Connect with us

    Heavy rain; ತಡರಾತ್ರಿ ಭಾರೀ ಮಳೆ | ತುಂಬಿ ಹರಿದ ಕೆರೆ, ಕಟ್ಟೆ | ತಳುಕು ಶಾಲೆ ಜಲಾವೃತ

    ತಳುಕು ಶಾಲೆ ಜಲಾವೃತ

    ಮುಖ್ಯ ಸುದ್ದಿ

    Heavy rain; ತಡರಾತ್ರಿ ಭಾರೀ ಮಳೆ | ತುಂಬಿ ಹರಿದ ಕೆರೆ, ಕಟ್ಟೆ | ತಳುಕು ಶಾಲೆ ಜಲಾವೃತ

    CHITRADURGA NEWS | 19 OCTOBER 2024

    ಚಿತ್ರದುರ್ಗ: ಜಿಲ್ಲೆಯಲ್ಲಿ ತಡರಾತ್ರಿ ಭಾರೀ ಪ್ರಮಾಣದಲ್ಲಿ ಮಳೆ(heavy rain)ಯಾಗಿದ್ದು, ಬಹುತೇಕ ಕೆರೆ, ಕಟ್ಟೆಗಳು ತುಂಬಿವೆ. ಅನೇಕ ಕೆರೆಗಳು ತುಂಬಿ ಭರ್ಜರಿ ಕೋಡಿ ಹರಿಯುತ್ತಿವೆ.

    ಇದನ್ನೂ ಓದಿ: ವಿವಿ ಸಾಗರ ಯಾತ್ರಿ ನಿವಾಸ ಉದ್ಯಾನವನ ನಿರ್ವಹಣೆಗೆ ಅರ್ಜಿ ಆಹ್ವಾನ 

    ಚಳ್ಳಕೆರೆ, ಮೊಳಕಾಲ್ಮೂರು ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಕೆಲವೆಡೆ ರಸ್ತೆ ಸಂಚಾರ ಬಂದ್ ಆಗಿದೆ.

    ನಾಯಕನಹಟ್ಟಿ ಚಿಕ್ಕಕೆರೆ ಭರ್ತಿ:

    ನಾಯಕನಹಟ್ಟಿ ಪಟ್ಟಣದ ಸಮೀಪದಲ್ಲೇ ಇರುವ ಚಿಕ್ಕ ಕೆರೆ ರಾತ್ರಿ ಮಳೆಯಿಂದ ಭರ್ತಿಯಾಗಿದೆ. ಸಾಕಷ್ಟು ಜನ ಗ್ರಾಮಸ್ಥರು, ಸುತ್ತಮುತ್ತಲಿನ ಹಳ್ಳಿಗಳ ಜನತೆ ಕೆರೆ ಭರ್ತಿಯಾಗಿರುವುದನ್ನು ನೋಡಲು ವೀಕ್ಷಿಸುತ್ತಿದ್ದಾರೆ.

    ಚಳ್ಳಕೆರೆ ತಾಲೂಕಿನ ತಿಪ್ಪಯ್ಯನಕೋಟೆ ಕೆರೆ ಕೂಡಾ ಭರ್ತಿಯಾಗಿ ಕೋಡಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.

    ಇದನ್ನೂ ಓದಿ: ಮನೆಗಳು ಅರ್ಹ ಫಲಾನುಭವಿಗಳಿಗೆ ತಲುಪಲಿ | ಸಂಸದ ಗೋವಿಂದ ಕಾರಜೋಳ

    ತಳುಕು ಗ್ರಾಮದ ಶಾಲೆ ಜಲಾವೃತ:

    ತಳುಕು ಗ್ರಾಮದ ಹೊರವಲಯದಲ್ಲಿರುವ ಮಾರುತಿ ಪ್ರಾಥಮಿಕ ಶಾಲೆಯ ಸುತ್ತಲೂ ಭಾರೀ ಪ್ರಮಾಣದ ನೀರು ನಿಂತು ಜಲಾವೃತವಾಗಿದೆ. ಇದರಿಂದಾಗಿ ಇಂದು ಮಕ್ಕಳು ಶಾಲೆಗೆ ಹೋಗುವುದು ದುಸ್ತರವಾಗಿದೆ.

    ಇದೇ ಗ್ರಾಮದಲ್ಲಿ ಹಾದು ಹೋಗಿರುವ ರೈಲ್ವೇ ಅಂಡರ್‌ಪಾಸ್‌ನಲ್ಲೂ ನೀರು ತುಂಬಿದ್ದು ಜನ ಓಡಾಟ ಬಂದ್ ಆಗಿದೆ.

    ಮಳೆ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ

    ಚಳ್ಳಕೆರೆ: ತಾಲೂಕಿನ ಮಲ್ಲೂರಹಳ್ಳಿ ಸುತ್ತಮುತ್ತಾ ಕಳೆದೊಂದು ವಾರದಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಈ ಭಾಗದ ಹಳ್ಳಗಳಲ್ಲಿ ನೀರು ಹರಿಯುತ್ತಿದೆ.

    ಇದನ್ನೂ ಓದಿ: ಸತತ ಮಳೆಗೆ ಜಿಲ್ಲೆಯಲ್ಲಿ 80 ಮನೆಗಳಿಗೆ ಹಾನಿ

    ಹಳ್ಳದ ನೀರಿನ ಸೆಳೆವಿಗೆ ಸಿಲುಕಿದ್ದ ಯುವಕನನ್ನು ಹಗ್ಗದ ಸಹಾಯದಿಂದ ಸ್ಥಳೀಯರು ರಕ್ಷಣೆ ಮಾಡಿರುವ ವೀಡಿಯೋ ವೈರಲ್ ಆಗಿದೆ.

    ನೀರಿಗೆ ಇಳಿದ ಯುವಕ ನೀರಿನ ರಭಸಕ್ಕೆ ಕೊಚ್ಚಿ ಹೋಗಿ, ಗಿಡಗಳ ಸಹಾಯದಿಂದ ನಿಂತಿದ್ದು, ಸ್ಥಳೀಯರು ಹಗ್ಗದ ನೆರವಿನಿಂದ ಆತನನ್ನು ರಕ್ಷಣೆ ಮಾಡಿ ಹೊರಗೆ ಕರೆತಂದಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top