Connect with us

    ಪಿಡಿಓ ವಿರುದ್ಧ ಅಸಮಧಾನ | ಸಾಮೂಹಿಕ ರಾಜಿನಾಮೆಗೆ ಮುಂದಾದ ಗ್ರಾಮ ಪಂಚಾಯಿತಿ ಸದಸ್ಯರು

    ಸಾಮೂಹಿಕ ರಾಜಿನಾಮೆಗೆ ಮುಂದಾದ ಗ್ರಾಮ ಪಂಚಾಯಿತಿ ಸದಸ್ಯರು

    ಹಿರಿಯೂರು

    ಪಿಡಿಓ ವಿರುದ್ಧ ಅಸಮಧಾನ | ಸಾಮೂಹಿಕ ರಾಜಿನಾಮೆಗೆ ಮುಂದಾದ ಗ್ರಾಮ ಪಂಚಾಯಿತಿ ಸದಸ್ಯರು

    CHITRADURGA NEWS | 1 MARCH 2024

    ಚಿತ್ರದುರ್ಗ: ಸ್ಥಳೀಯ ಸರ್ಕಾರ ಎಂದೇ ನಂಬಿರುವ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರು, ಅಧಿಕಾರಿಗಳ ನಡುವೆ ಸಾಮರಸ್ಯ ಇದ್ದರೆ ಗ್ರಾಮಗಳನ್ನು ನಂದನವನವನ್ನೇ ಮಾಡಬಹುದು.

    ಆದರೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸದಸ್ಯರು, ಅಧ್ಯಕ್ಷರ ತಾಳ ಮೇಳ ಸರಿಯಾಗದಿದ್ದರೆ ಆ ಪಂಚಾಯಿತಿಯ ಸ್ಥಿತಿ ಅಧೋಗತಿ ಎನ್ನುವುದಕ್ಕೆ ನೂರಾರು ಉದಾಹರಣೆಗಳಿವೆ.

    ಇದನ್ನೂ ಓದಿ: ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿ

    ಅಂಥದ್ದೋಂದು ಉದಾಹರಣೆಗೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಕರಿಯಾಲ ಗ್ರಾಮ ಪಂಚಾಯಿತಿ ಸಾಕ್ಷಿಯಗಿದೆ

    ಇಲ್ಲಿನ ಪಿಡಿಓ ಚಂದ್ರಕಲಾ ಸದಸ್ಯರ ಮಾತಿಗೆ ಮನ್ನಣೆ ನೀಡುತ್ತಿಲ್ಲ. ಕುಡಿಯುವ ನೀರು ಸೇರಿದಂತೆ ಸ್ಥಳೀಯ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅಭಿವೃದ್ಧಿಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯಿತಿಯ 11 ಸದಸ್ಯರು ರಾಜಿನಾಮೆಗೆ ಮುಂದಾಗಿದ್ದಾರೆ.

    ಇದನ್ನೂ ಓದಿ: ನಕಲಿ ಐಎಸ್‍ಐ ಮಾರ್ಕಿನ ರೋಲ್ ಪೈಪ್ ಘಟಕದ ಮೇಲೆ ಬಿಐಎಸ್ ಅಧಿಕಾರಿಗಳ ದಾಳಿ

    ಕರಿಯಾಲ ಗ್ರಾಮ ಪಂಚಾಯಿತಿ ಪಿಡಿಓ ಚಂದ್ರಕಲಾ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲ ಕೆಲಸಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಮಾತಿಗೆ ಸ್ಪಂದಿಸದೆ ದುರ್ವರ್ತನೆ ತೋರುತ್ತಿದ್ದಾರೆ ಎಂದು ಸದಸ್ಯರು ಕಾರಣ ಮುಂದಿಟ್ಟಿದ್ದಾರೆ.

    ಸಕಾಲಕ್ಕೆ ಇ-ಸ್ವತ್ತು ಮಾಡಿಕೊಡುತ್ತಿಲ್ಲ. ವಸತಿ ಯೋಜನೆಗಳ ಬಿಲ್ ಮಾಡಿಕೊಡುತ್ತಿಲ್ಲ. ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುವುದಿಲ್ಲ. ನರೇಗಾ ಕಾಮಗಾರಿಗಳ ಬಿಲ್ ಮಾಡಿಲ್ಲ. ವಿದ್ಯುತ್ ಬಲ್ಪ್ ಖರೀಧಿ ಬಿಲ್ ಕೂಡಾ ಬಾಕಿಯಿದೆ ಹೀಗೆ ಸದಸ್ಯರು ಸಾಲು ಸಾಲು ಆರೋಪಗಳನ್ನು ಪಿಡಿಓ ಮೇಲೆ ಹೊರಿಸಿದ್ದಾರೆ.

    ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮಮ ಮಂಡಳಿ ಭಾಗ್ಯ

    ಈ ಹಿನ್ನೆಲೆಯಲ್ಲಿ ಕರಿಯಾಲ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಸಾಮೂಹಿಕವಾಗಿ ರಾಜಿನಾಮೆ ನೀಡುವ ತೀರ್ಮಾನಕ್ಕೆ ಬಂದಿದ್ದಾರೆ.

    ಸದಸ್ಯರಾದ ಕೆ.ಬಸವರಾಜ್, ಎಂ.ಮಾರಪ್ಪ, ಸಾಕಮ್ಮ, ರಾಜನಾಯ್ಕ್, ಈರಣ್ಣ, ಪಿ.ಪ್ರಸನ್ನ ಕುಮಾರ್, ಡಿ.ವೆಂಕಟೇಶ್, ಭಾಗ್ಯಮ್ಮ, ಸುಶೀಲಮ್ಮ, ಮಂಜುಳಾ ಸೇರಿದಂತೆ 11 ಸದಸ್ಯರು ಗ್ರಾಮ ಪಂಚಾಯಿತಿ ಸದಸ್ಯರಿಗೆ ಗುರುವಾರ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ.

    ಇದನ್ನೂ ಓದಿ: 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕಿಸಿ | ಡಾ.ಅಭಿನವ್

    ಉಳಿದ ಮೂವರು ಸದಸ್ಯರು ಅನ್ಯ ಕಾರ್ಯ ನಿಮಿತ್ತ ಕೇಂದ್ರ ಸ್ಥಾನದಲ್ಲಿ ಇಲ್ಲದ ಕಾರಣ ಇಂದು ರಾಜಿನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

    ಗ್ರಾಮ ಪಂಚಾಯಿತಿ ಅಧ್ಯಕ್ಷರು ಈ ಎಲ್ಲಾ ರಾಜಿನಾಮೆ ಪತ್ರಗಳ ಜೊತೆಗೆ ತಮ್ಮ ರಾಜಿನಾಮೆ ಪತ್ರವನ್ನೂ ಸೇರಿಸಿ ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಲು ತೀರ್ಮಾನಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಹಿರಿಯೂರು

    To Top