Connect with us

    ನಗರಸಭೆ ಆಸ್ತಿ ಒತ್ತುವರಿ ಮಾಡಿದ್ದೀರಾ ಹಾಗಾದ್ರೆ ಈ ಸುದ್ದಿ ಓದಿ..

    ಚಿತ್ರದುರ್ಗ ನಗರಸಭೆ

    ಮುಖ್ಯ ಸುದ್ದಿ

    ನಗರಸಭೆ ಆಸ್ತಿ ಒತ್ತುವರಿ ಮಾಡಿದ್ದೀರಾ ಹಾಗಾದ್ರೆ ಈ ಸುದ್ದಿ ಓದಿ..

    CHITRADURGA NEWS | 10 MAY 2024

    ಚಿತ್ರದುರ್ಗ: ನಗರಸಭೆಯ ರಸ್ತೆ, ಚರಂಡಿ ಹಾಗೂ ಖಾಲಿ ಜಾಗಗಳನ್ನು ಒತ್ತುವರಿ ಮಾಡಿ ತಾತ್ಕಾಲಿಕ ಶೆಡ್, ಕಟ್ಟಡ, ಕಾಂಪೌಂಡ್, ನೀರಿನ ಸಂಪುಗಳನ್ನು ನಿರ್ಮಾಣ ಮಾಡುವುದು ಅಪರಾಧವಾಗಿದೆ. ಸಾರ್ವಜನಿಕರು ನಿಯಮ ಬಾಹಿರವಾಗಿ ಅನಧಿಕೃತ ನಿರ್ಮಾಣ ಮಾಡಿದರೆ, ನಗರ ಸಭೆಯಿಂದ ತೆರವು ಮಾಡುವುದಾಗಿ ಪೌರಾಯುಕ್ತೆ ಎಂ.ರೇಣುಕಾ ಎಚ್ಚರಿಸಿದ್ದಾರೆ.

    ಇದನ್ನೂ ಓದಿ: ವಿದ್ಯಾ ವಿಕಾಸ ಶಾಲೆ ವಿದ್ಯಾರ್ಥಿಗಳ ಅಮೋಘ ಸಾಧನೆ | 100% ಖಇSUಐಖಿ | ಜಿಲ್ಲೆಗೆ ಟಾಪರ್

    ನಗರದ ಕೆ.ಹೆಚ್.ಬಿ ಕಾಲೋನಿ ಹಾಗೂ ಬಿ.ಎಲ್.ಗೌಡ ಲೇಔಟ್‌ನಲ್ಲಿ ನಗರ ಸಭೆ ಜಾಗದಲ್ಲಿ ನಿರ್ಮಿಸಿದ್ದ ಅನಧಿಕೃತ ಕಟ್ಟಗಳನ್ನು ಮೇ.8 ರಂದು ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ. ನಗರಸಭೆಯ ಜಾಗ, ರಸ್ತೆ, ಚರಂಡಿ, ಉದ್ಯಾನವನಗಳು ಸಾರ್ವಜನಿಕರ ಅನೂಕೂಲಕ್ಕಾಗಿ ಬಳಸಲಾಗುತ್ತದೆ. ಇವುಗಳನ್ನು ಕಾಪಾಡಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ.

    ಇದನ್ನೂ ಓದಿ: ಬಸವೇಶ್ವರರ ಜಯಂತಿ ಅಂಗವಾಗಿ ಬೈಕ್ ರ್ಯಾಲಿ | ಕೇಸರಿ ಭಾವುಟದಲ್ಲಿ ರಾರಾಜಿಸಿದ ಬಸವಣ್ಣ

    ನಗರ ಸಭೆಯಿಂದ ಕಟ್ಟಡ ನಕ್ಷೆ ಅನುಮೋದನೆ ಪಡೆಯದೇ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿದರೆ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಕಲಂ 187(ಎ)(ಸಿ)ರಂತೆ ದಂಡ ವಿಧಿಸಿ, ಕಾನೂನು ರೀತ್ಯಾ ಕ್ರಮಕೈಗೊಳ್ಳಲಾಗುವುದು ಎಂದು ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top