Connect with us

    Ayurveda: ಆಯುರ್ವೇದಕ್ಕೆ ಹೆಚ್ಚಿನ ಬೇಡಿಕೆ | ಶಾಸಕ ಎಂ.ಚಂದ್ರಪ್ಪ 

    ಆಯುರ್ವೇದಕ್ಕೆ ಹೆಚ್ಚಿನ ಬೇಡಿಕೆ | ಶಾಸಕ ಎಂ.ಚಂದ್ರಪ್ಪ 

    ಮುಖ್ಯ ಸುದ್ದಿ

    Ayurveda: ಆಯುರ್ವೇದಕ್ಕೆ ಹೆಚ್ಚಿನ ಬೇಡಿಕೆ | ಶಾಸಕ ಎಂ.ಚಂದ್ರಪ್ಪ 

    CHITRADURGA NEWS | 06 NOVEMBER 2024

    ಚಿತ್ರದುರ್ಗ: ಆಯುರ್ವೇದ(Ayurveda)ಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

    ಕ್ಲಿಕ್ ಮಾಡಿ ಓದಿ: ಗ್ರಾ.ಪಂ ಉಪಚುನಾವಣೆ | ವೇಳಾಪಟ್ಟಿ ಪ್ರಕಟ

    ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಪ್ರಕೃತಿ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಥಮ ವರ್ಷದ ವಿದ್ಯಾರ್ಥಿಗಳ ಶಿಷ್ಯೋಪನಯನ ಸಂಸ್ಕಾರ ಮತ್ತು ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು.

    ಯಾವುದೆ ಫಲಾಪೇಕ್ಷೆಯಿಲ್ಲದೆ ಕಳೆದ 40 ವರ್ಷಗಳಿಂದಲೂ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತಿದ್ದೇವೆ. ವೈದ್ಯಕೀಯ ಸೇವೆ ಅತ್ಯಂತ ಅಮೂಲ್ಯವಾದದ್ದು. ಸಮಾಜಕ್ಕೆ ನಿಮ್ಮ ಸೇವೆ ಬೇಕು. ಹಳೆಯ ವೈದ್ಯಕೀಯ ಕಾಲೇಜುಗಳಲ್ಲಿ ಸಿಗುವಂತ ಮೂಲಭೂತ ಸೌಲಭ್ಯಗಳನ್ನು ಪ್ರಥಮ ವರ್ಷದಲ್ಲಿಯೇ ನಿಮಗೆ ಒದಗಿಸಿದ್ದೇವೆ.

    ಮನಸ್ಸನ್ನು ಬೇರೆ ಕಡೆ ಹರಿಸದೆ ಶ್ರದ್ದೆಯಿಂದ ವೈದ್ಯಕೀಯ ಶಿಕ್ಷಣ ಪಡೆದು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

    ಕ್ಲಿಕ್ ಮಾಡಿ ಓದಿ: ಜಾನುಕೊಂಡ ಗ್ರಾಪಂ ನೂತನ ಅಧ್ಯಕ್ಷರಾಗಿ‌ ಮಂಜುಳಾ ಸ್ವಾಮಿ ಆಯ್ಕೆ

    MBBS ಸೀಟು ಪಡೆಯಲು ಕನಿಷ್ಟ ಎರಡು ಕೋಟಿ ರೂ.ಗಳನ್ನು ಪಾವತಿಸಬೇಕು. ಆದರೆ ಆಯುರ್ವೇದಿಕ್ ವೈದ್ಯಕೀಯ ಪದ್ದತಿಯಲ್ಲಿ ನೀವುಗಳು ಅಷ್ಟೊಂದು ಶುಲ್ಕ ಪಾವತಿಸಬೇಕಿಲ್ಲ. ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಿಮ್ಮ ತಂದೆ-ತಾಯಿ, ಗುರು-ಹಿರಿಯರು, ಓದಿದ ಶಿಕ್ಷಣ ಸಂಸ್ಥೆಗೆ ಕೀರ್ತಿ ತನ್ನಿ ಎಂದು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

    ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಮಾತನಾಡಿ, ಸಂಸ್ಥೆಯಲ್ಲಿ ಬಿ.ಇ.ಡಿ. ನರ್ಸಿಂಗ್, ಬಿ.ಕಾಂ. ಬಿಸಿಎಂ. ಎಂಬಿಎ. ಫಾರ್ಮಿಸಿ ಹೀಗೆ ಎಲ್ಲಾ ರೀತಿಯ ಶಿಕ್ಷಣವನ್ನು ನೀಡಲಾಗುತ್ತಿದೆ.

    ಆಯುರ್ವೇದಿಕ್ ಅತ್ಯಂತ ಪುರಾತನ ಪದ್ದತಿ. ಶಿಕ್ಷಣದ ನಂತರ ವೈದ್ಯರುಗಳಾದ ಮೇಲೆ ಸಮಾಜಕ್ಕೆ ನಿಮ್ಮ ಸೇವೆ ಅತ್ಯವಶ್ಯಕ ಎಂದು ಹೇಳಿದರು.

    ಕ್ಲಿಕ್ ಮಾಡಿ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್

    ಜಿಲ್ಲಾ ಆಯುಷ್ ವಿಭಾಗದ ಡಾ.ಚಂದ್ರಕಾಂತ್ ಮಾತನಾಡಿ, ಆಯುರ್ವೇದಿಕ್ ಕಾಲೇಜಿಗೆ ದಾಖಲಾತಿ ಪಡೆದಾಕ್ಷಣ ವೈದ್ಯರುಗಳಾಗಿದ್ದೇವೆಂದುಕೊಳ್ಳಬೇಡಿ. ಐದು ವರ್ಷಗಳ ನಂತರ ನಿಮಗೆ ಮತ್ತೆ ಯಾರು ಹೇಳಿಕೊಡುವುದಿಲ್ಲ. ಮುಂದೆ ಪಿ.ಜಿ.ಶಿಕ್ಷಣ ಪಡೆಯಬೇಕಾಗುತ್ತದೆ. ಆಯುರ್ವೇದಿಕ್ ಶಿಕ್ಷಣವನ್ನು ಚೆನ್ನಾಗಿ ಪಡೆದು ಈ ಪದ್ದತಿಯನ್ನು ಉಳಿಸಿ ಬೆಳೆಸುವಂತೆ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ತಿಳಿಸಿದರು.

    ಸಮಾರಂಭದಲ್ಲಿ ಪ್ರಕೃತಿ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಎಸ್.ಬಿ.ನವಾಝ್, ಸಂಸ್ಥೆಯ ವಿವಿಧ ವಿಭಾಗಗಳ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯವರು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top