Connect with us

    ವರ್ಷದ ಭವಿಷ್ಯ | ಮಿಥುನ ರಾಶಿ – 2025

    MITHUNA

    ಮುಖ್ಯ ಸುದ್ದಿ

    ವರ್ಷದ ಭವಿಷ್ಯ | ಮಿಥುನ ರಾಶಿ – 2025

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 01 JANUARY 2025

    ಮಿಥುನ ರಾಶಿ: ಜನ್ಮ ಗುರುವಿನ ಪ್ರಭಾವದಿಂದ ಕೆಲಸದಲ್ಲಿ ಅಡೆತಡೆಗಳು ಮತ್ತು ಸಮಸ್ಯೆಗಳು ಹೆಚ್ಚಾಗುತ್ತವೆ. ವೃತ್ತಿಪರ ಉದ್ಯೋಗದಲ್ಲಿ ಸ್ಥಾನ ಚಲನೆಗಳಿರುತ್ತವೆ, ವ್ಯಾಪಾರದಲ್ಲಿ ಒತ್ತಡಗಳು ಅಧಿಕವಾಗುತ್ತವೆ. ಆರೋಗ್ಯದ ವಿಚಾರದಲ್ಲಿ ಗಮನ ಹರಿಸುವುದು ಒಳ್ಳೆಯದು. ನಿಮ್ಮ ಇಷ್ಟದೈವವನ್ನು ಪೂಜಿಸುವುದು ಒಳ್ಳೆಯದು. ಮನೆಯ ಹೊರಗೆ ಜಗಳಗಳು ಹೆಚ್ಚಾಗುತ್ತವೆ. ರಾಹು ಮತ್ತು ಕೇತುಗಳ ಪ್ರಭಾವದಿಂದ ಕುಟುಂಬದಲ್ಲಿ ವಿವಾದಗಳು ಉಂಟಾಗುತ್ತವೆ. ವರ್ಷದ ದ್ವಿತೀಯಾರ್ಧದಲ್ಲಿ ಕೆಲವು ಶುಭ ಫಲಿತಾಂಶಗಳು ಕಂಡುಬರುತ್ತವೆ. ವಿದ್ಯಾರ್ಥಿಗಳಿಗೆ ಒತ್ತಡ ಹೆಚ್ಚಾಗುತ್ತವೆ. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ರಾಜಕೀಯ ವ್ಯಕ್ತಿಗಳಿಗೆ ಅನುಕೂಲಕರವಾಗಿರುವುದಿಲ್ಲ. ವ್ಯವಶಯದಲ್ಲಿ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದಿಲ್ಲ, ವ್ಯಾಪಾರಸ್ಥರಿಗೆ ಕೆಲವು ಮಿಶ್ರ ಫಲಿತಾಂಶಗಳು ಮತ್ತು ಒತ್ತಡ ಹೆಚ್ಚಾಗುತ್ತದೆ. ಸಾಲ ಬಾಧೆ ಹೆಚ್ಚಾಗುತ್ತದೆ. ಹೊಸ ಹೂಡಿಕೆಗಳ ವಿಷಯದಲ್ಲಿ ಯೋಚಿಸಿ ವ್ಯವಹರಿಸಿ. ನ್ಯಾಯಾಲಯದ ವಿಷಯಗಳು ಕಿರಿಕಿರಿಯನ್ನು ಉಂಟುಮಾಡುತ್ತವೆ. ಜನ್ಮ ಗುರುವಿನ ಪ್ರಭಾವದಿಂದಾಗಿ ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ.

    ಜನವರಿ

    ಈ ತಿಂಗಳು ನಿಮಗೆ ಹೆಚ್ಚು ಅನುಕೂಲಕರವಾಗಿಲ್ಲ. ಮಾನಸಿಕ ಚಿಂತೆಗಳು, ಕೆಲವು ವ್ಯವಹಾರಗಳಲ್ಲಿ ಭಯ. ಹೊಸ ಪರಿಚಯಗಳಿಂದ ಲಾಭ. ದೂರ ಪ್ರಯಾಣಗಳನ್ನು ಮಾಡುತ್ತೀರಿ. ಪ್ರತಿಯೊಂದು ವಿಷಯದಲ್ಲೂ ವಿರೋಧವಿರುತ್ತದೆ. ತಿಂಗಳ ಕೊನೆಯಲ್ಲಿ ಅನುಕೂಲತೆ. ಸ್ತ್ರೀ ಮೂಲಕ ಧನ ವ್ಯಯವಾಗುತ್ತದೆ.

    ಫೆಬ್ರವರಿ 

    ಈ ತಿಂಗಳು ನಿಮಗೆ ಮಿಶ್ರ ಫಲಿತಾಂಶಗಳಿರುತ್ತವೆ. ಸಂಬಂಧಿಕರೊಂದಿಗೆ ವಿವಾದಗಳು ಉಂಟಾಗುತ್ತದೆ. ಶುಭ ಕಾರ್ಯಗಳಿಗೆ ಧನ ವ್ಯಯವಾಗುತ್ತದೆ. ಹಳೆಯ ಸ್ನೇಹಿತರ ಸಹಾಯದಿಂದ ಸ್ವಲ್ಪ ಸಮಾಧಾನ ಉಂಟಾಗುತ್ತದೆ. ವಿದೇಶ ಪ್ರಯಾಣದ ಪ್ರಯತ್ನ ಲಾಭದಾಯಕವಾಗಿರುತ್ತದೆ. ಆರ್ಥಿಕವಾಗಿ ಅನುಕೂಲಕರವಾಗಿರುತ್ತದೆ.

    ಮಾರ್ಚ್

    ಈ ತಿಂಗಳು ಅಷ್ಟು ಅನುಕೂಲಕರವಾಗಿರುವುದಿಲ್ಲ. ಆರೋಗ್ಯ ಸಮಸ್ಯೆಗಳು ತೊಂದರೆಗಳನ್ನು ಉಂಟುಮಾಡುತ್ತವೆ. ಖರ್ಚು ವೆಚ್ಚಗಳು ಹೆಚ್ಚಾಗುತ್ತವೆ. ತಿಂಗಳಾಂತ್ಯದಲ್ಲಿ ಶುಭ ಸಮಾಚಾರ ಕೇಳಿ ಬರುತ್ತದೆ. ಬಂದು ಮಿತ್ರ ಭೇಟಿ ಸಂತೋಷವನ್ನು ತರುತ್ತದೆ. ದೇವಸ್ಥಾನಕ್ಕೆ ಭೇಟಿ ನೀಡುತ್ತೀರಿ.

    ಏಪ್ರಿಲ್ 

    ಈ ತಿಂಗಳಲ್ಲಿ ಅನುಕೂಲಕರ ಫಲಿತಾಂಶಗಳಿರುತ್ತವೆ. ನ್ಯಾಯಾಲಯದ ಪ್ರಕರಣಗಳು ಅನುಕೂಲಕರವಾಗಿರುತ್ತವೆ. ಉದ್ಯೋಗದಲ್ಲಿ ಅನುಕೂಲತೆ ಇರುತ್ತದೆ. ಸಮಾಜದ ಹಿರಿಯರೊಂದಿಗೆ ಪರಿಚಯಗಳು ಉಂಟಾಗುತ್ತವೆ. ಹೊಸ ಮನೆಯ ಪ್ರಯತ್ನಗಳು ಬಕುಡಿ ಬರುತ್ತವೆ. ವ್ಯಾಪಾರಸ್ಥರಿಗೆ ಲಾಭದಾಯಕವಾಗಿರುತ್ತದೆ.

    ಮೇ 

    ಈ ತಿಂಗಳು ಅನುಕೂಲಕರವಾಗಿರುದಿಲ್ಲ. ಅನಾರೋಗ್ಯ ಸಮಸ್ಯೆಗಳಿರುತ್ತವೆ. ಕೌಟುಂಬಿಕ ವಿವಾದಗಳಿಂದ ಮಾನಸಿಕ ಸಮಸ್ಯೆಗಳಿರುತ್ತವೆ . ಹೆಂಡತಿಯಿಂದ ಸೌಖ್ಯ. ಮನೆಯಲ್ಲಿ ಶುಭ ಕಾರ್ಯಗಳನ್ನು ನಿರ್ವಹಿಸುತ್ತೀರಿ. ದೇವಸ್ಥಾನಕ್ಕೆ ಭೇಟಿ ನೀಡುತ್ತೀರಿ. ವಿನಾಕಾರಣ ವಿವಾದಗಳು ಉಂಟಾಗುತ್ತವೆ.

    ಜೂನ್

    ಈ ತಿಂಗಳು ಅನುಕೂಲಕರವಾಗಿರುವುದಿಲ್ಲ. ಸಮಸ್ಯೆಗಳು ಹೆಚ್ಚು ಕಷ್ಟದಿಂದ ಪೂರ್ಣಗೊಳ್ಳುವುದಿಲ್ಲ. ವೃತ್ತಿಪರವಾಗಿ ಸಮಸ್ಯೆಗಳು. ನ್ಯಾಯಾಲಯದ ವ್ಯವಹಾರಗಳು ಮುಂದೂಡಲ್ಪಡುತ್ತವೆ. ವಾಹನ ಅಪಘಾತಗಳು. ಉದ್ಯೋಗದಲ್ಲಿ ಸ್ಥಾನ ಚಲನೆಗಳಿರುತ್ತವೆ.

    ಜುಲೈ 

    ಈ ತಿಂಗಳು ಮಿಶ್ರ ಫಲಿತಾಂಶಗಳಿರುತ್ತವೆ. ಸಮಾಜದಲ್ಲಿ ಕೀರ್ತಿ , ಪ್ರತಿಷ್ಟೆ ಹೆಚ್ಚಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ತೀರ್ಥಯಾತ್ರೆಗಳನ್ನು ಮಾಡುತ್ತೀರಿ, ಕೆಲವು ಕಾರ್ಯಗಳಲ್ಲಿ ವಿಫಲತೆಗಳಿರುತ್ತವೆ. ಯೋಜಿಸಿದ ಕೆಲಸಗಳು ತಡವಾಗಿ ಪೂರ್ಣಗೊಳ್ಳುತ್ತವೆ. ಇತರರಿಗೆ ಸಹಾಯ ಮಾಡುತ್ತೀರಿ. ಖರ್ಚು ವೆಚ್ಚಗಳು ಹೆಚ್ಚಾಗುತ್ತವೆ.

    ಆಗಸ್ಟ್

    ಈ ತಿಂಗಳು ನಿಮಗೆ ಅನುಕೂಲಕರವಾಗಿರುತ್ತದೆ. ಹೊಸ ಗೃಹ ನಿರ್ಮಾಣ ಪ್ರಯತ್ನಗಳು ಫಲ ನೀಡುತ್ತವೆ. ಪ್ರಮುಖರ ಪರಿಚಯದಿಂದ ಅನುಕೂಲವಾಗಿರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ನಿರುದ್ಯೋಗ ಪ್ರಯತ್ನಗಳು ಫಲ ನೀಡುತ್ತವೆ. ಕೈಗೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ. ಧನ ಯೋಗವಿದೆ

    ಸೆಪ್ಟೆಂಬರ್

    ಈ ತಿಂಗಳು ಅನುಕೂಲಕರವಾಗಿರುತ್ತದೆ. ಹೊಸ ವಸ್ತ್ರ ಮತ್ತು ಆಭರಣಗಳನ್ನು ಖರೀದಿಸುತ್ತೀರಿ. ಪ್ರಮುಖ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಸಣ್ಣಪುಟ್ಟ ಜಗಳಗಳು ಉಂಟಾಗುತ್ತವೆ. ಆತುರದ ನಿರ್ಧಾರಗಳಿಂದ ನಷ್ಟ ಉಂಟಾಗುತ್ತದೆ. ಹೊಸ ಸಾಲಗಳು ಮಾಡಬೇಕಾಗುತ್ತದೆ.

    ಅಕ್ಟೋಬರ್

    ಈ ತಿಂಗಳು ಅನುಕೂಲಕರವಾಗಿರುವುದಿಲ್ಲ. ಆಪ್ತ ಸ್ನೇಹಿತರೊಂದಿಗೆ ವಿವಾದಗಳು, ಉದ್ಯೋಗದಲ್ಲಿ ಅಪವಾದಗಳು ಹೆಚ್ಚಾಗುತ್ತದೆ. ಕಳ್ಳತನದ ಭಯ. ಅನ್ಯರ ವಿಚಾರಗಳಲ್ಲಿ ಭಾಗಿಯಾಗಿ ತೊಂದರೆಗೆ ಸಿಲುಕುತ್ತೀರಿ. ಹೊಸ ವ್ಯವಹಾರದ ಆಲೋಚನೆಗಳು ಮಾಡುತ್ತೀರಿ.

    ನವೆಂಬರ್ 

    ಈ ತಿಂಗಳು ಮಿಶ್ರ ಫಲಿತಾಂಶಗಳನ್ನು ಹೊಂದಿರುತ್ತದೆ. ಅನಿರೀಕ್ಷಿತ ಖರ್ಚುಗಳಿರುತ್ತವೆ. ಹೊಸ ವಸ್ತ್ರ ಲಾಭವಿರುತ್ತದೆ. ಭೂಮಿ ಖರೀದಿಗೆ ಪ್ರಯತ್ನಗಳು ನಡೆಯುತ್ತವೆ. ಬಂಧುಗಳ ಸಹಕಾರ ದೊರೆಯುತ್ತದೆ. ವಾಹನ ಅಪಾಯದ ಸೂಚನೆಗಳಿವೆ. ಗೃಹನಿರ್ಮಾಣದಲ್ಲಿ ಅಡೆತಡೆಗಳು ಉಂಟಾಗುತ್ತವೆ.

    ಡಿಸೆಂಬರ್

    ಈ ತಿಂಗಳು ಅನುಕೂಲಕರವಾಗಿರುವುದಿಲ್ಲ. ಬೆಲೆಬಾಳುವ ವಸ್ತುಗಳೊಂದಿಗೆ ಜಾಗರೂಕರಾಗಿರಿ. ಕೌಟುಂಬಿಕ ವಿವಾದಗಳಿರುತ್ತವೆ. ಶುಭ ಕಾರ್ಯಗಳಿಗೆ ಅಡೆತಡೆಗಳಿರುತ್ತವೆ. ಸ್ನೇಹಿತರೊಂದಿಗೆ ವಿವಾದಗಳಿರುತ್ತವೆ . ಸ್ತ್ರೀ ಮೂಲಕ ಧನ ವ್ಯಯವಾಗುತ್ತದೆ. ದೂರ ಪ್ರಯಾಣಗಳಿರುತ್ತವೆ . ಆರೋಗ್ಯ ಸಮಸ್ಯೆಗಳಿರುತ್ತವೆ.

    ನಿತ್ಯವೂ ದಕ್ಷಿಣಾಮೂರ್ತಿ ಸ್ತೋತ್ರವನ್ನು ಪಠಿಸಬೇಕು. ಪ್ರತಿ ತಿಂಗಳು ಗುರುವಾರದಂದು ಶಿವನ ದೇವಸ್ಥಾನದಲ್ಲಿ ಅಭಿಷೇಕವನ್ನು ಮಾಡಿ. ಹಸುವಿಗೆ ಕಡಲೆಕಾಳು ದಾನ ನೀಡಿ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top