ಮುಖ್ಯ ಸುದ್ದಿ
GPS ಮತ್ತು ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ | ಟ್ಯಾಕ್ಸಿ, ಆಟೋ ಮಾಲೀಕರ ಖಂಡನೆ
CHITRADURGA NEWS | 23 JULY 2024
ಚಿತ್ರದುರ್ಗ: ಕೇಂದ್ರ ಸಾರಿಗೆ ಇಲಾಖೆಯ ಆದೇಶದಂತೆ ರಾಜ್ಯ ಸಾರಿಗೆ ಇಲಾಖೆಯು ಪ್ರವಾಸಿ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಲು ಕಡ್ಡಾಯ ಮಾಡಿರುವುದನ್ನು ವಿರೋಧಿಸಿ ವಿವಿಧ ವಾಹನ ಮಾಲೀಕರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: Medical college; ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ ನೋಟೀಸ್ | MLC ಕೆ.ಎಸ್.ನವೀನ್ ಆಕ್ರೋಶ
ಜಿಲ್ಲೆಯ ಖಾಸಗಿ ಬಸ್, ಲೈಸ್ ಸರ್ವಿಸ್ ಬಸ್ ಮಾಲೀಕರ ಸಂಘ, ಮಿನಿ ಲಾರಿ ಸಂಘ ಹಾಗೂ ಅಪ್ಪು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘ, ಲಘು ವಾಹನ ಮಾಲೀಕರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಿದರು.
ಅವೈಜ್ಞಾನಿಕವಾದ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಕೆಯಿಂದ ರಾಜ್ಯದ ಎಲ್ಲಾ ಸಾರಿಗೆ ಕಚೇರಿಗಳಲ್ಲಿ 13 ಸಾವಿರದಿಂದ 15 ಸಾವಿರ ರೂ.ಗಳವರೆಗೆ ವಸೂಲಿ ಮಾಡುತ್ತಿದ್ದು, ಪ್ರವಾಸಿ ವಾಹನಗಳ ಚಾಲಕರು ಮತ್ತು ಮಾಲೀಕರುಗಳಿಗೆ ಹೊರೆಯಾಗಿದೆ.
2024 ಸೆಪ್ಟೆಂಬರ್ ಗೆ ಯಾವುದೇ ವಾಹನಗಳಿಗೆ ಜಿಪಿಎಸ್. ಮತ್ತು ಪ್ಯಾನಿಕ್ ಬಟನ್‍ಗಳನ್ನು ಅಳವಡಿಸದೆ ವಾಹನಗಳಿಗೆ ಎಫ್.ಸಿ. ನೀಡಬಹುದೆಂದು ರಾಜ್ಯ ಸಾರಿಗೆ ಸಚಿವರು ಆದೇಶ ಹೊರಡಿಸಿದ್ದರೂ ಸಾರಿಗೆ
ಅಧಿಕಾರಿಗಳು ಸುಲಿಗೆ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: Lok Sabha: ಲೋಕಸಭೆ ಅಧಿವೇಶನದಲ್ಲಿ ಕೇಂದ್ರೀಯ ವಿದ್ಯಾಲಯ ಸದ್ದು | ಮೊದಲ ದಿನ ಮೊದಲ ಪ್ರಶ್ನೆ ಕೇಳಿದ ಸಂಸದ ಗೋವಿಂದ ಎಂ.ಕಾರಜೋಳ
ರಾಜ್ಯದ ಎಲ್ಲಾ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರು ಮತ್ತು ಮಾಲೀಕರುಗಳು ಹೈರಾಣಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೆ ಈ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಪ್ರತಿಭಟನೆಯಲ್ಲಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಗೌರವಾಧ್ಯಕ್ಷ ಇಕ್ಬಾಲ್ ಬಿ.ಸಿ.ರೋಡ್, ಪ್ರಧಾನ ಕಾರ್ಯದರ್ಶಿ ಆರೀಫ್ ಉಜಿರೆ, ಶರತ್‍ಕುಮಾರ್, ದಿನೇಶ್, ನರಹರಿ, ಮಧು ಸೇರಿದಂತೆ ಚಾಲಕರು ಮತ್ತು ಮಾಲೀಕರುಗಳು ಪಾಲ್ಗೊಂಡಿದ್ದರು.