Connect with us

    ಶ್ರೀರಾಮನ ಕೃಪೆಯಿಂದ ಬದಲಾಗಲಿದೆ ಅದೃಷ್ಟ | ಇನ್ಮುಂದೆ ಈ ರಾಶಿಯವರಿಗೆ ಎಲ್ಲವೂ ಶುಭ

    ಮುಖ್ಯ ಸುದ್ದಿ

    ಶ್ರೀರಾಮನ ಕೃಪೆಯಿಂದ ಬದಲಾಗಲಿದೆ ಅದೃಷ್ಟ | ಇನ್ಮುಂದೆ ಈ ರಾಶಿಯವರಿಗೆ ಎಲ್ಲವೂ ಶುಭ

    CHITRADURGA NEWS | 15 APRIL 2024
    ಚಿತ್ರದುರ್ಗ: ಇನ್ನೂ ಕೇವಲ ಮೂರೇ ದಿನ ಬಾಕಿ. ಶ್ರೀರಾಮನ ಕೃಪೆಯಿಂದ ನಿಮ್ಮ ಕನಸು ನನಸಾಗಿ, ಅದೃಷ್ಟದ ಬಾಗಿಲು ತೆರೆದು ಎಲ್ಲವೂ ಶುಭವಾಗಲಿದೆ. ಶ್ರೀ ರಾಮ ನವಮಿಯಿಂದಗುರುಗ್ರಹದ ನಕ್ಷತ್ರ ಬದಲಾವಣೆಯಾಗಲಿದೆ. ಇದರ ಪರಿಣಾಮ ಕೆಲವು ರಾಶಿಚಕ್ರ ಚಿಹ್ನೆಗಳ ಜನರಿಗೆ ಒಳ್ಳೆಯ ದಿನಗಳು ಬರಲಿವೆ. ಆರ್ಥಿಕ ಲಾಭ ಸಿಗಲಿದೆ.

    ಹಿಂದೂ ಪಂಚಾಂಗದ ಪ್ರಕಾರ ಏಪ್ರಿಲ್‌ 17 ರಂದು ಶ್ರೀ ರಾಮ ನವಮಿ ಆಚರಿಸಲಾಗುತ್ತದೆ. ಅದೇ ದಿನ ಚೈತ್ರ ನವರಾತ್ರಿಯೂ ಸಹ ಮುಕ್ತಾಯವಾಗಲಿದೆ. ಇದರೊಂದಿಗೆ ಪ್ರಮುಖ ಗ್ರಹಗಳ ಸ್ಥಾನಪಲ್ಲಟ ಕೂಡ ಆಗಲಿದೆ.

    ಹಿಂದೂಗಳು ಆಚರಿಸುವ ಹಬ್ಬಗಳಲ್ಲಿ ಶ್ರೀ ರಾಮ ನವಮಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಭಗವಾನ್‌ ರಾಮನು ಚೈತ್ರ ಮಾಸದ 9 ದಿನ ದಶರಥ ಮಹಾರಾಜನ ಹಿರಿಯ ಮಗನಾಗಿ ಅಯೋಧ್ಯೆಯಲ್ಲಿ ಜನಿಸಿದನು. ಆದ್ದರಿಂದಲೇ ಈ ದಿನ ಶ್ರೀರಾಮನ ಆರಾಧನೆಗೆ ಹೆಚ್ಚಿನ ಮಹತ್ವವಿದೆ. ಈ ದಿನ ಶ್ರೀರಾಮ ಮತ್ತು ಸೀತೆಯನ್ನು ಪೂಜಿಸಿದರೆ, ಅವರು ಎಲ್ಲಾ ದುಃಖಗಳಿಂದ ಮುಕ್ತಿ ಹೊಂದುತ್ತಾರೆ ಎಂಬ ನಂಬಿಕೆ ಇದೆ.

    ಕ್ಲಿಕ್ ಮಾಡಿ ಓದಿ: ಯುವಜನರು ತಪ್ಪದೇ ಮತ ಚಲಾಯಿಸಿ | ಜಿ.ಎನ್.ಮಲ್ಲಿಕಾರ್ಜುನ

    ಈ ಶುಭ ದಿನದಂದು ಗುರುವಿನ ನಕ್ಷತ್ರ ಕೂಡಾ ಬದಲಾಗಲಿದೆ. ಭರಣಿ ನಕ್ಷತ್ರದಲ್ಲಿ ಸಾಗುವ ಗುರುವು ಏಪ್ರಿಲ್‌ 17 ರಂದು ಕೃತ್ತಿಕಾ ನಕ್ಷತ್ರ ಪ್ರವೇಶಿಸಲಿದೆ. ಜೂನ್ 13 ರವರೆಗೆ ಗುರುವು ಕೃತಿಕಾ ನಕ್ಷತ್ರದಲ್ಲಿರುತ್ತಾನೆ.

    ಈ ಅವಧಿಯಲ್ಲಿ ಗುರುವು ಮೇಷದಿಂದ ವೃಷಭ ರಾಶಿಗೆ ಸಾಗುತ್ತಾನೆ. ಈ ಕಾರಣದಿಂದಾಗಿ, ಕೆಲವು ರಾಶಿಚಕ್ರ ಚಿಹ್ನೆಗಳ ಜನರು ಅದ್ಭುತಗಳನ್ನು ಕಾಣಲಿದ್ದಾರೆ.

    ಮೇಷ ರಾಶಿಯವರಿಗೆ ವಿವಿಧ ಮೂಲಗಳಿಂದ ಹಣದ ಹರಿವು ಹೆಚ್ಚಾಗಿ ಆರ್ಥಿಕ ಪ್ರಗತಿ ಕಾಣುತ್ತಾರೆ. ಮನೆಯಲ್ಲಿ ಧಾರ್ಮಿಕ ಕಾರ್ಯ, ವಸ್ತು ಸಂಪತ್ತು ವೃದ್ಧಿ, ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಪ್ರತಿ ಕೆಲಸದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯಿರಿ.

    ಕ್ಲಿಕ್ ಮಾಡಿ ಓದಿ: ಅಂಬೇಡ್ಕರ್ ಬಗ್ಗೆ ಲೇಖಕ ಅರುಣ್ ಜೋಳದಕೂಡ್ಲಿಗಿ ಮಾತುಗಳು…

    ಸಿಂಹ ರಾಶಿಯವರಿಗೆ ಅದೃಷ್ಟ ಹಿಂಬಾಲಿಸಲಿದೆ. ನಿಮ್ಮ ಎಲ್ಲಾ ಕನಸು ನನಸಾಗಲಿವೆ. ಕೈ ತುಂಬಾ ಸಂಬಳ ಬರುವ ಹೊಸ ಉದ್ಯೋಗ ನಿಮ್ಮನ್ನು ಅರಸಿ ಬರಲಿದೆ.

    ಗುರುವಿನ ಕೃಪೆಯಿಂದ ತುಲಾ ರಾಶಿಯವರ ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದೆ. ಸಂಪತ್ತು ಹೆಚ್ಚಿಸಿಕೊಳ್ಳಲು ಅವಕಾಶ ತೆರೆದುಕೊಳ್ಳಲಿದೆ. ಭೂಮಿ ಅಥವಾ ವಾಹನ ಖರೀದಿಸುವ ಸಾಧ್ಯತೆ ಹೆಚ್ಚಾಗಿದೆ.

    ವೃಶ್ಚಿಕ ರಾಶಿಯವರಿಗೆ ಹಣ ಗಳಿಸಲು ಹೊಸ ಅವಕಾಶಗಳು ಬರಲಿವೆ. ವೃತ್ತಿಯಲ್ಲಿ ಹೊಸ ಸಾಧನೆ ಮಾಡಲಿದ್ದೀರಿ. ಬಹುಕಾಲದಿಂದ ಬಾಕಿ ಉಳಿದಿದ್ದ ಹಣ ಕೈ ಸೇರಲಿದೆ. ಬೋನಸ್, ಬಡ್ತಿ ಸಿಗಲಿದೆ. ಸಾಮಾಜಿಕ ಮನ್ನಣೆ ಹೆಚ್ಚಾಗುತ್ತದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top