ಮುಖ್ಯ ಸುದ್ದಿ
ಮಹಾಕುಂಭ ಮೇಳದಲ್ಲಿ ಎಂ.ಸಿ.ರಘುಚಂದನ್ ಪವಿತ್ರ ಸ್ನಾನ

CHITRADURGA NEWS | 10 FEBRUARY 2025
ಚಿತ್ರದುರ್ಗ: ಉತ್ತರಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಬಿಜೆಪಿ ಯುವ ಮುಖಂಡ, ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಸಿಇಓ ಎಂ.ಸಿ.ರಘುಚಂದನ್ ಭಾಗವಹಿಸಿದ್ದಾರೆ.
ಗಂಗಾ, ಯುಮುನಾ ಹಾಗೂ ಗುಪ್ರಗಾಮಿನಿಯಾಗಿ ಸರಸ್ವತಿ ನದಿ ಸೇರುವ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ, ಸೂರ್ಯನಿಗೆ ಅಘ್ರ್ಯ ಅರ್ಪಣೆ ಮಾಡಿದ್ದಾರೆ.

ಇದನ್ನೂ ಓದಿ: ಕುಂಭಮೇಳದಲ್ಲಿ ಕೋಟೆನಾಡಿನ ಮಠಧೀಶರು | ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ
144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳದಲ್ಲಿ ಭಾಗವಹಿಸಲು ಜಗತ್ತಿನ ಮೂಲೆ ಮೂಲೆಗಳಿಂದ ಕೋಟ್ಯಾಂತರ ಆಸ್ತಿಕರು ಪ್ರಯಾಗ್‍ರಾಜ್ ಕಡೆ ಬರುತ್ತಿದ್ದಾರೆ.
ದೇಶದ ಇತಿಹಾಸದಲ್ಲಿ ಇದೊಂದು ಮೈಲುಗಲ್ಲು ಎನ್ನುವಂತೆ ಕುಂಭ ಮೇಳ ನಡೆಯುತ್ತಿದ್ದು, ಸಾವಿರಾರು ನಾಗಾಸಾಧುಗಳು ಭಾಗವಹಿಸಿರುವುದು ವಿಶೇಷವಾಗಿದೆ.
ಇದನ್ನೂ ಓದಿ: ಒಂದು ಲೋಡ್ ಯೂರಿಯಾ ವಶಕ್ಕೆ | 12.74 ಲಕ್ಷ ಮೊತ್ತದ ಗೊಬ್ಬರ ಅಕ್ರಮ ಸಾಗಾಣೆ
ಪ್ರತಿ ದಿನ ಕೋಟ್ಯಾಂತರ ಜನ ಬಂದು ಹೋಗುತ್ತಿದ್ದು, ದೊಡ್ಡ ಮಟ್ಟದಲ್ಲಿ ಉತ್ತರ ಪ್ರದೇಶ ಸರ್ಕಾರ ವ್ಯವಸ್ಥೆ ಮಾಡಿದೆ ಎಂದು ಕುಂಭ ಮೇಳದಲ್ಲಿ ಭಾಗವಹಿಸಿದ ಬಂದ ಪ್ರತಿಯೊಬ್ಬರೂ ಅಚ್ಚರಿಯೊಂದಿಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ.
