Connect with us

    Rain Alert; ಚಿತ್ರದುರ್ಗ ಜಿಲ್ಲೆಗೆ ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

    ಮಳೆ

    ಮುಖ್ಯ ಸುದ್ದಿ

    Rain Alert; ಚಿತ್ರದುರ್ಗ ಜಿಲ್ಲೆಗೆ ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

    CHITRADURGA NEWS | 15 JULY 2024

    ಚಿತ್ರದುರ್ಗ: ಕಳೆದ ತಿಂಗಳು ಹಳ್ಳ, ಕೊಳ್ಳಗಳು ತುಂಬಿ ಹರಿಯುವಂತೆ ಸುರಿದಿದ್ದ ಮಳೆರಾಯ ಆನಂತರ ಬಂದ ಪುಟ್ಟ ಹೋದ ಪುಟ್ಟ ಎನ್ನುವಂತಾಗಿದ್ದಾನೆ.

    ಬೇಸಿಗೆಯಲ್ಲಿ ಕೊಳವೆ ಬಾವಿಗಳು ಬತ್ತಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿತ್ತು. ರೈತರು ತೋಟಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಹೊಡೆದ ನೆನಪು ಇನ್ನೂ ಹಸಿರಾಗೇ ಇದೆ.

    ಇದನ್ನೂ ಓದಿ: ಕಳ್ಳತನವಾಗಿದ್ದ ಮುರುಘಾ ಶರಣರ ಬೆಳ್ಳಿ ವಿಗ್ರಹ ದಿಢೀರ್ ಪ್ರತ್ಯಕ್ಷ | ಮುರುಘಾ ಮಠಕ್ಕೆ ಶ್ವಾನ ದಳ ದೌಡು

    ಆನಂತರ ದೇವರು ಕಣ್ಣು ಬಿಟ್ಟ ಎನ್ನುವಂತೆ ಧೋ ಎಂದು ಸುರಿದ ಮಳೆ ರೈತರ ಕಷ್ಟ ನೀಗಿಸಿದ್ದ. ತೋಟಗಳಿಗೆ ಜೀವ ಕಳೆ ಬಂದಿತ್ತು. ಹಳ್ಳ ಕೊಳ್ಳ, ವೇದಾವತಿ ನದಿ ತುಂಬಿ ಹರಿಯಿತು. ಅನೇಕ ಕಡೆಗಳಲ್ಲಿ ಕೆರೆಗಳು ಕೋಡಿ ಬಿದ್ದವು. ವಾಣಿವಿಲಾಸ ಸಾಗರಕ್ಕೂ ಎರಡು ಟಿಎಂಸಿವರೆಗೆ ನೀರು ಹರಿದಿತ್ತು.

    ಇದಾದ ನಂತರ ರೈತರು ಖುಷಿಯಿಂದ ಜಮೀನುಗಳನ್ನು ಹದ ಮಾಡಿಕೊಂಡು ಬಿತ್ತನೆ ಆರಂಭಿಸಿದರು. ಅನೇಕರು ಮೆಕ್ಕೆಜೋಳ, ಹತ್ತಿ, ಶೇಂಗಾ ಸೇರಿದಂತೆ ಸಿರಿಧಾನ್ಯಗಳನ್ನು ಬಿತ್ತನೆ ಮಾಡಿದರು.

    ಇದನ್ನೂ ಓದಿ: ನಿದ್ರೆ ಮಂಪರಿನಲ್ಲಿ ಡಿವೈಡರ್‍ಗೆ ಅಪ್ಪಳಿಸಿದ ಕಾರು | ಸ್ಥಳದಲ್ಲೇ ಇಬ್ಬರ ಸಾವು

    ಬಿತ್ತನೆಯಾದ ನಂತರ ಮಳೆ ಕೈಕೊಟ್ಟಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದರು. ಈಗ ಮಳೆ ಮತ್ತ ಬರಲು ಪ್ರಾರಂಭವಾಗಿದೆ. ಕಳೆದ ಮೂರು ದಿನಗಳಿಂದ ಅಲ್ಲಲ್ಲಿ ಸೋನೆ ಮಳೆ ಸುರಿಯುತ್ತಿದೆ.

    ಮುಂದಿನ 7 ದಿನಗಳ ಕಾಲ ಭಾರೀ ಮಳೆ ಸಾಧ್ಯತೆ:

    ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ 7 ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

    ಇದನ್ನೂ ಓದಿ: ಎಚ್.ಆಂಜನೇಯಗೆ ಬೆಳ್ಳಿ ಗದೆ ನೀಡಿ ಸನ್ಮಾನ | ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನ

    ಇನ್ನೂ ದಕ್ಷಿಣ ಒಳನಾಡು ವ್ಯಾಪ್ತಿಯ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆ ಸೂಚನೆಯಿದ್ದು ಅರೆಂಜ್ ಅಲರ್ಟ್ ಘೋಷಿಸಲಾಗಿದೆ.

    ಉಳಿದಂತೆ ಹಾಸನ, ಚಿತ್ರದುರ್ಗ, ಮೈಸೂರು, ಬೆಳಗಾವಿ, ವಿಜಯಪುರ, ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top