ಚಳ್ಳಕೆರೆ
Challakere; ನನಗೆ ನ್ಯಾಯ ಕೊಡದಿದ್ರೆ, ಟೆರರಿಸ್ಟ್ ಆಗಿಬಿಡ್ತಿನಿ | ಚಳ್ಳಕೆರೆ ಯುವಕನ ಆತಂಕಕಾರಿ ಹೇಳಿಕೆ
CHITRADURGA NEWS | 28 JULY 2024
ಚಿತ್ರದುರ್ಗ: ಚಳ್ಳಕೆರೆ ಪೊಲೀಸರ ವಿರುದ್ಧ ಕುಪಿತಗೊಂಡಿರುವ ಯುವಕನೊಬ್ಬ ನನಗೆ ನ್ಯಾಯ ಸಿಕ್ಕಿಲ್ಲ ಅಂದ್ರೆ ಬೆಂಗಳೂರನ್ನು ಶಿವಾ ಅನ್ನಿಸಿ ಬಿಡ್ತಿನಿ ಎಂದು ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ವೀಡಿಯೋ ಮಾಡಿ ಅಪ್‌ಲೋಡ್ ಮಾಡಿದ್ದಾರೆ.
ಚಳ್ಳಕೆರೆಯ ಗಾಂಧಿ ನಗರದ ಯುವಕ ಪೃಥ್ವಿರಾಜ್ ವೀಡಿಯೋ ಮಾಡಿ ಹರಿಬಿಟ್ಟಿದ್ದಾನೆ.
ಇದನ್ನೂ ಓದಿ: ಶೀಘ್ರ 8 ಕೆರೆಗಳಿಗೆ ಭದ್ರಾ ನೀರು | ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ
ಬೆಂಗಳೂರಿಗೆ ಎಲ್ಲಿ ಪಿನ್ ಇಟ್ರೆ ಎಲ್ಲಿ ಬ್ಲಾಸ್ಟ್ ಆಗುತ್ತೆ ಎಲ್ಲಾ ಗೊತ್ತಿದೆ ಎಂದು ಇಡೀ ಬೆಂಗಳೂರಿಗೆ ಎಲ್ಲಿಂದ ಪವರ್ ಸಪ್ಲೇ ಆಗುತ್ತದೆ ಎನ್ನುವುದು ನನಗೆ ಗೊತ್ತಿದೆ. ಐಐಎಸ್‌ಸಿ, ಡಿಆರ್‌ಡಿಓ, ವಿಧಾನಸೌಧ, ರಾಜಭವನಕ್ಕೆ ಎಲ್ಲಿಂದ ಕರೆಂಟ್ ಬರುತ್ತೆ ನನಗೆ ಗೊತ್ತಿದೆ ಎಂದು ವೀಡಿಯೋದಲ್ಲಿ ಹೇಳಿದ್ದಾನೆ.
9 ವರ್ಷ ಎಲೆಕ್ಟಿçಕ್ ಕೆಲಸ ಮಾಡಿದ್ದೇನೆ. ಬೇರೆ ಬೇರೆ ಸಂಸ್ಥೆಗಳಲ್ಲಿ ಕೆಲಸ ಮಾಡಿರುವುದರಿಂದ ನನಗೆ ಎಲ್ಲ ಗೊತ್ತಿದೆ ಎಂದು ಬೆದರಿಕೆ ರೀತಿಯಲ್ಲಿ ಮಾತನಾಡಿದ್ದಾನೆ.
ಇದನ್ನೂ ಓದಿ: ವರುಣಾರ್ಭಟಕ್ಕೆ ಮಲೆನಾಡು ತತ್ತರ | ಬಯಲುಸೀಮೆಯಲ್ಲಿ ಮಳೆಗೆ ಪ್ರಾರ್ಥನೆ
ಇಷ್ಟು ದೊಡ್ಡ ಬ್ಲಾಸ್ಟ್ ಮಾಡಿದ್ರೆ ನನ್ನ ವಿಐಪಿ ಸೆಲ್‌ಗೆ ಹಾಕ್ತಿರಾ ಅನ್ನೋದು ಗೊತ್ತು. ಆಗ ನನ್ನ ಡಿ.ಬಾಸ್ ಪಕ್ಕದ ಸೆಲ್‌ಗೆ ಹಾಕಿ. ಸ್ವಲ್ಪ ದಿನ ಅವರನ್ನು ನೋಡಿಕೊಂಡು ಇರ್ತಿನಿ. ಗಲ್ಲಿಗೆ ಹಾಕ್ತಿರಾ ಹಾಕಿ. ಅದಕ್ಕೂ ಹತ್ತು ವರ್ಷ ಬೇಕಾಗುತ್ತೆ ಅನ್ನೋದು ಗೊತ್ತು ಎಂದು ಪೃಥ್ವಿ ಹೇಳಿದ್ದಾನೆ.
ಪೊಲೀಸರ ವಿರುದ್ಧ ಪೃಥ್ವಿ ಅಸಹನೆ ಯಾಕೆ:
ಜು.11 ರಂದು ಬೆಂಗಳೂರಿನಿAದ ಶೃಂಗೇರಿಗೆ ಹೋಗಿದ್ದ ಪೃಥ್ವಿ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಈ ವೇಳೆ ಆತನ ತಾಯಿ ಗಾಬರಿಯಾಗಿ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಮಗ ಕಾಣೆಯಾಗಿದ್ದಾನೆ. ಫೋನ್ ಆಫ್ ಆಗಿದೆ ಎಂದು ದೂರು ನೀಡಲು ಹೋಗಿದ್ದಾರೆ. ಆದರೆ, ದೂರು ಸ್ವೀಕರಿಸದ ಪೊಲೀಸರು, ಬೆಂಗಳೂರಿನಲ್ಲಿ ದೂರು ಕೊಡಿ ಎಂದು ನಿರ್ಲಕ್ಷಿಸಿ ಕಳುಹಿಸಿದ್ದಾರೆ.
ಇದನ್ನೂ ಓದಿ: ಪೊಲೀಸರ ಮೇಲೆ ಕಲ್ಲು ತೂರಿದ್ದ ಗ್ಯಾಂಗ್ | ಆಂಧ್ರ ಮೂಲದ ಕಳ್ಳನ ಬಂಧನ
ಪೃಥ್ವಿ ಮನೆಗೆ ಬಂದಾಗ ಆತನ ತಾಯಿ ಈ ವಿಚಾರ ತಿಳಿಸಿದ್ದಾರೆ. ತಕ್ಷಣ ಪೊಲೀಸ್ ಠಾಣೆಗೆ ತೆರಳಿ ಯಾಕೆ ದೂರು ಸ್ವೀಕರಿಸಲಿಲ್ಲ ಎಂದು ಮೊಬೈಲ್ ಕ್ಯಾಮರಾ ಆನ್ ಮಾಡಿಕೊಂಡು ಪ್ರಶ್ನೆ ಮಾಡಿದ್ದಾನೆ.
ಪೊಲೀಸರು ಕ್ಯಾಮರಾ ಆನ್ ಮಾಡಿಕೊಂಡು ಕೇಳಿದರೆ ಏನು ಹೇಳಲು ಆಗುತ್ತೆ. ಆಫ್ ಮಾಡಿ ಬನ್ನಿ ಮಾತನಾಡೋಣ ಎಂದು ಹೇಳಿದ್ದಾರೆ. ಆದರೆ, ವೀಡಿಯೋ ರೆಕಾರ್ಡ್ ಮಾಡಬಹುದು. ಅದು ನನ್ನ ಹಕ್ಕು ಎಂದು ಹೇಳಿರುವ ಪೃಥ್ವಿ ಪೊಲೀಸರ ಎದುರು ಅಸಮಧಾನ ವ್ಯಕ್ತಪಡಿಸಿದ್ದಾನೆ.
ಇದನ್ನೂ ಓದಿ: ಪಿಡಿಓ ಎಸ್.ಪಾಲಯ್ಯ ಅಮಾನತು | ಜಿಪಂ ಸಿಇಓ ಸೋಮಶೇಖರ್ ಆದೇಶ
ಈ ವೇಳೆ ಪೊಲೀಸರು ಮೊಬೈಲ್ ಕಿತ್ತುಕೊಂಡು, ಹಲ್ಲೆ ನಡೆಸಿ ವೀಡಿಯೋ ಡಿಲಿಟ್ ಮಾಡಿದ್ದಾರೆ. ನ್ಯಾಯ ಕೇಳಲು ಹೋದಾಗ ಪೊಲೀಸರು ನಾಯಿಗೆ ಹೊಡದಂಗೆ ಹೊಡೆದಿದ್ದಾರೆ. ಕಾಲಲ್ಲಿ ತುಳಿದಿದ್ದಾರೆ ಎಂದು ಪೃಥ್ವಿ ಆರೋಪಸಿದ್ದಾನೆ.
ಈ ಸಂಬAಧ ಪೊಲೀಸ್ ದೂರು ಪ್ರಾಧಿಕಾರಕ್ಕೆ ಹೋಗಿ ನ್ಯಾಯ ಕೇಳುತ್ತೇನೆ. ನನ್ನ ಮೇಲೆ ಹಲ್ಲೆ ನಡೆಸಿದ ಪೊಲೀಸರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾನೆ. ಹೀಗೆ ಒತ್ತಾಯಿಸುವ ಭರದಲ್ಲಿ ಬೆಂಗಳೂರನ್ನೇ ಬ್ಲಾಸ್ ಮಾಡಿಬಿಡುತ್ತೇನೆ ಎಂದು ಅತಿರೇಕದ ಬೆದರಿಕೆ ಹಾಕಿರುವ ವೀಡಿಯೋ ಈಗ ವೈರಲ್ ಆಗಿದೆ.