ಮುಖ್ಯ ಸುದ್ದಿ
ಮನಸ್ತಾಪ ಬಿಟ್ಟು ಒಂದಾಗಿ ಹೋಗೋಣ | ಒಗ್ಗಟ್ಟಿನ ಮಂತ್ರ ಜಪಿಸಿದ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್
CHITRADURGA NEWS | 19 MARCH 2024
ಚಿತ್ರದುರ್ಗ: ಲೋಕಸಭೆ ಚುನಾವಣೆ ಕಾವಿನ ಜತೆಗೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರ ಕಾರ್ಯ ಕೂಡ ಪ್ರಾರಂಭವಾಗಿದೆ. ಸೋತ ಜಾಗದಲ್ಲೇ ಪುನಃ ಗೆಲುವಿನ ನಗೆ ಬೀರಬೇಕು ಎಂದು ಛಲ ತೊಟ್ಟು ಅಖಾಡಕ್ಕೆ ಧುಮುಕಿದ್ದಾರೆ ಪತಿ–ಪತ್ನಿ.
ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ದಂಪತಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ದಿನದಿಂದ ಕ್ಷೇತ್ರ ವ್ಯಾಪ್ತಿಯ5 ಜಿಲ್ಲೆಗಳ 35 ತಾಲ್ಲೂಕುಗಳಲ್ಲಿ ಸಭೆ, ಪ್ರಚಾರ ನಡೆಸುತ್ತಿದ್ದಾರೆ. ಎಲ್ಲಿಯೂ ಚಿಕ್ಕ ಅಸಮಾಧಾನ, ಗೊಂದಲ ಉಂಟಾಗದಂತೆ ಎಚ್ಚರವಹಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: https://chitradurganews.com/code-of-conduct-vigilance-for-hatti-tippesan-fair/
ವಿಧಾನ ಪರಿಷತ್‌ನ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಸಮಿತಿ ವತಿಯಿಂದ ಹಿರಿಯೂರು ನಗರದ ಎ.ಕೃಷ್ಣಪ್ಪ ರೋಟರಿ ಭವನದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ‘ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ವಾತಾವರಣವಿದೆ. ಮನಸ್ತಾಪಗಳ ಮುಂದುವರಿಕೆ ಬೇಡ. ಎಲ್ಲರೂ ಒಟ್ಟಿಗೆ ಹೋಗೋಣ’ ಎಂದು ಮನವಿ ಮಾಡಿದ್ದಾರೆ.
ಕ್ಲಿಕ್ ಮಾಡಿ ಓದಿ: https://chitradurganews.com/plying-squad-to-prevent-illegal-excise-duty/
‘ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿದೆ. ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬುದನ್ನು ಎಲ್ಲರೂ ತಿಳಿಯಬೇಕು. ಲೋಕಸಭಾ ಚುನಾವಣೆ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಶ್ರಮಿಸಬೇಕು’ ಎಂದು ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಮಾತನಾಡಿ,‘ಕಾಂಗ್ರೆಸ್ ಸರ್ಕಾರದ ಪ್ರತಿಯೊಂದು ಸಾಧನೆಗಳನ್ನು ಜನರಿಗೆ ಮುಟ್ಟಿಸಬೇಕು. ಅಧಿಕಾರ, ಹಣ ಶಾಶ್ವತವಲ್ಲ, ಸೇವೆ ಮುಖ್ಯ’ ಎಂದು ಹೇಳಿದರು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಮಾತನಾಡಿ, ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ 5 ಜಿಲ್ಲೆಗಳ 35 ತಾಲ್ಲೂಕುಗಳಿದ್ದು, ಪಕ್ಷ ಮುಂಚಿತವಾಗಿ ಅಭ್ಯರ್ಥಿ ಘೋಷಿಸಿರುವುದು ಅನುಕೂಲವಾಗಿದೆ. ಗೆಲುವಿನ ವಾತವರಣವಿದೆ. ಆದರೂ ಕೊನೆ ಕ್ಷಣದವರೆಗೂ ನಮ್ಮ ಕೆಲಸ ಮಾಡಬೇಕು’ ಎಂದು ಹೇಳಿದರು.
ಕ್ಲಿಕ್ ಮಾಡಿ ಓದಿ: https://chitradurganews.com/farmers-hard-work-made-the-canal-clean/
ಮುಖಂಡರಾದ ಗೀತಾ ನಂದಿನಿಗೌಡ, ಅಮೃತೇಶ್ವರಸ್ವಾಮಿ, ಕೃಷ್ಣಮೂರ್ತಿ, ಖಾದಿ ರಮೇಶ್, ಈರಲಿಂಗೇಗೌಡ, ಜೆ.ಆರ್. ಸುಜಾತಾ, ಬ್ರಿಜೇಶ್ ಎಸ್. ಯಾದವ, ತಿಪ್ಪೇಸ್ವಾಮಿ, ಆರ್.ನಾಗೇಂದ್ರ ನಾಯ್ಕ, ಚಂದ್ರಾನಾಯ್ಕ, ಚಿಗಳಿಕಟ್ಟೆ ಕಾಂತರಾಜ್, ಜ್ಞಾನೇಶ್, ವಿ.ಶಿವಕುಮಾರ್, ರಜಿಯಾ ಸುಲ್ತಾನಾ, ಮದಲಮರಿಯಾ ಇದ್ದರು.