Connect with us

    BJP: ಹೊಳಲ್ಕೆರೆ ಬಿಜೆಪಿ ಘಟಕದಿಂದ ಪ್ರೆಸ್‌ಮೀಟ್ | ಮಂಡಲ ಅಧ್ಯಕ್ಷ ಸಿದ್ದೇಶ್ ಏನು ಹೇಳಿದ್ರು?

    ಹೊಳಲ್ಕೆರೆ ಬಿಜೆಪಿ ಘಟಕದಿಂದ ಪ್ರೆಸ್‌ಮೀಟ್

    ಮುಖ್ಯ ಸುದ್ದಿ

    BJP: ಹೊಳಲ್ಕೆರೆ ಬಿಜೆಪಿ ಘಟಕದಿಂದ ಪ್ರೆಸ್‌ಮೀಟ್ | ಮಂಡಲ ಅಧ್ಯಕ್ಷ ಸಿದ್ದೇಶ್ ಏನು ಹೇಳಿದ್ರು?

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 06 DECEMBER 2024

    ಚಿತ್ರದುರ್ಗ: ಹೊಳಲ್ಕೆರೆ ಬಿಜೆಪಿ(BJP)ಯಲ್ಲಿ ಭಿನ್ನಮತ ತಾರಕಕ್ಕೇರಿದೆ. ಕೆಲ ದಿನಗಳಿಂದ ಶಾಸಕ ಎಂ.ಚಂದ್ರಪ್ಪ ಅವರನ್ನು ಬಿಜೆಪಿಯಿಂದ ಉಚ್ಚಾಟಸಿ ಎಂದು ಒಂದು ಗುಂಪು ಸಭೆ ನಡೆಸಿತ್ತು.

    ಕ್ಲಿಕ್ ಮಾಡಿ ಓದಿ: ಡಾ.ಬಿ.ಆರ್.ಅಂಬೆಡ್ಕರ್ 68ನೇ ಪುಣ್ಯಸ್ಮರಣೆ | ಜಿಲ್ಲಾಡಳಿತದಿಂದ ಗೌರವ

    ಈಗ ಪಕ್ಷದ ಜವಾಬ್ದಾರಿ ಇರುವ ಮತ್ತೊಂದು ಗುಂಪು ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಅಸಮಧಾನ ವ್ಯಕ್ತಪಡಿಸಿದೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊಳಲ್ಕೆರೆ ಮಂಡಲ ಅಧ್ಯಕ್ಷ ಸಿದ್ದೇಶ್, ಶಾಸಕರಾದ ಎಂ.ಚಂದ್ರಪ್ಪ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಜಯಸಿಂಹ ಖಾಟ್ರೋತ್ ಅವರ ತಂಡ ಒತ್ತಾಯಿಸಿದೆ. ಆದರೆ, ಎಂದೂ ಪಕ್ಷದ ಪರವಾಗಿ ಕೆಲಸ ಮಾಡದ ಇವರಿಗೆ ಉಚ್ಛಾಟಿಸುವಂತೆ ಹೇಳುವ ಯಾವ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದ್ದಾರೆ.

    ಶಾಸಕ ಎಂ.ಚಂದ್ರಪ್ಪ ಅವರು ಭ್ರಷ್ಟಾಚಾರ ಮಾಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ದೂರಿದ್ದಾರೆ. ಇವರ ಬಳಿ ಯಾವ ದಾಖಲೆ ಇದೆ ಎಂದು ಎಂದು ಕೇಳಿದರು.

    ಕ್ಲಿಕ್ ಮಾಡಿ ಓದಿ: ವಿಮಾನದಲ್ಲಿ ಸರ್ಕಾರಿ ಶಾಲೆ ಮಕ್ಕಳ ಪ್ರವಾಸ | ಹಕ್ಕಿಯಂತೆ ಹಾರಾಡಿದ ಹಳ್ಳಿ ಮಕ್ಕಳು

    ಜಯಸಿಂಹ ಮತ್ತು ಅವರ ತಂಡ 2008 ರಿಂದ 2024ನೇ ವಿಧಾನಸಭಾ ಚುನಾವಣೆವರೆಗೆ ಎಂದೂ ಪಕ್ಷ ಹಾಗೂ ಶಾಸಕ ಚಂದ್ರಪ್ಪ ಅವರ ಪರವಾಗಿ ಕೆಲಸ ಮಾಡಿಲ್ಲ. ಬದಲಾಗಿ ಚಂದ್ರಪ್ಪ ಎದುರು ಮತ್ತೊಬ್ಬ ಅಭ್ಯರ್ಥಿ ನಿಲ್ಲಿಸಿ ಸೋಲುವಂತೆ ಮಾಡಿದ್ದಾರೆ.

    ಪಕ್ಷದ ಮೂಲ ಕಾರ್ಯಕರ್ತರು ಎನ್ನುವ ಇವರು ಒಂದೂ ದಿನವೂ ಪಕ್ಷದ ಕಚೇರಿಗೆ ಬಂದಿದ್ದನ್ನು ನೋಡಿಲ್ಲ. ಪಕ್ಷದ ಪರವಾಗಿ ಪ್ರಚಾರ ಮಾಡಿಲ್ಲ. ಇಂತಹ ವ್ಯಕ್ತಿ ಶಾಸಕರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದರು.

    ಮೊನ್ನೆ ನಡೆದ ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಂತರ ಮಾಜಿ ಸಚಿವರಾದ ಎಚ್.ಆಂಜನೇಯ ಅವರ ಬಳಿ ಹೋಗಿ ಕಾಂಗ್ರೆಸ್ ಶಾಲು ಹಾಕಿಸಿಕೊಂಡು ನಾವು ನಿಮ್ಮ ಪಕ್ಷದವರು ಎಂದಿದ್ದಾರೆ. ಆನಂತರ ಸಂಸದರಾದ ಗೋವಿಂದ ಕಾರಜೋಳ ಬಳಿ ಹೋಗಿ ಬಿಜೆಪಿ ಶಾಲು ಹಾಕಿಸಿಕೊಂಡು ನಾವು ಬಿಜೆಪಿ ಎನ್ನುತ್ತಾರೆ. ಇದಕ್ಕೆಲ್ಲಾ ಸಾಕ್ಷಿಗಳು ಇವೆ. ಇಂತಹ ಗೊಂದಲ ಯಾಕೆ ಎಂದು ಪ್ರಶ್ನಿಸಿದರು.

    ಕ್ಲಿಕ್ ಮಾಡಿ ಓದಿ: ಸಂತಾನಹರಣ ಶಸ್ತ್ರಚಿಕಿತ್ಸೆ ವಿಫಲ | ವೈದ್ಯರಿಗೆ ದಂಡ ಹಾಕಿದ ಗ್ರಾಹಕರ ನ್ಯಾಯಾಲಯ

    ಹೊಳಲ್ಕೆರೆಯಲ್ಲಿ ಶಾಸಕರು ಅಭಿವೃದ್ಧಿ ಕೆಲಸ ಮಾಡೇ ಇಲ್ಲ ಎನ್ನುತ್ತಾರೆ, ಆದರೆ, ತಾಲೂಕಿನಾದ್ಯಂತ ಇರುವ ರಸ್ತೆಗಳು, ಚೆಕ್‌ಡ್ಯಾಂ, ಕಟ್ಟಡಗಳು ಸೇರಿದಂತೆ ಮಾಡಿರುವ ಅನೇಕ ಕೆಲಸಗಳು ಅಭಿವೃದ್ಧಿ ಅಲ್ಲವೇ ಎಂದು ಸಿದ್ದೇಶ್ ಕೇಳಿದರು.

    ಈ ವಿಚಾರದಲ್ಲಿ ಪದೇ ಪದೇ ಮಾತನಾಡದೆ ಸುಮ್ಮನೆ ಇರುವುದು ಒಳ್ಳೆಯದು. ಇಲ್ಲವಾದರೆ ನಾವು ಅವರ ಜಾತಕ ಬಿಚ್ಚಿಡುತ್ತೇವೆ ಎಂದು ಎಚ್ಚರಿಸಿದರು.

    ಕ್ಲಿಕ್ ಮಾಡಿ ಓದಿ: ತಗ್ಗೋದೆ ಇಲ್ಲ ಎನ್ನುವ ತೆಲುಗಿನ ಪುಷ್ಪನಿಗೆ ವಿರೋಧ | ಕನ್ನಡ ಧೀರಭಗತ್‍ರಾಯನಿಗಾಗಿ ಪ್ರತಿಭಟನೆ

    ಸುದ್ದಿಗೋಷ್ಟಿಯಲ್ಲಿ ಜಿ.ಪಂ. ಮಾಜಿ ಸದಸ್ಯ ತಿಪ್ಪೇಸ್ವಾಮಿ, ಪುರಸಭೆಯ ಮಾಜಿ ಅಧ್ಯಕ್ಷ ಆಶೋಕ್, ತಾ.ಪಂ. ಮಾಜಿ ಸದಸ್ಯ ಶಿವು, ಎಪಿಎಂಸಿ, ಮಾಜಿ ಅಧ್ಯಕ್ಷ ಅಂಕಪ್ಪ, ಪುರಸಭಾ ಸದಸ್ಯರಾದ ಬಸವರಾಜ್ ಯಾದವ್, ಮುರುಗೇಶ್, ಮಂಡಲ ಪ್ರಧಾನ ಕಾರ್ಯದರ್ಶಿ ರೂಪ ಸುರೇಶ್, ಓಬಿಸಿ ಅಧ್ಯಕ್ಷ ಗೀರೀಶ್, ನಗರಾಧ್ಯಕ್ಷ ಪ್ರವೀಣ್, ಮಂಡಲ ಉಪಾಧ್ಯಕ್ಷ ರುದ್ರೇಗೌಡ, ಯುವ ಮೋರ್ಚಾ ಅಧ್ಯಕ್ಷ ಅರುಣ್, ಜಯನಾಯ್ಕ, ರುದ್ರೇಶ್, ಬದರಿನಾಯ್ಕ್, ಚಂದ್ರನಾಯ್ಕ್, ಧೃವಕುಮಾರ್, ವಿಜಯ್ ಮತ್ತಿತರರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top