ಮುಖ್ಯ ಸುದ್ದಿ
Rain report; ಪರಶುರಾಂಪುರದಲ್ಲಿ ಅತೀ ಹೆಚ್ಚು ಮಳೆ | ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ | ಇಲ್ಲಿದೆ ವಿವಿರ
CHITRADURGA NEWS | 17 AUGUST 2024
ಚಿತ್ರದುರ್ಗ: ಶುಕ್ರವಾರ ಸುರಿದ ಮಳೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರ 44.3 ಮಿ.ಮೀ ಮಳೆಯಾಗಿದ್ದು ಇದು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮಳೆಯಾಗಿದೆ.
ಕ್ಲಿಕ್ ಮಾಡಿ ಓದಿ: Rain effect: ರಸ್ತೆಗೆ ಉರುಳಿ ಬಿದ್ದ ಮರ | ಸಂಚಾರ ಅಸ್ತವ್ಯಸ್ತ
ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 26.2 ಮಿ.ಮೀ, ನಾಯಕನಹಟ್ಟಿ 35.7 ಮಿ.ಮೀ, ತಳಕು 23.1 ಮಿ.ಮೀ ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 32.2 ಮಿ.ಮೀ, ಭರಮಸಾಗರ 10.4 ಮಿ.ಮೀ, ಹಿರೇಗುಂಟನೂರು 16.3 ಮಿ.ಮೀ, ತುರುವನೂರು 11.1 ಮಿ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 16.8 ಮಿ.ಮೀ, ಐಮಂಗಲ 18.9 ಮಿ.ಮೀ, ಧರ್ಮಪುರ 36.9 ಮಿ.ಮೀ, ಜೆ.ಜೆ.ಹಳ್ಳಿ 13.7 ಮಿ.ಮೀ ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 13.8 ಮಿ.ಮೀ, ಬಿ.ದುರ್ಗ 2.7 ಮಿ.ಮೀ, ರಾಮಗಿರಿ 10.6 ಮಿ.ಮೀ, ತಾಳ್ಯ 23.1 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 12.1 ಮಿ.ಮೀ, ಮಾಡದಕೆರೆ 12.6 ಮಿ.ಮೀ, ಮತ್ತೋಡು 37.9 ಮಿ.ಮೀ, ಶ್ರೀರಾಂಪುರ 34 ಮಿ.ಮೀ ಮಳೆಯಾಗಿದೆ.
ಕ್ಲಿಕ್ ಮಾಡಿ ಓದಿ: ಆಗಸ್ಟ್ 21ಕ್ಕೆ ಜಿಲ್ಲೆಗೆ ಕೇಂದ್ರ ತಂಡ | ಜಿಪಂ CEO ಎಸ್.ಜೆ.ಸೋಮಶೇಖರ್
ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮುರುನಲ್ಲಿ 3.2 ಮಿ.ಮೀ ಹಾಗೂ ದೇಮಸಮುದ್ರದಲ್ಲಿ 16.5 ಮಿ.ಮೀ ಮಳೆಯಾಗಿದೆ.
44 ಮನೆಗಳು ಭಾಗಶಃ ಹಾನಿ:
ಶುಕ್ರವಾರ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಒಟ್ಟು 44 ಮನೆಗಳು ಭಾಗಶಃ ಹಾನಿಯಾಗಿವೆ. 20 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣಗಳು ವರದಿಯಾಗಿದ್ದು, 106 ಸಣ್ಣ ಜಾನುವಾರುಗಳು ಮೃತಪಟ್ಟಿವೆ. 2 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಗೂ 612.4 ಹೆಕ್ಟೇರ್ ಕೃಷಿ ಬೆಳೆಹಾನಿಯಾಗಿದೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ 22 ಮನೆಗಳು ಭಾಗಶಃ ಹಾನಿ ಹಾಗೂ 20 ಮನಗಳಿಗೆ ನೀರು ನುಗ್ಗಿದ್ದು, 610 ಹೆಕ್ಟೇರ್ ಕೃಷಿ ಬೆಳೆಹಾನಿಯಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 18 ಮನೆಗಳು ಭಾಗಶಃ ಹಾನಿ, 106 ಸಣ್ಣ ಜಾನುವಾರು ಮೃತಪಟ್ಟಿವೆ ಹಾಗೂ 2 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಗೂ 2 ಹೆಕ್ಟೇರ್ ಕೃಷಿ ಬೆಳೆಹಾನಿಯಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 1 ಮನೆ ಭಾಗಶಃ ಹಾನಿಯಾಗಿದೆ.
ಹಿರಿಯೂರು ತಾಲ್ಲೂಕಿನಲ್ಲಿ 2 ಮನೆಗಳು ಭಾಗಶಃ ಹಾನಿಯಾಗಿದ್ದು, 0.40 ಹೆಕ್ಟೇರ್ ಕೃಷಿ ಬೆಳೆಹಾನಿಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 1 ಮನೆ ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.