ಮುಖ್ಯ ಸುದ್ದಿ
FDA suspended: ಟೆಂಡರ್ ಪ್ರಕ್ರಿಯೆಯಲ್ಲಿ ಕರ್ತವ್ಯ ಲೋಪ | ಎಫ್‌ಡಿಎ ಅಮಾನತು

Published on
CHITRADURGA NEWS | 23 AUGUST 2024
ಚಿತ್ರದುರ್ಗ: ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದ ಪ್ರಥಮ ದರ್ಜೆ ಸಹಾಯಕಿ ಆಯೇಷಾ ಸಿದ್ದಿಖಾ ಅವರನ್ನು ಜಿಲ್ಲಾಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಅಕ್ಷರ ದಾಸೋಹ ಕಾರ್ಯಕ್ರಮ ಅನುಷ್ಠಾನ ಸಂಬಂಧ ಇಲಾಖೆ ಉಪಯೋಗಕ್ಕೆ ಬಾಡಿಗೆ ಆಧಾರದಲ್ಲಿ ಹೊರಮೂಲ ಸಂಸ್ಥೆಯಿಂದ ವಾಹನ ಸೇವೆ ಪಡೆಯಲು ದ್ವಿ–ಲಕೋಟೆಯಲ್ಲಿ ಟೆಂಡರ್ ಕರೆಯಲಾಗಿತ್ತು. ಟೆಂಡರ್ ಪ್ರಕ್ರಿಯೆ ವೇಳೆ ಆಯೇಷಾ ಸಿದ್ದಿಖಾ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ (ಕೆಟಿಪಿಪಿ) ಉಲ್ಲಂಘಿಸಿರುವುದು ಕಂಡು ಬಂದಿದೆ.
ಕ್ಲಿಕ್ ಮಾಡಿ ಓದಿ: ಟ್ರಾಫಿಕ್ ಸ್ನಿಗಲ್ ಸಮಸ್ಯೆಗೆ ಶೀಘ್ರ ಮುಕ್ತಿ | ಎಸ್ಪಿ ರಂಜಿತ್ ಕುಮಾರ್ ಬಂಡಾರು
ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ನೋಟೀಸ್ ಜಾರಿ ಮಾಡಿದ್ದರು. ಆದರೆ ನೋಟೀಸ್‌ಗೆ ನೀಡಿದ ಉತ್ತ ಸಮರ್ಪಕವಾಗಿಲ್ಲದ ಕಾರಣ ಶುಕ್ರವಾರ ಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.
Continue Reading
Related Topics:Auditor, CEO, Dereliction of Duty, FDA, process, Suspension, Tender, ಅಮಾನತು, ಎಫ್‌ಡಿಎ, ಕರ್ತವ್ಯ ಲೋಪ, ಟೆಂಡರ್, ಪ್ರಕ್ರಿಯೆ, ಲೆಕ್ಕಾಧಿಕಾರಿ, ಸಿಇಒ

Click to comment