CHITRADURGA NEWS | 01 JULY 2025
ಚಿತ್ರದುರ್ಗ: ರಕ್ತದಾನದಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ರೋಟರಿಯನ್ ಸಂಸ್ಥೆಯ ಜಿಲ್ಲಾ ಗೌರನ್ನರ್ ಎಂ.ಕೆ.ರವೀಂದ್ರ ಹೇಳಿದರು.
Also Read: ಹೊಸದುರ್ಗ ಬಿಜೆಪಿ ಅಧ್ಯಕ್ಷರಾಗಿ ಅಣ್ಣಪ್ಪಸ್ವಾಮಿ ಆಯ್ಕೆ
ರೋಟರಿ ಕ್ಲಬ್ ಚಿತ್ರದುರ್ಗ,ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಫೋರ್ಟ್, ರೋಟರಿ ಕ್ಲಬ್ ಚಿನ್ಮೂಲಾದ್ರಿ, ಆರ್ಯ ವೈಶ್ಯ ಸಂಘ, ಇನ್ನರ್ ವೀಲ್‍ಕ್ಲಬ್ ಆಫ್ ಚಿತ್ರದುರ್ಗ ಪೋರ್ಟ್ ಸಂಹಯೋಗದೊಂದಿಗೆ ಬಸವೇಶ್ವರ ಬ್ಲಡ್ ಬ್ಯಾಂಕ್ ಮತ್ತು ರೆಡ್‍ಕ್ರಾಸ್ ಸೊಸೈಟಿ ಸಹಕಾರದೊಂದಿಗೆ ವೈದ್ಯರ ಮತ್ತು ಲೆಕ್ಕ ಪರಿಶೋಧಕರ ದಿನಾಚರಣೆಯ ಪ್ರಯುಕ್ತ ಇಲ್ಲಿನ ವಾಸವಿ ಮಹಲ್‍ನಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತದಾನ ಎನ್ನುವುದು ಸ್ವಯಂ ಪ್ರೇರಿತವಾಗಿ ಬರಬೇಕಿದೆ, ರಕ್ತದ ಕೊರತೆಯಿಂದ ಬಹಳಷ್ಟು ಜನ ನರಳುತ್ತಿದ್ದಾರೆ ಈ ರೀತಿಯಾದ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡುವುದರ ಮೂಲಕ ಅಂತವರಿಗೆ ನೆರವಾಗಬೇಕಿದೆ.
ನಮ್ಮ ದೇಹದಲ್ಲಿ ರಕ್ತವನ್ನು ದಾನ ಮಾಡುವುದರಿಂದ ಯಾವುದೇ ರೀತಿಯ ಹಾನಿಯಾಗುವುದಿಲ್ಲ, ಬದಲಿಗೆ ಹೊಸದಾದ ರಕ್ತ ಬರುತ್ತದೆ. ರಕ್ತವನ್ನು ನಿಯಮಿತವಾದ ಸಮಯದಲ್ಲಿ ದಾನ ಮಾಡುವುದರಿಂದ ನಮ್ಮ ದೇಹದಲ್ಲಿ ರಕ್ತ ಉತ್ಪಾದನೆಯಾಗುತ್ತದೆ ಎಂದರು.
ರಕ್ತದಾನ ಶಿಬಿರದಲ್ಲಿ ಸುಮಾರು 20 ಯೂನಿಟ್‍ಗಳಷ್ಟು ರಕ್ತ ಸಂಗ್ರಹ ಮಾಡಲಾಯಿತು.
Also Read: ಹೊಸದುರ್ಗಕ್ಕೆ ನೀರು ಹರಿಸಲು IISC ಗ್ರೀನ್ ಸಿಗ್ನಲ್ | ನಾಲೆ, ಜಲಾಶಯಕ್ಕೆ ತೊಂದರೆ ಇಲ್ಲ
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಭಾಗ್ಯಲಕ್ಷ್ಮೀ, ಫೋರ್ಟ್ ಅಧ್ಯಕ್ಷ ಶಶಿಧರ್ ಗುಪ್ತ, ಚಿನ್ಮೂಲಾದ್ರಿ ಅಧ್ಯಕ್ಷ ದಿಲ್‍ಷಾದ್ ವುನೀಸ್, ಆರ್ಯ ವೈಶ್ಯ ಸಂಘದ ಅಧ್ಯಕ್ಷ ಶ್ರೀನಿವಾಸ್ ಬಾಬು, ಇನ್ನರ್ ವೀಲ್‍ಕ್ಲಬ್‍ನ ಅಧ್ಯಕ್ಷರಾದ ವೀಣಾ, ಇನ್ನರ್ ವೀಲ್‍ಕ್ಲಬ್ ಆಫ್ ಚಿತ್ರದುರ್ಗ ಪೋರ್ಟ್ ಅಧ್ಯಕ್ಷರಾದ ಗಾಯತ್ರಿ ಶಿವರಾಂ, ರೋಟೇರಿಯನ್‍ಗಳಾದ ಮಧುಪ್ರಸಾದ್, ಎಸ್.ವಿರೇಶ್, ಸೂರ್ಯ ಪ್ರಕಾಶ್, ವೀರಭದ್ರಸ್ವಾಮಿ, ಜಯಶ್ರೀ ಷಾ, ಮಾಧುರಿ, ಯೋಗೀಶ್, ಮಂಜುನಾಥ್ ಬಾಗತ್ವ್, ಗುರುಮೂರ್ತಿ, ಸುರೇಶ್, ಶಿವರಾಂ, ಮೈಲೇಶ್ ಕುಮಾರ್, ಮಹಡಿ ಶಿವಮೂರ್ತಿ, ಚಂದ್ರಮೋಹನ್, ವೆಂಕಟೇಶ್, ಮಧು ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
