ಮುಖ್ಯ ಸುದ್ದಿ
Heavy Rain: ತಡರಾತ್ರಿ ಸುರಿದ ಭಾರೀ ಮಳೆ | ತುಂಬಿ ಹರಿಯುತ್ತಿರುವ ಗುಂಡಿಹಳ್ಳ
CHITRADURGA NEWS | 14 AUGSUST 2024
ಚಿತ್ರದುರ್ಗ: ಜಿಲ್ಲೆಯಾದ್ಯಂತ ಬಹುತೇಕ ಕಡೆಗಳಲ್ಲಿ ತಡರಾತ್ರಿ ಭರ್ಜರಿ ಮಳೆ (Heavy Rain)ಸುರಿದಿದೆ. ಕೆಲವೆಡೆ ವಿಪರೀತ ಗಾಳಿಯೊಂದಿಗೆ ಮಳೆಯಾದರೆ, ಇನ್ನೂ ಕೆಲವೆಡೆ ಧಾರಾಕಾರವಾಗಿ ಮಳೆಯಾಗಿದೆ.
ಮಳೆಯ ಸದ್ದಿಗೆ ರಾತ್ರಿ 2 ಗಂಟೆಗೆ ಎಚ್ಚೆತ್ತ ಜನ ಆತಂಕಗೊಂಡಿದ್ದರು. ಅನೇಕ ಕಡೆಗಳಲ್ಲಿ ಮನೆ, ಅಂಗಡಿಗಳಿಗೆ ನೀರು ನುಗ್ಗಿದೆ. ಅಂಡರ್‍ಪಾಸ್‍ಗಳು ಜಲಾವೃತಗೊಂಡಿವೆ.
ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಂಸದ ಗೋವಿಂದ ಕಾರಜೋಳ ಚಾಲನೆ
ರಾತ್ರಿ ಸುರಿದ ಮಳೆಗೆ ಬಹುತೇಕ ಕೆರೆ, ಕಟ್ಟೆಗಳಿಗೆ ಸಾಕಷ್ಟು ನೀರು ಹರಿದು ಬಂದಿದೆ. ಹಳ್ಳ ಕೊಳ್ಳಗಳಲ್ಲಿ ನೀರು ಹರಿಯುತ್ತಿದೆ.
ಹೊರಕೆರೆದೇವರಪುರ, ಉಪ್ಪರಿಗೇನಹಳ್ಳಿ, ಮಾಡದಕೆರೆ ಮಾರ್ಗವಾಗಿ ವಿವಿ ಸಾಗರಕ್ಕೆ ಹರಿಯುವ ಗುಂಡಿಹಳ್ಳದಲ್ಲಿ ಈ ವರ್ಷ ಇದೇ ಮೊದಲ ಬಾರಿಗೆ ನೀರು ಹರಿಯುತ್ತಿದೆ.
ಇದನ್ನೂ ಓದಿ: ಸರ್ಕಾರಿ ನೌಕರರಿಂದ ಮುಖ್ಯಮಂತ್ರಿಗೆ ಸನ್ಮಾನ | ದಿನಾಂಕ ಘೋಷಿಸಿದ ಸಿ.ಎಸ್.ಷಡಾಕ್ಷರಿ
ಉಪ್ಪರಿಗೇನಹಳ್ಳಿ ಬಳಿ ಹಳ್ಳ ಹರಿಯುತ್ತಿರುವುದನ್ನು ನೋಡಲು ಜನ ಬಂದು ಹೋಗುತ್ತಿದ್ದಾರೆ. ಬಹಳ ದಿನಗಳ ನಂತರ ಹಳ್ಳದಲ್ಲಿ ಈ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಎಲ್ಲವೂ ವಾಣಿವಿಲಾಸ ಸಾಗರಕ್ಕೆ ಸೇರಲಿದೆ.