Connect with us

    Congress; ಗಾಂಧಿ ಜಯಂತಿ ಅದ್ದೂರಿ ಆಚರಣೆ | ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಕರೆ 

    ಗಾಂಧಿ ಜಯಂತಿ ಅದ್ದೂರಿ ಆಚರಣೆ | ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಕರೆ 

    ಮುಖ್ಯ ಸುದ್ದಿ

    Congress; ಗಾಂಧಿ ಜಯಂತಿ ಅದ್ದೂರಿ ಆಚರಣೆ | ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಕರೆ 

    CHITRADURGA NEWS | 01 OCTOBER 2024

    ಚಿತ್ರದುರ್ಗ: ಆ.2 ರಂದು ನಡೆಯವ ಗಾಂಧೀಜಿ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಕಾಂಗ್ರೆಸ್(Congress) ಮುಖಂಡರಿಗೆ ಕಾರ್ಯಕರ್ತರಿಗೆ ಕರೆ ನೀಡಿದರು.

    ಕ್ಲಿಕ್ ಮಾಡಿ ಓದಿ: Adike: ಅಡಿಕೆ ಧಾರಣೆ | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್

    ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸಂಜೆ ಗಾಂಧಿ ನಡಿಗೆ ಪೂರ್ವಸಿದ್ಧತೆಗಳ ಬಗ್ಗೆ ಚರ್ಚಿಸಲು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು,

    ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬೆಳಗಾವಿ ಅಧಿವೇಶನವನ್ನು ಮಹಾತ್ಮ ಗಾಂಧಿರವರು ನಡೆಸಿಕೊಟ್ಟು ಇಂದಿಗೆ ನೂರು ವರ್ಷ ಸಂಪೂರ್ಣವಾಗಿರುವ ಹಿನ್ನೆಲೆಯಲ್ಲಿ ಮುಂಬರುವ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಗಾಂಧಿ ಭಾರತ ಹೆಸರಿನ ಅಡಿಯಲ್ಲಿ ವರ್ಷಪೂರ್ತಿ ಆಚರಿಸಲು ಕೈಗೊಳ್ಳಬೇಕಾಗಿದೆ.

    ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಗಾಂಧಿ ಜಯಂತಿಯನ್ನು “ಗಾಂಧಿ ನಡಿಗೆ 100 ವರ್ಷ” ಎಂಬ ಘೋಷಣೆಯೊಂದಿಗೆ ಅದ್ದೂರಿಯಾಗಿ ಆಚರಿಸಬೇಕಾಗಿರುವ ಹಿನ್ನಲೆಯಲ್ಲಿ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯನ್ನು ನಡೆಸಲಾಗುತ್ತಿದೆ.

    ಕ್ಲಿಕ್ ಮಾಡಿ ಓದಿ: Nutritious Food; ಮಕ್ಕಳಿಗೆ ಪೌಷ್ಠಿಕಾಂಶ ಆಹಾರ ವಿತರಣಾ ಕಾರ್ಯಕ್ರಮಕ್ಕೆ ಶಾಸಕ ಎಂ.ಚಂದ್ರಪ್ಪ ಚಾಲನೆ

    ಇಲ್ಲಿ ಅಂದು ನಡೆಯ ಬೇಕಾದ ಕಾರ್ಯಕ್ರಮಗಳ ಬಗ್ಗೆ ತಯಾರಿಯನ್ನು ನಡೆಸಲಾಗುವುದು. ಗಾಂಧೀಜಿಯವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನೇತೃತ್ವವನ್ನು ವಹಿಸಿಕೊಂಡು ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ 29ನೇ ಆಧಿವೇಶನಕ್ಕೆ ಈಗ ನೂರ ಸಂಭ್ರಮವಾಗಿದೆ.

    ಗಾಂಧಿಜಿಯವರು 1924ರ ಡಿಸೆಂಬರ್ 26-27 ರಂದು ಬೆಳಗಾವಿಯಲ್ಲಿ ಅಧ್ಯಕ್ಷತೆ ವಹಿಸಿದ ಮೊದಲನೇ ಹಾಗೂ ಕೊನೆಯ ಅಧಿವೇಶನವಾಗಿದೆ.

    2024 ಅ.2 ರಿಂದ ಅ.2 2025ರವರೆಗೆ ಒಂದು ವರ್ಷಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದು.

    ಅ.2 ರಂದು ಬುಧುವಾರ ಕಾರ್ಯ ಕ್ರಮದ ಉದ್ಘಾಟನೆ ನಡೆಯಲಿದೆ. ಒಂದು ವರ್ಷದ ಕಾರ್ಯಕ್ರಮವನ್ನು ಗಾಂಧಿ ಭಾರತ ಎಂದು ಕರೆಯಲಾಗುವುದು. ಇದರ ಅಂಗವಾಗಿ ಅಂದು ಸುಮಾರು 1 ಕೀ.ಮೀ.ನಷ್ಟು ಗಾಂಧಿ ನಡಿಗೆ ಪಾದಯಾತ್ರೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಗಳ ಬಳಕೆಯಾಗಬೇಕು, ಭಾಗವಹಿಸುವವರು ಶ್ವೇತ ವಸ್ತ್ರ, ಗಾಂಧಿ ಟೋಪಿ ಧರಿಸಬೇಕು.

    ಕ್ಲಿಕ್ ಮಾಡಿ ಓದಿ: Rain Report: ಹಿರೇಗುಂಟನೂರು ವ್ಯಾಪ್ತಿಯಲ್ಲಿ 33 ಮಿ.ಮೀ ಮಳೆ

    ಕಾರ್ಯಕ್ರಮದಲ್ಲಿ ಗಾಂಧೀಜಿಯವರಿಗೆ ಪ್ರಿಯವಾದ ಭಜನೆ ಮತ್ತು ಹಾಡು ಹಾಕಬೇಕು. ಎಲ್ಲಾ ಮುಖಂಡರು, ಬ್ಲಾಕ್ ಅಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರು ಸಾಧ್ಯವಾದಷ್ಟು ಜನತೆಯನ್ನು ಪಾದಯಾತ್ರೆ ಹಾಗೂ ಕಾರ್ಯಕ್ರಮಕ್ಕೆ ಕರೆತರಬೇಕಿದೆ ಎಂದು ಸೂಚನೆ ನೀಡಿದರು.

    ಡಿಸಿಸಿ ಅಧ್ಯಕ್ಷ ತಾಜ್‍ಪೀರ್ ಮಾತನಾಡಿ, ಬೆಳಗಾವಿ ಅಧಿವೇಶನವನ್ನು ಮಹಾತ್ಮಗಾಂಧಿರವರು ನಡೆಸಿಕೊಟ್ಟು ಇಂದಿಗೆ ನೂರು ವರ್ಷ ಸಂಪೂರ್ಣವಾಗಿರವುದು ನಮ್ಮ ಕಾಲದಲ್ಲಿ ಕಾಂಗ್ರೆಸ್‍ರವರಿಗೆ ನೂರರ ಸಂಭ್ರಮ ಕಾರ್ಯಕ್ರಮ ಬಂದಿರುವುದು ಸಂತೋಷದ ವಿಷಯವಾಗಿದೆ, ಇದನ್ನು ಅದ್ದೂರಿಯಾಗಿ ವರ್ಷ ಪೂರ್ತಿಯಾಗಿ ಆಚರಣೆಯನ್ನು ಮಾಡಲಾಗುವುದು ಅದಕ್ಕೆ ಬೇಕಾದ ತಯಾರಿಯನ್ನು ಸಹಾ ಮಾಡಲಾಗುವುದು, ಕೆಪಿಸಿಸಿ ವತಿಯಿಂದ ಇದನ್ನು ಆಚರಣೆ ಮಾಡಲು ಈಗಾಗಲೇ ಎಲ್ಲಾ ತಯಾರಿಯನ್ನು ನಡೆಸಲಾಗಿದೆ.

    ಅಂದು ಬೆಳಿಗ್ಗೆ 9 ಗಂಟೆಗೆ ನಗರದ ನೀಲಕಂಠೇಶ್ವರ ದೇವಾಲಯದಲ್ಲಿ ಇರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಕಾಂಗ್ರೆಸ್ ಕಚೇರಿಯವರೆಗೂ ಪಾದಯಾತ್ರೆ ನಡೆಸಲಾಗುವುದು, ನಂತರ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

    ಕ್ಲಿಕ್ ಮಾಡಿ ಓದಿ: Horticulture Department; ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ರಾಮಕೃಷ್ಣಪ್ಪ ಮಾತನಾಡಿದರು.

    ಸಭೆಯಲ್ಲಿ ಡಿಸಿಸಿ ಮಾಜಿ ಅಧ್ಯಕ್ಷ ಫಾತ್ಯರಾಜನ್, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಡಿಸಿಸಿಯ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಮೈಲಾರಪ್ಪ, ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ಸೇರಿದಂತೆ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top