿತಿ ಪಡೆದು, ಅದಿರು ಮಾರಾಟದ ವಹಿವಾಟನ್ನು ರದ್ದು ಪಡಿಸುಲು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

    ಇದನ್ನೂ ಓದಿ: ಹೊಸದುರ್ಗದಲ್ಲಿ ಭಾರೀ ಮಳೆ | ಮತ್ತೆ ಮೈದುಂಬಿದ ವೇದಾವತಿ | ಕೆಲ್ಲೋಡು ಬ್ಯಾರೇಜ್ ಭರ್ತಿ

    ಕಳೆದ ಕೆಡಿಪಿ ಸಭೆಯಲ್ಲಿ ಅದಿರು ಮಾರಾಟದಲ್ಲಿ ನೂರಾರು ಕೋಟಿ ಅವ್ಯವಾಹ ನಡೆದಿದೆ. ಸರ್ಕಾರ ಬೊಕ್ಕಸಕ್ಕು ನಷ್ಟ ಉಂಟಾಗಿದೆ ಎಂದು ಬಗ್ಗೆ ಶಾಸಕ ಎಂ.ಚಂದ್ರಪ್ಪ ಆರೋಪಿಸಿದ್ದರು. ಆದ್ದರಿಂದ ಜಿಲ್ಲಾಧಿಕಾರಿಗಳು ಹಾಗೂ ನನ್ನ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳೂಂತೆ ಗಣಿ ಇಲಾಖೆ ಉಪನಿರ್ದೇಶಕರಿಗೆ ನಿರ್ದೇಶನ ನೀಡಲಾಗಿತ್ತು. ಸಾಗಾಟಕ್ಕೆ ಅನುಮತಿ ನೀಡದಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಆದಾಗ್ಯೂ ಖಾಸಗಿ ಕಂಪನಿಯವರು ಯಾರ ಗಮನಕ್ಕೂ ತಾರದೇ ಆಯುಧ ಪೂಜೆಯ ಸರ್ಕಾರಿ ರಜಾ ದಿನದಂದು ಅದಿರು ಸಾಗಾಟಕ್ಕೆ ಮುಂದಾಗಿದ್ದಾರೆ. ಇದು ಖಂಡನೀಯ ಎಂದು ಸಚಿವರು ಅಸಮಧಾನ ವ್ಯಕ್ತಪಡಿಸಿದರು.

    ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುವುದನ್ನು ತಡೆಯುವ ಕುರಿತು ಕೆಡಿಪಿ ಸಭೆಯಲ್ಲಿ ಕೈಗೊಂಡ ನಿರ್ಣಯದ ಬಗ್ಗೆ ಕೇಂದ್ರ ಕಚೇರಿಗೆ ಮಾಹಿತಿ ನೀಡದೆ, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕರ ವಿರುದ್ದವೂ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಶಿಫಾರಸ್ಸು ಮಾಡಬೇಕು. ಈ ಕುರಿತು ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡುವುದಾಗಿ ಎಂದು ಸಚಿವ ಡಿ.ಸುಧಾಕರ್ ಹೇಳಿದರು.

    ಇದನ್ನೂ ಓದಿ: ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಯಾಕೆ ಕಳಿಸ್ತಿರಾ | ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತರಾಟೆ

    ಅದಿರು ದಾಸ್ತಾನು ಮಾಡಿರುವ ಸ್ಥಳದ ಮಾಲಿಕರ ಅನುಮತಿ ಪಡೆಯದೇ ಅದಿರು ಸಾಗಾಟಕ್ಕೆ ಮುಂದಾಗಿರುವುದು ನಿಯಮಬಾಹಿರ. ಈ ಕುರಿತು ಸ್ಥಳದ ಮಾಲಿಕರು ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದಾರೆ. ಸುಪ್ರಿಂ ಕೋರ್ಟ್ ಜಮೀನು ಮಾಲಿಕರ ಮನವಿಯನ್ನು ಪುನರ್ ಪರಿಗಣಿಸುವಂತೆ ಗಣಿ ಇಲಾಖೆ ನಿರ್ದೇಶನ ನೀಡಿದೆ. ಇದರ ಆಧಾರದಲ್ಲಿ ಅ.15 ರಂದು ಪುನರ್ ಪರಿಶೀಲನೆಗೆ ಹಾಜರಾಗುವಂತೆ ಜಮೀನು ಮಾಲೀಕರಿಗೆ ಗಣಿ ಇಲಾಖೆ ನಿರ್ದೇಶಕರು ಪತ್ರ ಬರೆದಿದ್ದಾರೆ. ಇದರ ನಡುವೆಯೇ ಅ.11 ತಾರೀಖು ಏಕಾಏಕಿ ಖಾಸಗಿ ಕಂಪನಿಯ 40 ಲಾರಿಗಳಲ್ಲಿ ಅದಿರು ತುಂಬಲು ಮುಂದಾಗಿದ್ದಾರೆ. ಇದನ್ನು ಸ್ಥಳೀಯರು ತಡೆಗಟ್ಟಿದ್ದಾರೆ. ಈ ಲಾರಿಗಳ ವಿರುದ್ದ ಪ್ರಕರಣ ದಾಖಲಿಸಿ ಸೀಜ್ ಮಾಡಬೇಕು ಎಂದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top