ಮುಖ್ಯ ಸುದ್ದಿ
ಆಲೋಚನೆ ಶುದ್ಧವಾಗಿದ್ದರೆ, ಆರೋಗ್ಯ ಚೆನ್ನಾಗಿರುತ್ತೆ | ಡಾ.ಬಸವಕುಮಾರ ಸ್ವಾಮಿಜಿ
CHITRADURGA NEWS | 06 JULY 2024
ಚಿತ್ರದುರ್ಗ: ನಮ್ಮ ಆಲೋಚನೆಗಳು ಎಲ್ಲಿಯವರೆಗೆ ಶುದ್ದವಾಗಿರುತ್ತವೋ ಅಲ್ಲಿಯವರೆಗೂ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಎಂದು ಎಸ್.ಜೆ.ಎಂ.ವಿದ್ಯಾ ಪೀಠದ ಆಡಳಿತ್ಮಾಕ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮಿಜಿ ಹೇಳಿದರು.
ಇದನ್ನೂ ಓದಿ: ಭ್ರೂಣಲಿಂಗ ಪತ್ತೆ ಮಾಹಿತಿದಾರರಿಗೆ ₹ 1 ಲಕ್ಷ ಬಹುಮಾನ | ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್
ನಗರದ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಶನಿವಾರ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದ ಸಾನೀಧ್ಯ ವಹಿಸಿ ಮಾತನಾಡಿದ ಶ್ರೀಗಳು,
ವೈದ್ಯಕೀಯ ಲೋಕದಲ್ಲಿ ಅಶ್ಚರ್ಯಗಳು ನಡೆಯುತ್ತವೆ ಅದಕ್ಕಿಂತಲೂ ಆಪರೂಪದ ಆಶ್ಚಯಗಳು ಅಧಾತ್ಮ ಲೋಕದಲ್ಲಿ ನಡೆಯುತ್ತವೆ. ವೈದ್ಯರಿಗೆ ಅನೇಕ ಭಾರಿ ಆಶ್ಚರ್ಯಗಳು ಸಂಗತಿಗಳು ನಿಮ್ಮ ಕಣ್ಣೆದುರಿಗೆ ನಡೆಯುತ್ತವೆ ಅದೇ ರೀತಿ ಸಂತರು ಮಹಾಂತರು ಕೂಡ ತಾಯಿಯಿಂದ ಹಿಡಿದು ಮಕ್ಕಳನ್ನು ಆರೈಕೆ ಮಾಡುವ ಸಂದರ್ಭಗಳು ಬರುತ್ತವೆ. ಕಾಳ ಬದಲಾಗುತ್ತದೆ ಶಿಷ್ಯನೇ ಗುರುವುವಿಗೆ ಸನ್ಮಾನ ಮಾಡುವಂತ ಸಂದರ್ಭ ಬರುತ್ತದೆ ಎಂದರು.
ದೇಶ, ನಾಡು ಸಮಾಜ, ಆರೋಗ್ಯ ಪೂರ್ಣವಾಗಿ ಇರಲು ನಿಮ್ಮ ಶ್ರಮ ಅಧಿಕವಾಗಿದೆ. ಆಧ್ಯಯನಕ್ಕೆ ಬೆಲೆ ನಿಡಲು ಸಾಧ್ಯವಿಲ್ಲ ವೈದ್ಯ ಕಷ್ಟಗಳನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ, ವ್ಯದ್ಯರಿಗೆ ಎಷ್ಟೇ ಕಷ್ಟ ವಿದ್ದರೂ ಸಹಾ ನನ್ನನ್ನು ನಂಬಿ ಬಂದ ರೋಗಿಗೆ ಚಿಕಿತ್ಸೆಯನ್ನು ನೀಡುವುದರ ಮೂಲಕ ಆತನ ಆರೈಕೆಯನ್ನು ಮಾಡುತ್ತಾರೆ ಎಂದರು.
ಇದನ್ನೂ ಓದಿ: ಪಿಡಿಒಗಳಿಗೆ ಕುಡಿಯುವ ನೀರು ಪರೀಕ್ಷೆ ಹೊಣೆ | ಜಿಲ್ಲಾ ಪಂಚಾಯಿತಿಯಲ್ಲಿ ತರಬೇತಿ
ಅನೇಕ ಕಡೆಯಲ್ಲಿ ವೈದ್ಯರ ಕೈಗುಣ ಚನ್ನಾಗಿದೆ ಎನ್ನುತ್ತಾರೆ ಅವರ ನೋಡಿದರ ಸಾಕು ರೋಗ ಕಡಿಮೆ ಯಾಗುತ್ತದೆ ಎಂಬ ನಂಬಿಕೆ ಇದೆ ಇದರಲ್ಲಿ ವೈದ್ಯರಿಗೆ ಸಾಕಷ್ಟು ಆತ್ಮವಿಶ್ವಾಸವನ್ನು ರೋಗಿಗಳಲ್ಲಿ ತುಂಬುವ ಕೆಲಸವನ್ನು ಮಾಡುತ್ತಾರೆ ಎಂದು ಹೇಳಿದರು.
ಈ ವೇಳೆ ವೈದ್ಯಕೀಯ ಸಂಘದ ಅಧ್ಯಕ್ಷ ಪಿ.ಟಿ.ವಿಜಯಕುಮಾರ್, ಕಾರ್ಯದರ್ಶಿ ಕೆ.ಎಂ. ಬಸವರಾಜ್, ಜಿಲ್ಲಾ ಸರ್ಜನ್ ಡಾ.ಎಸ್.ಪಿ.ರವಿಂದ್ರ, ಬಸವೇಶ್ವರ ಆಸ್ಪತ್ರೆಯ ಡಾ.ಸುರೇಶ್ ಭಂಡಾರಿ, ಡಾ.ರಾಜೇಶ್ ಡಾ, ನಾಗೇಂದ್ರಗೌಡ ಇದ್ದರು.