ಹೊಳಲ್ಕೆರೆ
ಮಲ್ಲಾಡಿಹಳ್ಳಿಯ ಆಯುರ್ವೇದ ವೈದ್ಯಕೀಯ ಕಾಲೇಜಿಗೆ 6 ರ‍್ಯಾಂಕ್

CHITRADURGA NEWS | 14 APRIL 2025
ಹೊಳಲ್ಕೆರೆ: ತಾಲೂಕಿನ ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಬೆಂಗಳೂರಿನಲ್ಲಿ ಕಳೆದ ಸಾಲಿನಲ್ಲಿ ನಡೆದ ಬಿ.ಎ.ಎಂ.ಎಸ್ ಆಯುರ್ವೇದ ಪರೀಕ್ಷೆಯಲ್ಲಿ 06 ರ‍್ಯಾಂಕ್ ಬಂದಿರುತ್ತವೆ ಎಂದು ಪ್ರಾಚಾರ್ಯ ಡಾ.ಶ್ರೀಪತಿ ಈ.ನಾಗೋಳ್ ತಿಳಿಸಿದ್ದಾರೆ.
Also Read: ನಿವೃತ್ತ ಇಂಜಿನಿಯರ್ ಕೆ.ಸಿ.ನಿಂಗಪ್ಪ ನಿಧನ
ವಿ.ಎಲ್. ಭರತ್ ರಿಸರ‍್ಚ್ ಮೆಥೊಡೊಲೊಜಿ ವಿಭಾಗ 8 ನೇ ರ‍್ಯಾಂಕ್, ಟಿ.ಮೇಘನಾ ಬಾಲಾರೋಗ ವಿಭಾಗ 10ನೇ ರ‍್ಯಾಂಕ್, ಕೆ.ಎಂ.ಜಾಹ್ನವಿ ಆಗದತಂತ್ರ ವಿಭಾಗ 8ನೇ ರ‍್ಯಾಂಕ್, ಜೋಶಿ, ಮೋನಿಕಾ, ಸಂಜಯ್ 10ನೇ ರ‍್ಯಾಂಕ್ ಆಗದತಂತ್ರ ವಿಭಾಗ, ಸ್ನೇಹಲ್ ಪಾಟೀಲ್ 6ನೇ ರ‍್ಯಾಂಕ್ ಶಾಲಾಕ್ಯತಂತ್ರ ಹಾಗೂ ಸಂಸ್ಕೃತ ವಿಭಾಗದಲ್ಲಿ 10ನೇ ರ‍್ಯಾಂಕ್, ಸುಮ ಮಣಿ ಬಾಬು 10ನೇ ರ‍್ಯಾಂಕ್ ರಿಸರ‍್ಚ್ ಮೆಥೊಡೊಲೊಜಿ ವಿಭಾಗದಲ್ಲಿ ಪಡೆದಿದ್ದಾರೆ.
ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಬೆಂಗಳೂರಿನಲ್ಲಿ ನಡೆಯಲಿರುವ 27ನೇ ಘಟಿಕೋತ್ಸವದಲ್ಲಿ ರ‍್ಯಾಂಕ್ ಪ್ರಮಾಣ ಪತ್ರವನ್ನು ಪ್ರದಾನ ಮಾಡುವವರು ಎಂದು ಕಾಲೇಜಿನಿಂದ ತಿಳಿಸಲಾಗಿದೆ.
Also Read: ನಿಮ್ಮ ಮಗುವಿಗೆ ಆಟಿಸಂ ಸಮಸ್ಯೆ ಇದೇ ಎಂಬುದನ್ನು ಈ ಲಕ್ಷಣಗಳ ಮೂಲಕ ತಿಳಿದುಕೊಳ್ಳಿ
ರ‍್ಯಾಂಕ್ ವಿಜೇತರಾದ ವಿದ್ಯಾರ್ಥಿಗಳಿಗೆ ಕಾಲೇಜು ಸಿಬ್ಬಂದಿಗಳಿಂದ ಅಭಿನಂದನೆ ತಿಳಿಸಿದ್ದಾರೆ.
