ಮುಖ್ಯ ಸುದ್ದಿ
Hindu Mahaganapati; ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ | ಧ್ವಜ ಪೂಜೆ ಮೂಲಕ ವಿದ್ಯುಕ್ತ ಚಾಲನೆ
CHITRADURGA NEWS | 16 AUGUST 2024
ಚಿತ್ರದುರ್ಗ: ನಗರದ ಬಿ.ಡಿ.ರಸ್ತೆಯಲ್ಲಿರುವ ಜೈನ ಧಾಮದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಗೆ ಶುಭ ಶುಕ್ರವಾರ ಗೋ ಪೂಜೆ ಹಾಗೂ ಧ್ವಜ ಪೂಜೆ ಮೂಲಕ ಪೆಂಡಾಲ್ ಹಾಕುವುದು ಸೇರಿದಂತೆ ಎಲ್ಲ ಕಾರ್ಯಗಳಿಗೆ ಅಧಿಕೃತ ಚಾಲನೆ ದೊರೆಯಿತು.
ಬೆಳಗ್ಗೆ 9 ಗಂಟೆಗೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಪೂಜಾ ಕಾರ್ಯ ಜರುಗಿದವು. ಸೆಪ್ಟಂಬರ್ 7ರಂದು ಬೃಹತ್ ವೇದಿಕೆಯಲ್ಲಿ ಗಣಪತಿ ಪ್ರತಿಷ್ಠಾಪನೆಯಾಗಲಿದೆ. ಸೆ.27ರ ವರೆಗೆ ಪ್ರತಿ ದಿನ ಗಣಪತಿಗೆ ಪೂಜೆ ನೆರವೇರಲಿದ್ದು ಗಣಹೋಮ, ಚಂಡಿಕಾ ಹೋಮಗಳು ನಡೆಯಲಿವೆ.
ಸೆ.28 ರ ಶನಿವಾರ ಶೋಭಾಯಾತ್ರೆ ನಡೆಯಲಿದ್ದು, ಅಂದು ರಾತ್ರಿ ಚಂದ್ರವಳ್ಳಿಯಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಲಾಗುತ್ತದೆ. 14 ಅಡಿ ಎತ್ತರದ ಮೂರ್ತಿ ಮಹಾರಾಷ್ಟ್ರದಲ್ಲಿ ಸಿದ್ದವಾಗುತ್ತಿದೆ. ಸಾಗರದ ತಂಡ ಪೆಂಡಾಲ್ ನಿರ್ಮಿಸುತ್ತಿದೆ.
ಕ್ಲಿಕ್ ಮಾಡಿ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಡಿಕ್ಕಿ | ವ್ಯಕ್ತಿ ಮೃತ
ಯಾದವ ಮಠದ ಕೃಷ್ಣ ಯಾದವಾನಂದ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ,ಉಪ್ಪಾರ ಗುರುಪೀಠದ ಶ್ರೀ ಭಗೀರಥ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಬಂಜಾರ ಗುರುಪೀಠದ ಶ್ರೀ ಸರ್ದಾರ ಸೇವಾಲಾಲ್ ಸ್ವಾಮೀಜಿ, ಕೊಟ್ಟೂರಿನ ಶಿವಪ್ರಕಾಶ ಸ್ವಾಮೀಜಿ ಸಾನಿಧ್ಯವಹಿಸಿದ್ದರು.
ಕ್ಲಿಕ್ ಮಾಡಿ ಓದಿ: ಗುರುವಿನ ಸ್ಮರಣಾರ್ಥ ಸರ್ಕಾರಿ ಶಾಲೆಗೆ ನೆರವಿನ ಹಸ್ತ | ಪ್ರತಿಭಾ ಪುರಸ್ಕಾರಕ್ಕೆ ಮೀಸಲು
ಸಂಸದ ಗೋವಿಂದ ಕಾರಜೋಳ, ಶಾಸಕರಾದ ಚಂದ್ರಪ್ಪ, ಕೆ.ಸಿ.ವಿರೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ಹಿಂದೂ ಮಹಾ ಗಣಪತಿಯ ಉತ್ಸವ ಸಮಿತಿ ಅಧ್ಯಕ್ಷ ನಯನ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರೀನಾಥ್, ಟೈಗರ್ ತಿಪ್ಪೇಸ್ವಾಮಿ, ಸುರೇಶ್ ಸಿದ್ದಾಪುರ, ಭಜರಂಗದಳದ ಜಿಲ್ಲಾ ಕಾರ್ಯದರ್ಶಿ ಚನ್ನಕೇಶವ, ಸಂಯೋಜಕ ಸಂದೀಪ್, ಉಪಾಧ್ಯಕ್ಷ ಡಾ.ಮಂಜುನಾಥ್, ನಗರಾಧ್ಯಕ್ಷ ಅಶೋಕ್, ಉಪಾಧ್ಯಕ್ಷ ರಂಗನಾಥ್, ಸಂಚಾಲಕರಾದ ಸಾಗರ್, ಕಿಶೋರ್, ರಾಮಾಂಜನೇಯ, ಕಾರ್ತಿಕ್, ವಿಠಲ್‌ರಾವ್, ದರ್ಶನ್, ನಗರಸಭಾ ಸದಸ್ಯರಾದ ಸುರೇಶ್, ವೆಂಕಟೇಶ್, ಹರೀಶ್, ಅನುರಾಧ, ಶಶಿಧರ್, ಮಾಜಿ ಸದಸ್ಯರಾದ ರವಿಕುಮಾರ್, ಮುಖಂಡರಾದ ಡಾ.ಸಿದ್ದಾರ್ಥ, ವೆಂಕಟೇಶ್ ಯಾದವ್, ಉಮೇಶ್ ಕಾರಜೋಳ, ಪ್ರಶಾಂತ್, ಅಂಜನಪ್ಪ, ಅರುಣ್ ಕುಮಾರ್, ಶರಣ್ ಕುಮಾರ್, ಅನಿತ್ ಕುಮಾರ್, ಮಲ್ಲಿಕಾರ್ಜುನ್ ಇದ್ದರು.
ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಉತ್ಸವ 2006 ರಿಂದ ಪ್ರಾರಂಭವಾಯಿತು. ಆರ್‌ಎಸ್‌ಎಸ್‌ನ ಎರಡನೇ ಸರಸಂಘಚಾಲಕರಾದ ಶ್ರೀ ಗುರೂಜಿ ಜನ್ಮಶತಾಬ್ದಿ ವರ್ಷದಂದು ವಿಶ್ವಹಿಂದೂ ಪರಿಷತ್, ಬಜರಂಗ ದಳದವರು ಗಣೇಶೋತ್ಸವ ಆಚರಣೆಗೆ ತೀರ್ಮಾನಿಸಿದರು.
ನಗರದ ಅಯ್ಯಣ್ಣನ ಪೇಟೆಯಲ್ಲಿದ್ದ ಆರೆಸ್ಸೆಸ್ ಕಚೇರಿ ಶಕ್ತಿನಿಕೇತನದಲ್ಲಿ ಪಂಚಮುಖಿ ಗಣಪನನ್ನು ಪ್ರತಿಷ್ಠಾಪಿಸಿದರು. ಆನಂತರ ಇದು ತ್ಯಾಗರಾಜ ಬೀದಿಯ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನ, ಡಿಎಚ್‌ಒ ಕಚೇರಿ ಮುಂಭಾಗ, ಬಳಿಕ ಸ್ಟೇಡಿಯಂ ರಸ್ತೆಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣಕ್ಕೆ ಶಿಫ್ಟ್ ಆಯಿತು. ಈಗ ಅಂತಿಮವಾಗಿ ಬಿ.ಡಿ.ರಸ್ತೆಯ ಜೈನಧಾಮದಲ್ಲಿ ಪ್ರತಿಷ್ಠಾಪಿಸಿದ ಮಾಡಲಾಗುತ್ತಿದೆ.
ಪಂಚಮುಖಿ ವಿಗ್ರಹ, ಹನುಮಂತನ ಹೆಗಲ ಮೇಲಿರುವ ಗಣಪ, ಪ್ರಸಕ್ತ ವರ್ಷ ಶಿವನ ರೂಪದಲ್ಲಿರುವ ವಿಗ್ರಹ ಹೀಗೆ ಪ್ರತಿ ವರ್ಷ ವಿಶಿಷ್ಟ ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಹಿಂದೂ ಮಹಾಗಣಪನ ಶೋಭಾಯಾತ್ರೆ ಸಾಮಾಜಿಕ ಸಾಮರಸ್ಯಕ್ಕೆ ಎಡೆ ಮಾಡಿಕೊಟ್ಟಿದೆ. ಲಕ್ಷಾಂತರ ಜನ ಭಾಗವಹಿಸುವ ಮೂಲಕ ದೇಶದಲ್ಲಿ ಅತೀ ಹೆಚ್ಚು ಜನ ಸೇರುವ ಎರಡನೇ ಗಣೇಶೋತ್ಸವ ಎಂದೂ ಹೆಸರಾಗಿದೆ. ಎಲ್ಲ ಜಾತಿ, ಧರ್ಮಗಳ ಜನರು ಭಾಗವಹಿಸುವುದು ವಿಶೇಷ.