ಮುಖ್ಯ ಸುದ್ದಿ
ಬೆಲಗೂರಿನಲ್ಲಿ ಹನುಮ ಜಯಂತಿ; ವಿಜಯ ಮಾರುತಿ ಶರ್ಮ ಸ್ವಾಮೀಜಿ

ಚಿತ್ರದುರ್ಗ ನ್ಯೂಸ್.ಕಾಂ
ಹೊಸದುರ್ಗ ತಾಲ್ಲೂಕಿನ ಬೆಲಗೂರಿನಲ್ಲಿ ಡಿ.22 ರಿಂದ ಡಿ.26ರವರೆಗೆ ವೀರಪ್ರತಾಪ ಆಂಜನೇಯ ಸ್ವಾಮಿ ಹಾಗೂ ಲಕ್ಷ್ಮೀ ನಾರಾಯಣ ಸ್ವಾಮಿಯ ಬ್ರಹ್ಮರಥೋತ್ಸವ, ಹನುಮ ಜಯಂತಿ ನಡೆಯಲಿದೆ. ಐದು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ ಎಂದು ಬೆಲಗೂರಿನ ಮಾರುತಿ ಪೀಠದ ವಿಜಯ ಮಾರುತಿ ಶರ್ಮ ಸ್ವಾಮೀಜಿ ತಿಳಿಸಿದ್ದಾರೆ.
ಇದನ್ನೂ ಓದಿ: ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಕಿ; ಯುವಕನ ವಿರುದ್ಧ ಪೋಕ್ಸೊ ಕೇಸ್
ಡಿ.22ರಂದು ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಾಗುವುದು. ಗಣಪತಿ ಪೂಜೆ, ದೀಪಾರಾಧನೆ, ಹೋಮ, ಡಿ. 23ರಂದು ಬೆಳಿಗ್ಗೆ ಲಕ್ಷ್ಮೀ ನಾರಾಯಣ, ಸಂಜೆ ಸೀತಾರಾಮರ ಕಲ್ಯಾಣೋತ್ಸವ ನಡೆಯುವುದು.ಡಿ.24ರಂದು ಲಕ್ಷ್ಮೀನಾರಾಯಣ ಸ್ವಾಮಿ, ವೀರಾಂಜನೇಯ ಸ್ವಾಮಿ ರಥೋತ್ಸವ ರಾಜಬೀದಿಯಲ್ಲಿ ಸಾಗಲಿದೆ. ಡಿ. 25ರಂದು ಸಾಧು ಸಂತರಿಗೆ ದತ್ತಾತ್ರೇಯ ಜಯಂತಿ ಅಂಗವಾಗಿ ಬಟ್ಟೆ, ಧಾನ್ಯ, ಕಾಣಿಕೆಗಳನ್ನು ಅರ್ಪಿಸಲಾಗುವುದು. ನಿತ್ಯ ಅನ್ನದಾಸೋಹ, ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.
ಇದನ್ನೂ ಓದಿ: ಜಿಲ್ಲಾ– ತಾಲ್ಲೂಕು ಪಂಚಾಯಿತಿಗೆ ಸದ್ಯದಲ್ಲೇ ಚುನಾವಣೆ
ಕಳೆದ ಐದು ದಶಕಗಳಿಂದ ನಡೆಯುತ್ತಿರುವ ಹನುಮ ಜಯಂತಿ ಕಾರ್ಯಕ್ರಮ ಈ ಬಾರಿಯೂ ವಿಜೃಂಭಣೆಯಿಂದ ನಡೆಯಲಿದೆ. ಕಂಕಣಬಲ ಪ್ರಾಪ್ತಿಗಾಗಿ ಭಕ್ತರು ಇದರಲ್ಲಿ ಪಾಲ್ಗೊಳ್ಳಬಹುದು ಎಂದು ಸ್ವಾಮೀಜಿ ತಿಳಿಸಿದ್ದಾರೆ.
